ರಿಯಲ್‌ ಮಿ P ಸೀರಿಸ್‌ನ ಮತ್ತೊಂದು ಮೊಬೈಲ್‌ ಭಾರತದ ಮಾರುಕಟ್ಟೆಗೆ, ಏನೆಲ್ಲ ಫೀಚಿರ್‌ ಇದೆ? ರೇಟ್‌ ಎಷ್ಟು?

ಮೊಬೈಲ್‌ ನ್ಯೂಸ್‌: ರಿಯಲ್‌ಮಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ P ಸರಣಿಯ ಮತ್ತೊಂದು ಮೊಬೈಲ್ ಫೋನ್‌ ಆನ್ನು ಬಿಡುಗಡೆ ಮಾಡಿದೆ. Realme P4R 5G ಅನ್ನು ಲಾಂಚ್‌ ಮಾಡಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಗೇಮಿಂಗ್ ಅನುಭವ ಮತ್ತು ಸುದೀರ್ಘ ಬ್ಯಾಟರಿ ಬ್ಯಾಕಪ್ ಬಯಸುವ ಗ್ರಾಹಕರನ್ನೆ ಗುರಿಯಾಗಿಸಿಕೊಂಡು ಈ ಫೋನ್ ವಿನ್ಯಾಸಗೊಳಿಸಲಾಗಿದೆ. 8,000mAh ಸಾಮರ್ಥ್ಯದ ಬ್ಯಾಟರಿ ಇದರ ವಿಶೇಷ. ಸಾಮಾನ್ಯ ಬಳಕೆಯಲ್ಲಿ ಈ ಫೋನ್ ಒಮ್ಮೆ ಚಾರ್ಜ್ ಮಾಡಿದರೆ ಸತತ ಮೂರು ದಿನಗಳ ಕಾಲ ಬರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರೊಂದಿಗೆ 45W ವೇಗದ ಚಾರ್ಜಿಂಗ್ ವ್ಯವಸ್ಥೆಯು ಇದೆ.

MOBILE-PHONE-NEWS-GRAPHICS-BY-SHIVAMOGGA-LIVE

ಡಿಸ್‌ಪ್ಲೇ ಸೈಸ್‌ ಎಷ್ಟು? ಕ್ಯಾಮರಾ ಹೇಗಿದೆ?

6.8 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ನೀಡಲಾಗಿದೆ. 144Hz ರಿಫ್ರೆಶ್ ರೇಟ್ ಹೊಂದಿದೆ. ಇದರಿಂದಾಗಿ ಮೊಬೈಲ್ ಸ್ಕ್ರೀನ್ ಚಲನೆ ಅತ್ಯಂತ ಸುಗಮವಾಗಿರಲಿದೆ. ಫೋನ್ ಬಿಸಿ ಆಗುವುದನ್ನು ತಡೆಯಲು ವಿಶೇಷ ಕೂಲಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ. ಫೋಟೊ, ವಿಡಿಯೋ ಕ್ಲಾರಿಟಿಗಾಗಿ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್‌ನ AI ಕ್ಯಾಮೆರಾ ಮತ್ತು ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ.

ಈ ಮೊಬೈಲ್‌ ರೇಟ್‌ ಎಷ್ಟು?

ಈ ಸ್ಮಾರ್ಟ್‌ಫೋನ್ ಒಟ್ಟು ಮೂರು ಆವೃತ್ತಿಗಳಲ್ಲಿ ಲಭ್ಯವಿದೆ. ಆರಂಭಿಕ ಮಾದರಿಯಾದ 4GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದ ಫೋನ್ ಬೆಲೆ ₹18,999 ಆಗಿದೆ. ಇನ್ನುಳಿದಂತೆ 6GB+128GB ಆವೃತ್ತಿಗೆ ₹20,999 ಹಾಗೂ 6GB+256GB ಸಾಮರ್ಥ್ಯದ ಪ್ರೀಮಿಯಂ ಆವೃತ್ತಿಗೆ ₹22,999 ನಿಗದಿಪಡಿಸಲಾಗಿದೆ. ಸಿಲ್ವರ್, ಲ್ಯಾವೆಂಡರ್ ಮತ್ತು ಟೈಟಾನಿಯಂ ಗ್ಲೇರ್ ಬಣ್ಣಗಳಲ್ಲಿ ಈ ಫೋನ್ ಗ್ರಾಹಕರಿಗೆ ದೊರೆಯಲಿದೆ. ಜೂನ್ 17 ರಿಂದ ಫ್ಲಿಪ್‌ಕಾರ್ಟ್ ಹಾಗೂ ರಿಯಲ್‌ಮಿ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾರಾಟ ಆರಂಭವಾಗಲಿದೆ ಎಂದು ರಿಯಲ್‌ಮಿ.ಕಾಂನಲ್ಲಿ ತಿಳಿಸಲಾಗಿದೆ.