ಶಿವಮೊಗ್ಗ ಜಿಲ್ಲೆಯಾದ್ಯಂತ ಸೈಕ್ಲೋನ್ ಮಳೆ, ಕೂಲ್ ಕೂಲ್ ವಾತಾವರಣ

Shimoga Rain General Image

SHIVAMOGGA LIVE NEWS | CYCLONE | 11 ಮೇ 2022 ಆಸಾನಿ ಚಂಡಮಾರುತದ ಪರಿಣಾಮ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಆಗುತ್ತಿದೆ. ಇನ್ನು ಮೂರ್ನಾಲ್ಕು ದಿನ ಮಳೆ ಸುರಿಯುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ಬೆಳಗ್ಗೆಯಿಂದಲೆ ಜಿಟಿಜಿಟಿ ಮಳೆ ಆರಂಭವಾಗಿದೆ. ಜಿಲ್ಲೆಯಾದ್ಯಂತ ಮಳೆ ಬೀಳುತ್ತಿದೆ. ಆಸಾನಿ ಚಂಡಮಾರುತದ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಪ್ರದೇಶ ಮತ್ತು ಉತ್ತರ ಒಳನಾಡಿನಲ್ಲಿ ಗಾಳಿ ಸಹಿತ ಮಳೆ ಆಗುವ ಸಂಭವವಿದೆ ಎಂದು ಹಮಾವಾನ ಇಲಾಖೆ … Read more

ಐದು ದಿನ ಪಾದಯಾತ್ರೆ ಮಾಡಿದರೂ ಭಾಷಣಕ್ಕೆ ಕರೆಯಲಿಲ್ಲ, ಫೋಟೊ ಹಾಕಲಿಲ್ಲ, ಬೆಂಬಲಿಗರು ಕೆಂಡಾಮಂಡಲ

Protest-in-favour-of-Kimmane-Rathnakar

SHIVAMOGGA LIVE NEWS | PROTEST| 10 ಮೇ 2022 ಬಿಜೆಪಿ ದುರಾಡಳಿತದ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಪಾದಯಾತ್ರೆ ಮಾಡಿದ್ದಾರೆ. ಆದರೆ ಇವತ್ತು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಕಿಮ್ಮನೆ ರತ್ನಾಕರ್ ಅವರಿಗೆ ಭಾಷಣಕ್ಕೆ ಅವಕಾಶ ನೀಡಲಿಲ್ಲ. ಫ್ಲೆಕ್ಸ್’ಗಳಲ್ಲಿಯು ಅವರ ಭಾವಚಿತ್ರ ಕಾಣಿಸಲಿಲ್ಲ. ಇದು ಅವರ ಬೆಂಬಲಿಗರನ್ನು ಕೆರಳಿಸಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಸತತ ಐದು ದಿನ 70 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ. ಇವತ್ತು ಅವರ ಪಾದಯಾತ್ರೆ ಶಿವಮೊಗ್ಗಕ್ಕೆ … Read more

ಮಾಜಿ ಸಚಿವ ಕಿಮ್ಮನೆ ರತ್ನಾಕರ್’ಗೆ ಮಾಜಿ ಸಿಎಂ ಸಿದ್ದರಾಮಯ್ಯ ಫೋನ್ ಕರೆ

Kimmane-Rathnakar-at-Janadwani-Protest

SHIVAMOGGA LIVE NEWS | PROTEST| 10 ಮೇ 2022 ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಇವತ್ತು ಶಿವಮೊಗ್ಗ ತಲುಪಿತು. ಐದು ದಿನ ನಿರಂತರ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜನಧ್ವನಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಮ್ಮನೆ ರತ್ನಾಕರ್ ಅವರಿಗೆ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ, ಪಿಎಸ್ಐ ನೇಮಕಾತಿ ಹಗರಣ, ಗೃಹ ಸಚಿವರ ಅಸಮರ್ಥತೆ ಖಂಡಿಸಿ … Read more

“ಬಿಜೆಪಿಗೂ ಕೇಸರಿಗೂ ಏನು ಸಂಬಂಧ? ಇನ್ಮುಂದೆ ಕೆಂಪು ಶಾಲು, ಟೋಪಿ ಹಾಕಲಿ”

DK-Shivakumar-Speech-in-Shimoga-city

SHIVAMOGGA LIVE NEWS | SAFFRON | 10 ಮೇ 2022 ಕೇಸರಿ ಶಾಂತಿಯ ಸಂಕೇತ. ಆದರೆ ಬಿಜೆಪಿಯವರು ಸದಾ ರಕ್ತ ಮತ್ತು ಹಿಂಸೆ ಮೇಲೆ ಆಸಕ್ತಿ ಹೊಂದಿದ್ದಾರೆ. ಆದ್ದರಿಂದ ಅವರು ಕೇಸರಿ ಟೋಪಿ ಮತ್ತು ಶಾಲು ಹಾಕುವ ಬದಲು, ಕೆಂಪು ಟೋಪಿ, ಶಾಲು ಧರಿಸಬೇಕು ಎಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಶಿವಮೊಗ್ಗದಲ್ಲಿ ಜನಧ್ವನಿ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇನೆ … Read more

ಸದ್ಯ ಸೂಳೆಬೈಲು ಶಾಂತ, ಹೇಗಿದೆ ಬಂದೋಬಸ್ತ್? ಇಲ್ಲಿ ಹೊಸ ಪೊಲೀಸ್ ಠಾಣೆ ಸ್ಥಾಪನೆಯಾಗುತ್ತಾ?

Car-Glass-break-at-Sulebailu-in-Shimoga-City

SHIVAMOGGA LIVE NEWS | CRIME | 10 ಮೇ 2022 ಶಿವಮೊಗ್ಗದ ಸೂಳೆಬೈಲು ಬಡಾವಣೆಯಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರೆದಿದೆ. ಮೂರು ದಿನದ ಅಂತರದಲ್ಲಿ ನಾಲ್ಕು ಕಾರುಗಳ ಗಾಜು ಒಡೆಯಲಾಗಿದೆ. ಇದರಿಂದ ನಗರದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗ ಭೀತಿ ಎದುರಾಗಿದೆ. ಹಾಗಾಗಿ ಬಡಾವಣೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಳ ಮಾಡಲಾಗಿದೆ. ಘಟನೆ 1 : ಮೇ 6ರಂದು ರಾತ್ರಿ ಶಿವಮೊಗ್ಗದಿಂದ ಮತ್ತೂರು ಗ್ರಾಮಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ರಾಡ್’ನಿಂದ ದಾಳಿ ಮಾಡಲಾಗಿತ್ತು. ಇದರಿಂದ ಸೂಳೆಬೈಲು ವ್ಯಾಪ್ತಿಯಲ್ಲಿ ಬಿಗುವಿನ … Read more

ಪ್ರತಿಭಟನಾ ಮೆರವಣಿಗೆ, ಶಿವಮೊಗ್ಗದಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ

raffic-Jam-due-to-DK-Shivakumar-rally

SHIVAMOGGA LIVE NEWS | TRAFFIC | 10 ಮೇ 2022 ಬಿಜೆಪಿ ಸರ್ಕಾರದ ದುರಾಡಳಿತ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಶಿವಮೊಗ್ಗದಲ್ಲಿ ಇವತ್ತು ಜನಧ್ವನಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಹಾಗಾಗಿ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಶಿವಮೊಗ್ಗ ನಗರದಲ್ಲಿ ಇವತ್ತು ಜನರು ಟ್ರಾಫಿಕ್ ಸಮಸ್ಯೆ ಅನುಭವಿಸಿದರು. ಅಶೋಕ ಸರ್ಕಲ್’ನಿಂದ ಅಮೀರ್ ಅಹಮದ್ ಸರ್ಕಲ್, ನೆಹರೂ ರಸ್ತೆ, ಗೋಪಿ ಸರ್ಕಲ್, ಬಾಲರಾಜ ಅರಸ್ ರಸ್ತೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು. ಮಧ್ಯಾಹ್ನದ … Read more

ಶಿವಮೊಗ್ಗದಲ್ಲಿ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ, ಹೇಗಿತ್ತು ಮೆರವಣಿಗೆ?

DK-Shivakumar-in-Shimoga-JanaDhwani-Rally

SHIVAMOGGA LIVE NEWS | RALLY | 10 ಮೇ 2022 ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ದುರಾಡಳಿತವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಜನಧ್ವನಿ ಪ್ರತಿಭಟನೆ ಮೆರವಣಿಗೆ ಆಯೋಜಿಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಶಿವಮೊಗ್ಗದ ಅಶೋಕ ಸರ್ಕಲ್’ನಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಶೋಕ ಸರ್ಕಲ್’ನಿಂದ ಬಾಲರಾಜ ಅರಸ್ ರಸ್ತೆವರೆಗೂ ಮೆರವಣಿಗೆ ನಡೆಯಿತು. ಪಾದಯಾತ್ರೆ ಮಾಡಿದ ಪ್ರಮುಖರು ಬಿಜೆಪಿ ಸರ್ಕಾರದ ದುರಾಡಳಿತವನ್ನು ಖಂಡಿಸಿ ಅಶೋಕ ಸರ್ಕಲ್’ನಿಂದ ಪಾದಯಾತ್ರೆ ನಡೆಸಲಾಯಿತು. … Read more

ಶಿವಮೊಗ್ಗದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ, ಇಲ್ಲಿದೆ ಫೋಟೊ ಆಲ್ಬಂ

DK-Shivakumar-in-Congress-Rally-in-Shimoga-city

SHIVAMOGGA LIVE NEWS | CONGRESS | 10 ಮೇ 2022 ಕಾಂಗ್ರೆಸ್ ಪಕ್ಷದ ವತಿಯಿಂದ ಶಿವಮೊಗ್ಗದಲ್ಲಿ ಇವತ್ತು ಜನಧ್ವನಿ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಆಯೋಜಿಸಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಅದರ ಫೋಟೊ ಆಲ್ಬಂ ಇಲ್ಲಿದೆ. ಇದನ್ನೂ ಓದಿ –  ‘ವಿಧಾನಸಭೆ ಚುನಾವಣೆಗೆ ನಾನೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ’

‘ಪಿಎಸ್ಐ ಹಗರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಸಾಗರಕ್ಕೆ ಬಂದಿದ್ರು, ಬಿಜೆಪಿ ಮುಖಂಡ ರಕ್ಷಣೆ ನೀಡಿದ್ದರು’

Mallikarjuna-Hakre-Press-Meet-in-Sagara

SHIVAMOGGA LIVE NEWS | SCAM | 10 ಮೇ 2022 ಪಿಎಸ್‌ಐ ಹಗರಣದ ಕಿಂಗ್‌ಪಿನ್ ಎನ್ನಲಾದ ದಿವ್ಯಾ ಹಾಗರಗಿ ಸಾಗರಕ್ಕೆ ಬಂದು ಬಿಜೆಪಿ ಪ್ರಮುಖ ನಾಯಕರೊಬ್ಬರನ್ನು ಭೇಟಿ ಮಾಡಿದ್ದರು. ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಸಾಗರ ಸೇರಿದಂತೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲೂ ತನಿಖೆ ನಡೆಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಹಕ್ರೆ ಅವರು, ದಿವ್ಯಾ ಹಾಗರಗಿ ತೀರ್ಥಹಳ್ಳಿಯಲ್ಲಿ ಎರಡು ದಿನ ಇದ್ದು ಗೃಹಸಚಿವ ಆರಗ ಜ್ಞಾನೇಂದ್ರ … Read more

‘ವಿಧಾನಸಭೆ ಚುನಾವಣೆಗೆ ನಾನೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ’

Yogendra-Guruji-visit-KG-Prashanth-House-in-Sagara

SHIVAMOGGA LIVE NEWS | CANDIDATE | 10 ಮೇ 2022 ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಂಸದ ಕೆ.ಜಿ.ಶಿವಪ್ಪ ಅವರ ಪುತ್ರ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಪ್ರಶಾಂತ್ ಹೇಳಿದರು. ಜೋಸೆಫ್ ನಗರದ ನಿವಾಸಕ್ಕೆ ಭೇಟಿ ನೀಡಿದ್ದ ಸಾರಗನಜಡ್ಡು ಶ್ರೀ ಕಾರ್ತಿಕೇಯ ಪೀಠದ ಯೋಗೇಂದ್ರ ಶ್ರೀಗಳನ್ನು ಸನ್ಮಾನಿಸಿ ಮಾತನಾಡಿದ ಪ್ರಶಾಂತ್ ಅವರು, ಅನೇಕ ಸಾಮಾಜಿಕ ಕೆಲಸಗಳಲ್ಲಿ ನಾನು ತೊಡಗಿಸಿಕೊಂಡಿದ್ದೇನೆ. ರಾಜಕೀಯ ಸ್ಥಾನಮಾನ … Read more