ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಶಾಸಕ ವಿಜಯೇಂದ್ರ ದಿಢೀರ್‌ ಭೇಟಿ, ಪರಿಶೀಲನೆ

MLA-BY-Vijayendra-visit-Shikaripura-Hopital.

SHIVAMOGGA LIVE NEWS | 20 JUNE 2024 SHIKARIPURA : ಸರ್ಕಾರಿ ಆಸ್ಪತ್ರೆಗೆ (Hospital) ಶಾಸಕ ಬಿ.ವೈ.ವಿಜಯೇಂದ್ರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಸೊರಬ, ಹಿರೇಕೆರೂರು, ಹೊನ್ನಾಳಿ, ನ್ಯಾಮತಿ ಸೇರಿ ವಿವಿಧ ತಾಲೂಕುಗಳಿಂದ ರೋಗಿಗಳು ಬರುತ್ತಾರೆ. ಇಲ್ಲಿ ಉತ್ತಮ ವೈದ್ಯರಿದ್ದಾರೆ. ಆದರೆ ಅದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ವೈದ್ಯರು ಸೂಕ್ತವಾಗಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಕೊರತೆ ಇಲ್ಲ. ಎಕ್ಸ್-ರೇ, ಸ್ಕ್ಯಾನಿಂಗ್ ಸೇರಿ ಚಿಕಿತ್ಸೆಗೆ ಪೂರಕವಾದ ಯಾವುದೇ … Read more

ತೀರ್ಥಹಳ್ಳಿಯಲ್ಲಿ ವಿಷ ಸೇವಿಸಿ ಯುವಕ ಆತ್ಮಹತ್ಯೆ

Thirthahalli-Police-Station

SHIVAMOGGA LIVE NEWS | 20 JUNE 2024 THIRTHAHALLI : ಬೆಟ್ಟಮಕ್ಕಿ ಬಡಾವಣೆ ನಿವಾಸಿ ವಿಖ್ಯಾತ್ (35) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ವ್ಯವಹಾರ ಮಾಡಿಕೊಂಡಿದ್ದ ವಿಖ್ಯಾತ್‌ ಕೆಲ ವರ್ಷಗಳಿಂದ ಸಂಬಂಧಿಯೊಂದಿಗೆ ವಾಸವಾಗಿದ್ದ. ತೀರ್ಥಹಳ್ಳಿ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗದ ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆ ಪರಿಶೀಲನೆ, ಏನೆಲ್ಲ ಸೂಚನೆ ನೀಡಿದ್ರು ಸಂಸದ?

ಶಿವಮೊಗ್ಗದ ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆ ಪರಿಶೀಲನೆ, ಏನೆಲ್ಲ ಸೂಚನೆ ನೀಡಿದ್ರು ಸಂಸದ?

BY-Raghavendra-Visit-Savalanga-road-bridge

SHIVAMOGGA LIVE NEWS | 20 JUNE 2024 SHIMOGA : ಸವಳಂಗ ರಸ್ತೆ ಮೇಲ್ಸೇತುವೆಯ (Bridge) ಸರ್ವಿಸ್ ರಸ್ತೆ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಮತ್ತು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಪರಿಶೀಲಿಸಿದರು. ಮೇಲ್ಸೇತುವೆ ಕಾಮಗಾರಿ ಹಾಗೂ ಸರ್ವಿಸ್ ರಸ್ತೆಯಲ್ಲಿನ ಕಾಮಗಾರಿಗಳಲ್ಲಿ ಕೆಲ ಲೋ‍ಪಗಳಿವೆ ಎಂದು ನಿವಾಸಿಗಳಿಂದ ದೂರು ಬಂದ ಹಿನ್ನೆಲೆ ಪರಿಶೀಲಿಸಿದರು. ಮಳೆ ನೀರು ಸರಾಗವಾಗಿ ಹೋಗಲು ಸರ್ವಿಸ್ ರಸ್ತೆಯ ಎರಡು ಬದಿ ಮತ್ತು ಮೇಲ್ಸೇತುವೆಯಿಂದ ಕೆಳಗೆ ಬೀಳುವ ಮಳೆ ನೀರನ್ನು ತಡೆದು ಇಂಗಿಸಲು, ಅಂಡರ್‌ಪಾಸ್‌ನಲ್ಲಿನ … Read more

ಶಿವಮೊಗ್ಗ ಫುಡ್‌ ಕೋರ್ಟ್‌ ಮೇಲೆ ದಾಳಿ, ಹೊಟೇಲ್‌ ಮಾಲೀಕರಿಗೆ ನೊಟೀಸ್‌, ಯಾಕೆ?

fssai-Officers-raid-on-Food-court-in-Shimoga

SHIVAMOGGA LIVE NEWS | 20 JUNE 2024 SHIMOGA : ನಗರದ ಮಾಂಸಹಾರಿ ಫುಡ್‌ ಕೋರ್ಟ್‌ (Food Court) ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿದರು. ಮಳಿಗಗಳಲ್ಲಿ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟ ಪರಿಶೀಲಿಸಿದರು. ಹಲವು ಮಳಿಗೆಗಳಿಗೆ ನೊಟೀಸ್‌ ಜಾರಿ ಮಾಡಿದ್ದಾರೆ. ಗೋಪಿ ಸರ್ಕಲ್‌ ಸಮೀಪದಲ್ಲಿರುವ ಮಾಂಸಹಾರ ಫುಡ್‌ ಕೋರ್ಟ್‌ ಮೇಲೆ ದಳಿ ನಡೆಸಲಾಗಿದೆ. ಈ ಸಂದರ್ಭ ಸ್ವಚ್ಛತೆ ಕಾಪಾಡದಿರುವುದು, ಆರೋಗ್ಯಕ್ಕೆ ಹಾನಿಕಾರಕ ಬಣ್ಣವನ್ನು ಆಹಾರಕ್ಕೆ ಬಳಕೆ ಮಾಡಿರುವುದು … Read more

ತಹಶೀಲ್ದಾರ್‌ ಕೊಠಡಿ ಬಾಗಿಲಲ್ಲಿ ಕುಳಿತು ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನೆ, ಕಾರಣವೇನು?

MLA-Araga-Jnanendra-Protest-in-Tahasildhar-Office

SHIVAMOGGA LIVE NEWS | 20 JUNE 2024 THIRTHAHALLI : ತಾಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ ತಹಶೀಲ್ದಾರ್‌ ಕೊಠಡಿ ಬಾಗಿಲಲ್ಲಿ ಕುಳಿತು ಪ್ರತಿಭಟನೆ (Protest) ನಡೆಸಿದರು. ಜಿಲ್ಲಾಧಿಕಾರಿಗೆ ಕರೆ ಮಾಡಿ ತಾಲೂಕು ಕಚೇರಿ ಆಡಳಿತ ಸುಧಾರಣೆ ಮಾಡ್ತೀರೋ ಇಲ್ಲವೋ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರಗ ಆಕ್ರೋಶಕ್ಕೆ ಕಾರಣವೇನು? ‘ಇಂಗ್ಲಿಷ್ ಭಾಷೆಯಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲು ದಲಿತ ಮಹಿಳೆಯೊಬ್ಬರು 4 ತಿಂಗಳಿನಿಂದ ಕಚೇರಿಗೆ ಬರುತ್ತಿದ್ದಾರೆ. ಇನ್ನೂ ಪ್ರಮಾಣ ಪತ್ರ ಸಿಕ್ಕಿಲ್ಲ. … Read more

ತೆಪ್ಪ ಮುಳುಗಿ ಭದ್ರಾ ಹಿನ್ನೀರಿನಲ್ಲಿ ಶಿವಮೊಗ್ಗದ ಮೂವರು ಯುವಕರು ನಾಪತ್ತೆ

bhadra-back-water-Shimoga-Vidya-nagara-youths-drown

SHIVAMOGGA LIVE NEWS | 20 JUNE 2024 NR PURA : ಭದ್ರಾ ಹಿನ್ನೀರಿನಲ್ಲಿ (Backwater) ಮುಳುಗಿ ಶಿವಮೊಗ್ಗದ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್.‌ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಶಿವಮೊಗ್ಗ ವಿದ್ಯಾನಗರದವರು ಎನ್ನಲಾದ ಆದಿಲ್‌, ಸಾಜಿದ್‌, ಅಫ್ದಾ ಖಾನ್‌ ನಾಪತ್ತೆಯಾದವರು. ಶಿವಮೊಗ್ಗ ವಿದ್ಯಾನಗರದ ನಾಲ್ವರು ಯುವಕರು ಭದ್ರಾ ಹಿನ್ನೀರಿಗೆ ಬಂದಿದ್ದರು. ಮೂವರು ಯುವಕರು ಉಕ್ಕಡದಲ್ಲಿ (ಮೀನು ಹಿಡಿಯಲು ಬಳಸುವ ಸಣ್ಣ ದೋಣಿ) ಭದ್ರಾ ಹಿನ್ನೀರಿನಲ್ಲಿ ತೆರಳಿದ್ದರು. ಉಕ್ಕಡ … Read more

ಶಿವಮೊಗ್ಗದಲ್ಲಿ ಇವತ್ತೂ ಬಿಸಿಲು ಜೋರು, ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ರಿಪೋರ್ಟ್

WEATHER-REPORT-SHIMOGA-

SHIVAMOGGA LIVE NEWS | 20 JUNE 2024 WEATHER REPORT : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕ್ಷೀಣಿಸಿದೆ. ಪುನಃ ಬೇಸಿಗೆಯಂತಹ ಬಿಸಿಲು ಆವರಿಸಿದೆ. ಶಿವಮೊಗ್ಗದಲ್ಲಿ ಇವತ್ತು ಗರಿಷ್ಠ 31 ಡಿಗ್ರಿ, ಕನಿಷ್ಠ 20 ಡಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಿದೆ. ಬೆಳಗ್ಗೆ 8ಕ್ಕೆ 25.4 ಡಿಗ್ರಿ, ಬೆಳಗ್ಗೆ 10ಕ್ಕೆ 28.3 ಡಿಗ್ರಿ, ಮಧ್ಯಾಹ್ನ 12ಕ್ಕೆ 30.5 ಡಿಗ್ರಿ, ಮಧ್ಯಾಹ್ನ 2ಕ್ಕೆ 29.7 ಡಿಗ್ರಿ, ಸಂಜೆ 4ಕ್ಕೆ28.5 ಡಿಗ್ರಿ, ಸಂಜೆ 6ಕ್ಕೆ … Read more