ಶಿವಮೊಗ್ಗ ನಗರ ಜಗಮಗ, ಎಲ್ಲೆಲ್ಲಿ ಹೇಗಿದೆ ವಿದ್ಯುತ್ ದೀಪಾಲಂಕಾರ?

Shimoga-city-lightings-during-dasara

SHIMOGA | ಶಿವಮೊಗ್ಗ ದಸರಾ ಅಂಗವಾಗಿ ನಗರ ಕಂಗೊಳಿಸುತ್ತಿದೆ. ಪ್ರಮುಖ ರಸ್ತೆಗಳು, ಕಚೇರಿಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ (LIGHTING) ಮಾಡಲಾಗಿದೆ. ವಿಜಯ ದಶಮಿ ಅಂಗವಾಗಿ ಶಿವಮೊಗ್ಗ ನಗರದಾದ್ಯಂತ ವಿವಿಧ ಬಗೆಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ (LIGHTING) ಮಾಡಲಾಗಿದೆ. ಇದರಿಂದ ಶಿವಮೊಗ್ಗ ನಗರ ಜಗಮಗವೆನ್ನುತ್ತಿದೆ. ನಗರದ ಬಿ.ಹೆಚ್.ರಸ್ತೆ, ನೆಹರೂ ರೋಡ್ ಸೇರಿ ಜಂಬೂ ಸವಾರಿ ಸಾಗುವ ಮಾರ್ಗದುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ತುಂಗಾ ನದಿಯ ಸೇತುವೆಗಳು, ಶಿವಪ್ಪನಾಯಕ ಪ್ರತಿಮೆ, ಅಮೀರ್ ಅಹಮದ್ ಸರ್ಕಲ್ ನಲ್ಲಿಯು ವಿದ್ಯುತ್ ದೀಪಾಲಂಕಾರ … Read more

ಇನ್ಷುರೆನ್ಸ್ ಕಚೇರಿಯಲ್ಲಿ ವಿಮೆಗಾಗಿ ಕೈ ಕೈ ಮಿಲಾಯಿಸಿದರು, ದೂರು, ಪ್ರತಿ ದೂರು ದಾಖಲು

Doddapete-Police-Station.

SHIMOGA | ಕಾರಿನ ಇನ್ಷುರೆನ್ಷ್ (CAR INSURANCE) ಕ್ಲೇಮ್ ವಿಚಾರದಲ್ಲಿ ಇನ್ಷುರೆನ್ಸ್ ಕಂಪನಿಯ ಶಿವಮೊಗ್ಗ ಕಚೇರಿಯಲ್ಲಿ ಗಲಾಟೆಯಾಗಿದೆ. ಈ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ. ದುರ್ಗಿಗುಡಿಯಲ್ಲಿರುವ ಇನ್ಷುರೆನ್ಸ್ ಕಂಪನಿಯ ಕಚೇರಿಯಲ್ಲಿ ಘಟನೆ ಸಂಭವಿಸಿದೆ. ಇನ್ಷುರೆನ್ಸ್ ಕ್ಲೇಮ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅದರೆ ಇದೆ ವಿಚಾರಕ್ಕೆ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಕಾರಿನ ಕಡೆಯವರು ಆರೋಪಿಸಿದ್ದಾರೆ. ಏನಿದು ಪ್ರಕರಣ? (CAR INSURANCE) ಸೆ.27ರಂದು ಕಾರು ಅಪಘಾತವಾಗಿ ಹಾನಿ … Read more

ಶಿವಮೊಗ್ಗದಲ್ಲಿ ವೈಭವದ ತುಂಗಾ ಆರತಿ, ಹೇಗಿತ್ತು ಪೂಜೆ? ಫೋಟೊ ನ್ಯೂಸ್

tunga-arathi-in-Shimoga-dasara

SHIMOGA | ಶಿವಮೊಗ್ಗ ದಸರಾ ಅಂಗವಾಗಿ ಶ್ರದ್ಧಾ ಭಕ್ತಿಯಿಂದ ತುಂಗಾ ಆರತಿ (TUNGA ARATHI) ನೆರವೇರಿಸಲಾಯಿತು. ತುಂಗಾ ನದಿ ದಂಡೆ ಮೇಲೆ ಮಂತ್ರ ಘೋಷಗಳೊಂದಿಗೆ ತುಂಗೆಗೆ ಆರತಿ ಬೆಳಗಲಾಯಿತು. ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪದ ಮೇಲೆ ತುಂಗಾ ಆರತಿ ನೆರವೇರಿಸಲಾಯಿತು. ದೊಡ್ಡ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಆರತಿ ಬೆಳಗಿ, ನಮಿಸಲಾಯಿತು. ಮಂಟಪದ ಮೇಲೆ ಋತ್ವಿಜರಿಂದ ಪೂಜೆ (TUNGA ARATHI) ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಸರ ದಸರಾ ಅಂಗವಾಗಿ ತುಂಗಾ ಆರತಿ ಆಯೋಜಿಸಲಾಗಿತ್ತು. … Read more