ತುಂಗಾ ನಾಲೆಗಳಲ್ಲಿ ನೀರು ಹರಿಸುವ ದಿನಾಂಕ ಪ್ರಕಟ, ಯಾವ ನಾಲೆಯಲ್ಲಿ ಯಾವಾಗ ನೀರು ಹರಿಸಲಾಗುತ್ತೆ?

tunga-dam-river.

ಶಿವಮೊಗ್ಗ: ಮುಂಗಾರು ಬೆಳೆಗೆ ತುಂಗಾ ಎಡ ಮತ್ತು ಬಲ ದಂಡೆ ನಾಲೆಗಳಿಗೆ (Canal) ನೀರು ಹರಿಸಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮದ ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಡದಂಡೆ ನಾಲೆಯಲ್ಲಿ ಜುಲೈ 12ರಿಂದ ಮತ್ತು ಬಲದಂಡೆ ನಾಲೆಯಲ್ಲಿ ಜುಲೈ 15ರಿಂದ ನೀರು ಹರಿಸಲಾಗುತ್ತದೆ. ಅಚ್ಚುಕಟ್ಟು ರೈತರು ಹಾಗೂ ಸಾರ್ವಜನಿಕರು, ಜನ, ಜಾನುವಾರುಗಳೊಂದಿಗೆ ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ಯಾವುದೇ ಚಟುವಟಿಕೆ ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಇದನ್ನೂ ಓದಿ » ‘ಮಸೀದಿಗಳಲ್ಲಿ … Read more

ನಿಲ್ದಾಣದಲ್ಲಿಯೇ ಸಿಟಿ ಬಸ್‌ ಕಂಡಕ್ಟರ್‌ಗಳ ಮಧ್ಯೆ ಕಿರಿಕ್‌, ಕೈ ಕೈ ಮಿಲಾಯಿಸಿದ ನಿರ್ವಾಹಕರು

Crime-News-General-Image

ಶಿವಮೊಗ್ಗ: ಸಿಟಿ ಬಸ್‌ (City Bus) ಕಂಡಕ್ಟರ್‌ ಒಬ್ಬರ ಮೇಲೆ ಮತ್ತೊಂದು ಬಸ್ಸಿನ ಕಂಡಕ್ಟರ್‌ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗೋಪಾಳದ ಕೊನೆ ಬಸ್‌ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಎಸ್‌.ಬಿ.ಎಂ. ಸಿಟಿ ಬಸ್ಸಿನ ಕಂಡಕ್ಟರ್‌ ರಾಘವೇಂದ್ರ ಎಂಬುವವರ ಮೇಲೆ ಹಲ್ಲೆಯಾಗಿದೆ. ಇದನ್ನೂ ಓದಿ » ದೆವ್ವ ಬಿಡಿಸೋದಾಗಿ ಕೋಲಲ್ಲಿ ಹೊಡೆದು ಹಿಂಸೆ, ನೀರಿಗಾಗಿ ಅಂಗಲಾಚುತ್ತ ಪ್ರಾಣ ಬಿಟ್ಟ ಮಹಿಳೆ, ವಿಡಿಯೋ ವೈರಲ್‌ ನಿಲ್ದಾಣದಿಂದ ಬಸ್‌ ತಡವಾಗಿ ಹೊರಟಿದೆ ಎಂದು ಹಿಂದಿನ ಬಸ್ಸಿನ ಕಂಡಕ್ಟರ್‌ ಆರೋಪಿಸಿದ್ದಾರೆ. … Read more

ಬೈಕ್‌ನಲ್ಲಿ ಬಂದು ಆಟೋ ಅಡಗಟ್ಟಿದ ದುಷ್ಕರ್ಮಿಗಳು, ಹಿಂಬದಿ ಕುಳಿತಿದ್ದ ವ್ಯಕ್ತಿ ಬಳಿ ಇದ್ದ ಬ್ಯಾಗ್‌ ಕಸಿದು ಪರಾರಿ

Police-Van-Jeep-at-Shimoga-Nehru-Road

ಶಿವಮೊಗ್ಗ: ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಲಿಸುತ್ತಿದ್ದ ಆಟೋವನ್ನು (Auto) ಅಡ್ಡಗಟ್ಟಿ ಹಿಂಬದಿ ಕುಳಿತಿದ್ದ ವ್ಯಕ್ತಿ ಬಳಿ ಇದ್ದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ಬ್ಯಾಗ್‌ನಲ್ಲಿ ಎರೆಡು ಲಕ್ಷ ರೂ. ಹಣವಿತ್ತು ಎಂದು ಆರೋಪಿಸಲಾಗಿದೆ. ನಗರದ ಕೆ.ಆರ್‌.ಪುರಂನಲ್ಲಿ ಘಟನೆ ಸಂಭವಿಸಿದೆ. ಆಟೋ ಚಾಲಕ ಅಲ್ಲಾಭಕ್ಷ್‌ ಎಂಬುವವರು ದೂರು ನೀಡಿದ್ದಾರೆ. ಹೇಗಾಯ್ತು ಘಟನೆ? ಏನಿದು ಹಣ? ನಗರದ ವಿವಿಧ ಆಟೋ ಚಾಲಕರು ತುರ್ತು ಸಂದರ್ಭದಲ್ಲಿ ನೆರವಿಗೆ ಫಂಡ್‌ ರಚಿಸಿಕೊಂಡಿದ್ದಾರೆ. ಅಲ್ಲಾಭಕ್ಷ್‌ ಅವರಿಗೆ ಅದರ ಉಸ್ತುವಾರಿ ವಹಿಸಲಾಗಿದೆ. ಜುಲೈ 5ರಂದು ಫಂಡ್‌ … Read more

ಅಡಿಕೆ ಧಾರಣೆ | 8 ಜುಲೈ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate).‌ ಶಿವಮೊಗ್ಗ ಮಾರುಕಟ್ಟೆ ಗೊರಬಲು 20009 30511 ಬೆಟ್ಟೆ 46069 59509 ರಾಶಿ 40089 57599 ಸರಕು 49140 88796 ಇದನ್ನೂ ಓದಿ » ಶಿವಮೊಗ್ಗ ರಂಗಾಯಣಕ್ಕೆ ತಂತ್ರಜ್ಞರು, ಕಲಾವಿದರ ನೇಮಕಾತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ ರಂಗಾಯಣಕ್ಕೆ ತಂತ್ರಜ್ಞರು, ಕಲಾವಿದರ ನೇಮಕಾತಿಗೆ ಅರ್ಜಿ ಆಹ್ವಾನ

Shimoga-Rangayana-Kannada-Samskruti-Bhavana

ಶಿವಮೊಗ್ಗ: ಶಿವಮೊಗ್ಗ ರಂಗಾಯಣವು (rangayana) ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಮೂರು ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ಗೌರವ ಸಂಭಾವನೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಿದ್ದು, ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ. ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ತಂತ್ರಜ್ಞರು ಮತ್ತು ಕಲಾವಿದರು ಆಯಾ ರಂಗಾಯಣದ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ. ಆಸಕ್ತರು ನಿಗದಿತ ನಮೂನೆಯ ಅರ್ಜಿಯನ್ನು ಶಿವಮೊಗ್ಗ ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ ಇವರಿಂದ … Read more

ಹೊಸನಗರದ ಯಡೂರು, ಚಕ್ರಾ ಭಾಗದಲ್ಲಿ ಉತ್ತಮ ಮಳೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?

Maani-Dam-in-Hosanagara-Taluk

ಹೊಸನಗರ: ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ತಾಲೂಕಿನಲ್ಲಿ 37.60 ಮಿ.ಮೀ. ಮಳೆಯಾಗಿದೆ. ಯಡೂರು, ಚಕ್ರಾ ಭಾಗದಲ್ಲಿ ನೂರು ಮಿ.ಮೀ.ಗಿಂತಲು ಹೆಚ್ಚಿನ ಪ್ರಮಾಣದ ಮಳೆಯಾಗಿದೆ. (Rainfall Report) ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಹೊಸನಗರ ತಾಲೂಕಿನ ಮಾನಿ ವ್ಯಾಪ್ತಿಯಲ್ಲಿ 83 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 122 ಮಿ.ಮೀ, ಹುಲಿಕಲ್‌ನಲ್ಲಿ 80 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 78 ಮಿ.ಮೀ., ಚಕ್ರಾ ವ್ಯಾಪ್ತಿಯಲ್ಲಿ 115 ಮಿ.ಮೀ., ಸಾವೇಹಕ್ಲು ವ್ಯಾಪ್ತಿಯಲ್ಲಿ 70 ಮಿ.ಮೀ. ಮಳೆಯಾಗಿದೆ. ಜಲಾಶಯಗಳ ಒಳ ಹರಿವು ಏರಿಕೆ ನಿರಂತರ ಮಳೆಗೆ … Read more

ಭದ್ರಾವತಿ ಆಕಾಶವಾಣಿಯಿಂದ ಇಂದು ಸಂಜೆ ಹಲೋ ಕಿಸಾನ್‌ವಾಣಿ ನೇರ ಫೋನ್‌ ಇನ್‌ ಕಾರ್ಯಕ್ರಮ

111023-Bhadravathi-Radio-FM-Radio.webp

ಶಿವಮೊಗ್ಗ: ಆಕಾಶವಾಣಿ ಭದ್ರಾವತಿಯಿಂದ ಜುಲೈ 8 ರಂದು ಸಂಜೆ 6.51 ರಿಂದ 7.30ರವರೆಗೆ ‘ಹಲೋ ಕಿಸಾನ್‌ವಾಣಿ’ ನೇರ ಫೋನ್ ಇನ್ (Phone In) ಕಾರ್ಯಕ್ರಮ ಪ್ರಸಾರವಾಗಲಿದೆ. ಮಣ್ಣಿನ ಆರೋಗ್ಯ ವಿಷಯದ ಬಗ್ಗೆ ಈ ಫೋನ್ ಇನ್ ನೇರ ಪ್ರಸಾರದಲ್ಲಿ ಮಾಹಿತಿ ನೀಡಲಾಗುತ್ತದೆ. ಶಿವಮೊಗ್ಗ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಆರ್.ಮಮತಾ ಪಾಲ್ಗೊಳ್ಳಲಿದ್ದಾರೆ ಎಂದು ಭದ್ರಾವತಿ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೂರವಾಣಿ ಸಂಖ್ಯೆ: 08282-270282/ 270283, ವಾಟ್ಸ್‌ಆ್ಯಪ್‌ ಸಂದೇಶ ಸಂಖ್ಯೆ: 9481572600. … Read more

‘ಮಸೀದಿಗಳಲ್ಲಿ ಆಜಾನ್‌ ಕೂಗುವ ಬದಲು ಮೊಬೈಲ್‌ ಆ್ಯಪ್‌ಗಳನ್ನು ಬಳಸಿʼ

KS-Eshwarappa-Press-meet-in-Shimoga

ಶಿವಮೊಗ್ಗ: ಮಸೀದಿಗಳಲ್ಲಿ ಆಜಾನ್ (Azan) ಕೂಗುವುದರಿಂದ ಶಬ್ಧಮಾಲಿನ್ಯ ಉಂಟಾಗುತ್ತಿದೆ. ಹಾಗಾಗಿ ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಹಲವೆಡೆ ಆಜಾನ್‌ ಕೂಗುವುದನ್ನು ನಿಷೇಧಿಸಲಾಗಿದೆ. ಮೊಬೈಲ್‌ ಆ್ಯಪ್‌ಗಳನ್ನು ಬಳಸಿ ಆಜಾನ್‌ ಕೂಗುವಂತೆ ಮಸೀದಿಗಳಿಗೆ ಸರ್ಕಾರ ಸೂಚಿಸಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಶಬ್ಧಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಅದೇಶ ಪಾಲಿಸುವಂತೆ ಮುಸ್ಲಿಮರಿಗೆ ಸರ್ಕಾರ ಹೇಳಬೇಕು. ಸರ್ಕಾರದ ಆದೇಶದಂತೆ ಮಸೀದಿಗಳು ನಡೆದುಕೊಳ್ಳಬೇಕು ಎಂದರು. es ಹಲವು ರಾಷ್ಟ್ರಗಳಲ್ಲಿ ನಿಷೇಧ ಮುಸ್ಲಿಂ ರಾಷ್ಟ್ರಗಳೂ ಸೇರಿದಂತೆ ಜಗತ್ತಿನ … Read more

ತುಂಗಾ ಡ್ಯಾಮ್‌ನ ಒಳ ಹರಿವು ಮತ್ತಷ್ಟು ಇಳಿಕೆ, ಇವತ್ತು ಎಷ್ಟಿದೆ?

Tunga-Dam-Gajanuru.

ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದ್ದು ಗಾಜನೂರಿನ ತುಂಗಾ ಜಲಾಶಯದ (Dam Level) ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಜಲಾಶಯಕ್ಕೆ ಇವತ್ತು 32,249 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ 31,867 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 2.2 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ನೀರಿನ ಮಟ್ಟ 587.87 ಮೀಟರ್‌ ಇದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಮರೆಯಾದ ಮಳೆ, ಹೊಸನಗರ, ತೀರ್ಥಹಳ್ಳಿಯಲ್ಲಿ ಉತ್ತಮ ವರ್ಷಧಾರೆ

ಶಿವಮೊಗ್ಗದಲ್ಲಿ ಮರೆಯಾದ ಮಳೆ, ಹೊಸನಗರ, ತೀರ್ಥಹಳ್ಳಿಯಲ್ಲಿ ಉತ್ತಮ ವರ್ಷಧಾರೆ

night-rain-in-shimoga

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತಗ್ಗಿದೆ. ಕೆಳೆದ 24 ಗಂಟೆಯಲ್ಲಿ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ಭಾಗದಲ್ಲಿ ಉತ್ತಮ ಮಳೆಯಾಗಿದೆ. (Rainfall Report) ಸೋಮವಾರ ಬೆಳಗ್ಗೆ 8.30ರಿಂದ ಇಂದು ಬೆಳಗ್ಗೆ 8.30ರವರೆಗೆ ಶಿವಮೊಗ್ಗ ತಾಲೂಕಿನಲ್ಲಿ 2.90 ಮಿ.ಮೀ ಮಳೆಯಾಗಿದೆ. ಭದ್ರಾವತಿ 2.40 ಮಿ.ಮೀ, ತೀರ್ಥಹಳ್ಳಿ 31.90 ಮಿ.ಮೀ., ಸಾಗರ 29.60 ಮಿ.ಮೀ., ಶಿಕಾರಿಪುರ 4.20 ಮಿ.ಮೀ, ಸೊರಬ 14 ಮಿ.ಮೀ., ಹೊಸನಗರ 37.60 ಮಿ.ಮೀ. ಮಳೆಯಾಗಿದೆ. ಇದನ್ನೂ ಓದಿ » ದೆವ್ವ ಬಿಡಿಸೋದಾಗಿ ಕೋಲಲ್ಲಿ ಹೊಡೆದು ಹಿಂಸೆ, ನೀರಿಗಾಗಿ … Read more