ಹೊಸ ವರ್ಷದ ಪಾರ್ಟಿ ವೇಳೆ ಕೈ ಕೈ ಮಿಲಾಯಿಸಿದ ಯುವಕರು, ಚೇರ್‌ಗಳಿಂದಲೇ ಬಡಿದಾಟ

Altercation-in-New-Year-party-in-Shimoga

ಶಿವಮೊಗ್ಗ: ನಗರದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮಾಚರಣೆಯ ಅಂತಿಮ ಹಂತದಲ್ಲಿ ಯುವಕರ ಎರಡು ಗುಂಪುಗಳ (Youth Clash) ಮಧ್ಯೆ ಗಲಾಟೆಯಾಗಿದೆ. ಪಾರ್ಟಿಯಲ್ಲಿ ಹಾಕಿದ್ದ ಚೇರ್‌ಗಳಿಂದಲೇ ಹೊಡೆದಾಡಿಕೊಂಡಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆಯ ಅಡಿಕೆ ಮಂಡಿ ಮರ್ಚೆಂಟ್ಸ್‌ ಕ್ಲಬ್‌ನಲ್ಲಿ ನಡೆದ ಪಾರ್ಟಿ ವೇಳೆ ಘಟನೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಗಲಾಟೆ ವಿಕೋಪಕ್ಕೆ ತಿರುಗಿದಾಗ ಎರಡು ಗುಂಪಿನವರು ಪರಸ್ಪರ ಚೇರ್‌ಗಳಿಂದಲೇ ಹೊಡೆದಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ತುಂಗಾನಗರ ಠಾಣೆ ಇನ್ಸ್‌ಪೆಕ್ಟರ್‌ … Read more