ಅಂಬಾರಗೊಪ್ಪ ಬಳಿ ಗೂಡ್ಸ್‌ ವಾಹನ ಡಿಕ್ಕಿ, ಸೈಕಲ್‌ ಸವಾರ ಸಾವು, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

ಶಿಕಾರಿಪುರ: ಸೈಕಲ್‌ನಲ್ಲಿ (cycle) ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಗೂಡ್ಸ್‌ ವಾಹನ ಡಿಕ್ಕಿಯಾಗಿ ಆತ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿಕಾರಿಪುರ – ಶಿರಾಳಕೊಪ್ಪ ಮುಖ್ಯರಸ್ತೆಯ ಅಂಬಾರಗೊಪ್ಪ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ. ಅಂಬಾರಗೊಪ್ಪದ ರುದ್ರ ನಾಯ್ಕ್‌ (66) ಮೃತರು. ಸೈಕಲ್‌ನಲ್ಲಿ ರುದ್ರ ನಾಯ್ಕ್‌ ಅವರು ರಸ್ತೆ ದಾಟುತ್ತಿದ್ದರು. ಆಗ ಶಿಕಾರಿಪುರ ಕಡೆಯಿಂದ ಶಿರಾಳಕೊಪ್ಪ ಕಡೆಗೆ ತೆರಳುತ್ತಿದ್ದ ಗೂಡ್ಸ್‌ ವಾಹನ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡಿದ್ದ ರುದ್ರ ನಾಯ್ಕ್‌ ಸಾವನ್ನಪ್ಪಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯನ್ನು … Read more