ಶಂಕರಘಟದಲ್ಲಿ ಬಸ್ಸಿನ ಟೈರ್‌ ಸ್ಫೋಟ, ಬೈಕ್‌ ಸವಾರ ಸಾವು, ಹೇಗಾಯ್ತು ಘಟನೆ?

SHANKARAGHATTA BDVT NEWS 1

ಭದ್ರಾವತಿ: ಖಾಸಗಿ ಬಸ್ಸಿನ ಟೈರ್ ಸ್ಫೋಟಗೊಂಡು (Tire Burst) ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಕಣಗಲಸರ ಗ್ರಾಮದ ನಿವಾಸಿ ಬೀರು (42) ಮೃತಪಟ್ಟವರು. ಅದೇ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಲಕ್ಷ್ಮಿ ಎಂಬುವವರಿಗೆ ಗಾಯವಾಗಿದೆ. ಬೀರು ಅವರು ಲಕ್ಷ್ಮಿ ಅವರನ್ನು ಬೈಕ್‌ನಲ್ಲಿ ಕುರಿಸಿಕೊಂಡು ಆಸ್ಪತ್ರೆಗೆ ಹೋಗಿ ವಾಪಸ್ ಬರುತ್ತಿದ್ದರು. ಶಂಕರಘಟ್ಟ ಗ್ರಾಮದ ಅಂಗಾಳ ಪರಮೇಶ್ವರಿ ದೇವಸ್ಥಾನದ ಬಳಿ ಸಂಚರಿಸುತ್ತಿದ್ದಾಗ, ಎದುರುಗಡೆಯಿಂದ ಬಂದ ಖಾಸಗಿ ಬಸ್ ಇವರ ಬೈಕನ್ನು ದಾಟಿದ ತಕ್ಷಣ ಅದರ ಟೈರ್ ಸ್ಫೋಟಗೊಂಡಿದೆ. … Read more

₹1.20 ಲಕ್ಷ ಮೌಲ್ಯದ ಅಡಿಕೆ ಕಳ್ಳತನ, ಎಲ್ಲಿ? ಹೇಗಾಯ್ತು ಘಟನೆ?

Crime-News-General-Image

ಭದ್ರಾವತಿ: ವೀರಾಪುರ ಗ್ರಾಮದ ಬಳಿ ಅಡಿಕೆ (Areca Nut) ಸುಲಿಯುವ‌ ಶೆಡ್‌ನಲ್ಲಿ ಅಡಿಕೆ ಕಳ್ಳತನವಾಗಿದೆ. ಶ್ರೀರಾಮನಗರ ನಿವಾಸಿ ಬೈರೆಗೌಡ ಬೇರೆಯವರ ತೋಟವನ್ನು ಪಡೆದು ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದರು. ವೀರಾಪುರ ಗ್ರಾಮದ ಪೆಟ್ರೋಲ್ ಬಂಕ್ ಪಕ್ಕದ ಶೆಡ್‌ನಲ್ಲಿ ಅಡಿಕೆ ಸಂಗ್ರಹಿಸಿಟ್ಟಿದ್ದರು. ಜನವರಿ 1ರ 25 ಚೀಲ ಸುಲಿದ ಹಸಿ ಅಡಿಕೆಯನ್ನು ಶೆಡ್‌ನಲ್ಲಿ ಇಟ್ಟು ಮನೆಗೆ ಹೋಗಿದ್ದರು. ಜನವರಿ 2ರ ಬೆಳಗ್ಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಶೆಡ್‌ನಲ್ಲಿದ್ದ 25 ಚೀಲಗಳ ಪೈಕಿ ಸುಮಾರು ₹1,20,000 … Read more