ಖಾಸಗಿ ಬಸ್, ಪೆಟ್ರೋಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ, ಮಹಿಳೆಗೆ ತೀವ್ರ ಪೆಟ್ಟು, ಘಟನೆ ಆಗಿದ್ದೆಲ್ಲಿ?
ರಿಪ್ಪನ್ಪೇಟೆ: ಪೆಟ್ರೋಲ್ ಟ್ಯಾಂಕರ್ ಮತ್ತು ಗಜಾನನ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು (Collided), ಮಹಿಳೆಯೊಬ್ಬರಿಗೆ ತೀವ್ರ ಪೆಟ್ಟಾಗಿದೆ. ರಿಪ್ಪನ್ಪೇಟೆ ಸಮೀಪದ ಕೋಡೂರಿನಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಇದನ್ನೂ ಓದಿ » ಭದ್ರಾವತಿಯಲ್ಲಿ ಡಬಲ್ ಮರ್ಡರ್, 25 ವರ್ಷದ ಯುವಕ, 65 ವರ್ಷದ ವ್ಯಕ್ತಿಯ ಹತ್ಯೆ, ಕಾರಣವೇನು? ಅಪಘಾತದಲ್ಲಿ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಮತ್ತು ಇತರೆ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಓರ್ವ ಮಹಿಳೆಯ ತಲೆಗೆ ತೀವ್ರ ಪೆಟ್ಟಾಗಿದೆ. ಸ್ಥಳೀಯರು ಮತ್ತು ದಾರಿಯಲ್ಲಿ ಸಾಗುತ್ತಿದ್ದ ಇತರೆ ವಾಹನಗಳ ಪ್ರಯಾಣಿಕರು ಕೂಡಲೆ ನೆರವಿಗೆ ಧಾವಿಸಿದರು. … Read more