ತೀರ್ಥಹಳ್ಳಿಯ ನಂಟೂರಿನಲ್ಲಿ ಧಗಧಗ ಉರಿದ ಕೊಟ್ಟಿಗೆ
SHIVAMOGGA LIVE NEWS | 18 NOVEMBER 2023 THIRTHAHALLI : ಆಕಸ್ಮಿಕ ಬೆಂಕಿ ತಗುಲಿ ನಂಟೂರು ಗ್ರಾಮದಲ್ಲಿ ಜಾನುವಾರು ಕೊಟ್ಟಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ನಿಲುವಾನಿ ಶ್ರೀನಿವಾಸ ಗೌಡ ಅವರಿಗೆ ಸೇರಿದ ಕೊಟ್ಟಿಗೆ ಬೆಂಕಿಗೆ ಆಹುತಿಯಾಗಿದೆ. ಕೊಟ್ಟಿಗೆಯಲ್ಲಿದ್ದ ದನ, ಎಮ್ಮೆಗಳನ್ನು ಹಗ್ಗ ಬಿಚ್ಚಿ ಓಡಿಸಿದ್ದರಿಂದ ಜೀವ ಹಾನಿ ಸಂಭವಿಸಲಿಲ್ಲ. ಕೊಟ್ಟಿಗೆಯ ಚಾವಣಿಗೆಗೆ ಹಾಕಿದ್ದ ಪಕಾಸಿ ಸೇರಿದಂತೆ 300ಕ್ಕೂ ಹೆಚ್ಚು ಹುಲ್ಲಿನ ಪಿಂಡಿ ನಾಶವಾಗಿವೆ. ವಿಷಯ ತಿಳಿದ ಗ್ರಾಮಸ್ಥರು ಬೆಂಕಿ ನಂದಿಸುವ ಕಾರ್ಯಕ್ಕೆ ನೆರವಾದರು. ಅಗ್ನಿಶಾಮಕ ದಳದ ಸಿಬ್ಬಂದಿ … Read more