ಇವತ್ತು ಶಿವಮೊಗಕ್ಕೆ ಸಚಿವ ಈಶ‍್ವರಪ್ಪ, ಕರೋನದಿಂದ ಆಯನೂರು ಮಂಜುನಾಥ್ ಗುಣ

140720 KS Eshwarappa Press Meet After Covid test 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಸೆಪ್ಟಂಬರ್ 2020 ಕರೋನ ಸೋಂಕಿನಿಂದ ಗುಣಮುಖರಾಗಿ ಒಂದು ವಾರ ಕ್ವಾರಂಟೈನ್‍ನಲ್ಲಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಇವತ್ತು ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದಾರೆ. ಇವತ್ತು ರಾತ್ರಿ ಶಿವಮೊಗ್ಗಕ್ಕೆ ಆಗಮಿಸಲಿರುವ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಕರೋನ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಗುಣವಾಗಿದ್ದಾರೆ. ಕ್ವಾರಂಟೈನ್ ಅವಧಿ ಮುಗಿಸಿ ಜಿಲ್ಲೆಗೆ ಹಿಂತಿರುಗುತ್ತಿದ್ದಾರೆ. ಸೆಪ್ಟೆಂಬರ್ 18ರವರೆಗೆ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. … Read more

ಕರೋನ ಹಿನ್ನೆಲೆ, ಶಿವಮೊಗ್ಗ ಉಸ್ತುವಾರಿ ಸಚಿವರು, ತೀರ್ಥಹಳ್ಳಿ ಎಂಎಲ್ಎ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ

KS-Eshwarappa-DC-Office-Meeting

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಸೆಪ್ಟಂಬರ್ 2020 ಕರೋನ ಪಾಸಿಟಿವ್ ಬಂದ ಹಿನ್ನೆಲೆ ಶಿವಮೊಗ್ಗ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರಿಗು ಚಿಕಿತ್ಸೆ ಆರಂಭವಾಗಿದೆ. ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೋಮವಾರ ಬೆಂಗಳೂರಿಗೆ ತೆರಳಿದ್ದರು. ಕರೋನ ದೃಢವಾದ ಹಿನ್ನೆಲೆ ಅಲ್ಲಿಯೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ರೋಗ ಲಕ್ಷಣವಿಲ್ಲದಿದ್ದರೂ ಈಶ್ವರಪ್ಪ ಅವರಿಗೆ ಪಾಸಿಟಿವ್ ಬಂದಿದೆ. ತೀರ್ಥಹಳ್ಳಿ ಎಂಎಲ್‍ಎ ಬೆಂಗಳೂರಿಗೆ … Read more

ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ 40 ಸೀಟ್ಗಿಂತಲೂ ಹೆಚ್ಚು ಗೆಲ್ಲಲಿ ನೋಡೋಣ, ಕಾಂಗ್ರೆಸ್ ಸವಾಲು

Congress-President-Sundaresh

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಆಗಸ್ಟ್ 2020 ಕಾಂಗ್ರೆಸ್‌ನಲ್ಲಿ ನಾಯಕತ್ವ ಇಲ್ಲ. ಅದು ಮುಳುಗುವ ಹಡಗು ಆಗಿದೆ ಅಂತಾ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್ ತಿರುಗೇಟು ನೀಡಿದೆ. ಯಡಿಯೂರಪ್ಪ ಅವರು ಕೆಜೆಪಿಯಿಂದ ಬಿಜೆಪಿಗೆ ಬಾರದೆ ಹೋಗಿದ್ದರೆ ಬಿಜೆಪಿಯಲ್ಲಿ ನಾಯಕತ್ವ ಇರುತ್ತಿತ್ತಾ ಅಂತಾ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ 40ಕ್ಕಿಂತಲೂ ಹೆಚ್ಚು ಸೀಟ್‍ ಗಳಿಸಲಿ ಎಂದು ಸವಾಲು ಹಾಕಿದರು. ದೇಶದಲ್ಲಿ 60-70 … Read more

‘ಡಿಕೆಶಿ ಏನು ಕಡಿದು ಗುಡ್ಡೆ ಹಾಕಿದ್ದಾರೆ ಅಂತಾ ಫೋನ್ ಕದ್ದಾಲಿಸಬೇಕು?’

140720 KS Eshwarappa Press Meet After Covid test 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಆಗಸ್ಟ್ 2020 ಸರ್ಕಾರ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‍ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಫೋನ್ ಟ್ಯಾಪ್ ಮಾಡಿ ದೇಶ ಉದ್ಧಾರ ಮಾಡಬೇಕಾ. ಅವರು ಏನು ಕಡಿದು ಗುಡ್ಡೆ ಹಾಕಿದ್ದಾರೆ ಎಂದು ಅವರ ಫೋನ್ ಟ್ಯಾಪ್ ಮಾಡಬೇಕಿದೆ. ಇದೆಲ್ಲ ಪ್ರಚಾರ ತಂತ್ರ. ಈ ಮೂಲಕ ದೊಡ್ಡವರಾಗೋಕೆ ಪ್ರಯತ್ನಿಸುತ್ತಿದ್ದಾರೆ. ಅವರ ಫೋನ್ ಟ್ಯಾಪ್ ಆಗುತ್ತಿಲ್ಲ. … Read more

ಆರು ವಾರದಿಂದ ಸತ್ಯಾಗ್ರಹ ಮಾಡ್ತಿದ್ದೇವೆ, ಇನ್ನಾದರೂ ಸಮಸ್ಯೆ ಬಗೆಹರಿಸಿ, ಸಚಿವರ ಮುಂದೆ ಅತಿಥಿ ಉಪನ್ಯಾಸಕರ ಅಳಲು

150820 Guest Lecturers Memorandum To Minister 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಆಗಸ್ಟ್ 2020 ಅತಿಥಿ ಉಪನ್ಯಾಸಕರಿಗೆ ಲಾಕ್‌ಡೌನ್ ಅವಧಿಯ ವೇತನ ಮತ್ತು ಸೇವಾ ಭದ್ರತೆ ನೀಡುವ ಸಂಬಂಧ ಮುಖ್ಯ ಮಂತ್ರಿಗಳು ಮಧ್ಯಪ್ರವೇಶಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಒತ್ತಾಯಿಸಿದೆ. ಲಾಕ್‌ಡೌನ್‌ನಿಂದಾಗಿ ವೇತನ ಮತ್ತು ಉದ್ಯೋಗ ಎರಡು ಇಲ್ಲದೆ ಅತಿಥಿ ಉಪನ್ಯಾಸಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೋವಿಡ್-19 ರ ಮಾರ್ಗಸೂಚಿಯಂತೆ … Read more

SDPI ಒಂದು ಜುಜುಬಿ ಸಂಘಟನೆ, ಉತ್ತರ ಪ್ರದೇಶ ಮಾದರಿಯಲ್ಲಿ ಗಲಭೆಕೋರರ ಆಸ್ತಿ ಮಟ್ಟುಗೋಲಿಗೆ ಸಂಪುಟದಲ್ಲಿ ಚರ್ಚೆ

Eshwarappa MLA 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಆಗಸ್ಟ್ 2020 ಮತಾಂಧರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ‍್ವರಪ್ಪ ತಿಳಿಸಿದ್ದಾರೆ. ಬೆಂಗಳೂರು ಗಲಭೆ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಮತಾಂಧ ಮುಸ್ಲಿಮರ ಗೂಂಡಾಗಿರಿ, ದೊಂಬಿಯನ್ನು ಇತರ ಮುಸ್ಲಿಮ್ ಮುಖಂಡರು ಖಂಡಿಸಬೇಕು. ಹಾಗಾಂತ ಎಲ್ಲಾ ಮುಸ್ಲಿಮರು ಗೂಂಡಾಗಳಲ್ಲ. ಈ ಸಮುದಾಯದಲ್ಲೂ ಸೌಮ್ಯ … Read more

ಸ್ಮಾರ್ಟ್ ಸಿಟಿಯಿಂದ ಶಿವಮೊಗ್ಗದ ರಾಗಿಗುಡ್ಡದಲ್ಲಿ ಜೈವಿಕ ಉದ್ಯಾನ, ಹೇಗಿರುತ್ತೆ? ಎಷ್ಟು ಎಕರೆಯಲ್ಲಿ ಉದ್ಯಾನವಾಗುತ್ತೆ?

Shimoga Ragigudda temple 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಆಗಸ್ಟ್ 2020 ಶಿವಮೊಗ್ಗ ನಗರದಲ್ಲಿರುವ ರಾಗಿಗುಡ್ಡದಲ್ಲಿ ಲಭ್ಯವಿರುವ ಸುಮಾರು 20 ಎಕರೆ ಕಂದಾಯ ಜಮೀನಿನಲ್ಲಿ ಜೈವಿಕ ವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ ಸಭಾಂಗಣದಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ನಗರದ ಹಸಿರೀಕರಣಕ್ಕಾಗಿ 3.86 ಕೋಟಿ ರೂ. … Read more

ಆಗುಂಬೆಯಲ್ಲಿ ರಾತ್ರಿ ಸಂಚಾರ ನಿರ್ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

Agumbe Ghat 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಆಗಸ್ಟ್ 2020 ಶಿವಮೊಗ್ಗ – ಆಗುಂಬೆ ಮಾರ್ಗದಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾ ರಕ್ಷಣಾಧಿಕಾರಿಗೆ ಸೂಚಿಸಿದ್ದಾರೆ. ಮಳೆ ಹಾನಿ, ಮುನ್ನೆಚ್ಚರಿಕೆ ಕ್ರಮ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ಈ ಭಾಗದ ಕೆಲವು ಕಡೆ ಭೂಕುಸಿತವಾಗಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸಿ ಎಂದು ಸೂಚಿಸಿದ್ದಾರೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ … Read more

ಶಿವಮೊಗ್ಗದಲ್ಲಿ ಮಳೆಯಿಂದ ಮನೆ ಭಾಗಶಃ ಬಿದ್ದರೂ ಐದು ಲಕ್ಷ ಪರಿಹಾರ

070820 Eshwarappa City rounds in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಆಗಸ್ಟ್ 2020 ಮಳೆಯಿಂದ ಮನೆ ಹಾನಿಯಾದರೆ ಸಂತ್ರಸ್ಥ ಕುಟುಂಬಕ್ಕೆ ಕೂಡಲೆ ಪರಿಹಾರ ಧನ ವಿತರಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆ ಹಾನಿ ಮತ್ತು ತುರ್ತು ಪರಿಹಾರ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಸಚಿವ ಈಶ್ವರಪ್ಪ, ಸಂತ್ರಸ್ಥ ಕುಟುಂಬಕ್ಕೆ ತುರ್ತು ಕ್ರಮಕ್ಕಾಗಿ ಹತ್ತು ಸಾವಿರ ರೂ. ಪರಿಹಾರಧನ ಕೊಡಬೇಕು. ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ … Read more

ಸಚಿವ ಈಶ್ವರಪ್ಪ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

060820 SDPI Protest in Shimoga Against Eshwarappa 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಆಗಸ್ಟ್ 2020 ಕೋಮು ಪ್ರಚೋದಕ ಹೇಳಿಕೆ ನೀಡಿದ ಸಚಿವ ಕೆ.ಎಸ್.ಈಶ‍್ವರಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್‍ಡಿಪಿಐ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳನ್ನು ಧ್ವಂಸಗೊಳಿಸುವ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದೆ. ಇದು ಕೋಮ ಪ್ರಚೋದನೆಯ ಭಾಷಣವಾಗಿದೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್‍ಡಿಪಿಐ ಕಾರ್ಯಕರ್ತರು ಒತ್ತಾಯಿಸಿದರು. ಎಸ್‍ಡಿಪಿಐ ಪ್ರತಿಭಟನೆಯ … Read more