ಗಾಜನೂರಿನ ತುಂಗಾ ಜಲಾಶಯ ಗರಿಷ್ಠ ಮಟ್ಟಕ್ಕೆ, ಒಳ ಹರಿವಿನಷ್ಟೆ ನೀರು ಹೊರಕ್ಕೆ

Tunga-Dam-Gajanuru.

SHIVAMOGGA LIVE NEWS | 7 JULY 2024 DAM LEVEL : ತೀರ್ಥಹಳ್ಳಿ ಸೇರಿದಂತೆ ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ತುಂಗಾ ಜಲಾಶಯದ ಒಳ ಹರಿವು ಇಳಿಕೆಯಾಗಿದೆ. ಗಾಜನೂರಿನಲ್ಲಿರುವ ತುಂಗಾ ಜಲಾಶಯಕ್ಕೆ ಭಾನುವಾರ 19,223 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಅಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಜಲಾಶಯದ 588.24 ಮೀಟರ್‌ ಗರಿಷ್ಠ ಮಟ್ಟ ಹೊಂದಿದೆ. ನೀರಿನ ಸಂಗ್ರಹ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಬೀಡಲಾಗುತ್ತಿದೆ. ಇದನ್ನೂ … Read more

BREAKING NEWS – ಗಾಜನೂರು ತುಂಗಾ ಜಲಾಶಯದ ಗೇಟ್ ಓಪನ್, ನೀರು ಹೊರಕ್ಕೆ

Tunga Dam

SHIVAMOGGA LIVE NEWS | 27 JUNE 2024 SHIMOGA : ಜಲಾನಯನ ಪ್ರದೇಶದಲ್ಲಿ ಮಳೆ ಬಿರುಸಾದ ಹಿನ್ನೆಲೆ ಗಾಜನೂರಿನ ತುಂಗಾ ಜಲಾಶಯದಿಂದ (Tunga Dam) ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಎರಡು ಕ್ರಸ್ಟ್ ಗೇಟ್‌ಗಳನ್ನು ತೆಗೆದು ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಿಂದ ಒಟ್ಟು 6 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಈ ಪೈಕಿ ಗೇಟಿನ ಮೂಲಕ ಒಂದು ಸಾವಿರ ಕ್ಯೂಸೆಕ್ ಮತ್ತು ಪವರ್ ಹೌಸ್ ಮೂಲಕ 5 ಸಾವಿರ ಕ್ಯೂಸೆಕ್ ಹೊರಬಿಡಲಾಗುತ್ತಿದೆ. ಇದನ್ನೂ ಓದಿ – ಮಳೆ … Read more

ಗಾಜನೂರು ಡ್ಯಾಂನಿಂದ ಯಾವುದೇ ಸಂದರ್ಭ ನೀರು ಹೊರಕ್ಕೆ, ಜನರಿಗೆ ಮುನ್ನೆಚ್ಚರಿಕೆ

050723 Gajanur Tunga Dam Full

SHIVAMOGGA LIVE NEWS | 5 JUNE 2024 SHIMOGA : ತುಂಗಾ ಮೇಲ್ದಂಡೆ ಯೋಜನೆ ಜಲಾಶಯ (DAM) ಪೂರ್ಣ ಮಟ್ಟಕ್ಕೆ ತುಂಬಲು 4 ಅಡಿ ಬಾಕಿಯಿದೆ. ಮುಂದೆ ಮುಂಗಾರು ಪ್ರಾರಂಭವಾಗಿ ಜಲಾನಯನ ಪ್ರದೇಶದಲ್ಲಿ ಮಳೆಯಾದರೆ ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ಯಾವ ಕ್ಷಣದಲ್ಲಾದರೂ ನದಿಗೆ ನೀರನ್ನು ಬಿಡುವ ಸಂಭವವಿರುತ್ತದೆ. ಜಲಾಶಯದ ಕೆಳಭಾಗ ನದಿ ಪಾತ್ರದಲ್ಲಿ ಬರುವ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆ ಮಾಡಬಾರದು. ದನ ಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡಬಾರದು. ತುಂಗಾ ನದಿ ಪಾತ್ರದ  ಗ್ರಾಮಗಳ … Read more

ಗಾಜನೂರು ಬಳಿ ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ಪಲ್ಟಿಯಾದ ಕಾರು, ಯುವಕ ಸಾವು

ACCIDENT-NEWS-GENERAL-IMAGE.

SHIVAMOGGA LIVE NEWS | 20 MAY 2024 SHIMOGA : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ (Mishap) ಯುವಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಶಿವಮೊಗ್ಗ ತಾಲೂಕು ಗಾಜನೂರು ಸಮೀಪ ಭಾನುವಾರ ರಾತ್ರಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ವಿದ್ಯಾನಗರ ನಿವಾಸಿ, ಕೃಷಿಕ ಕೃಷ್ಣಮೂರ್ತಿ ಅವರ ಪುತ್ರ ಪ್ರಜ್ವಲ್ (22) ಸಾವಿಗೀಡಾದ ಯುವಕ. ಕೃಷ್ಣಮೂರ್ತಿ ಮೂಲತಃ ಚನ್ನಗಿರಿ ತಾಲ್ಲೂಕಿನ ಬೆಟ್ಟದ ಕಡೂರಿನವರು. ಪ್ರಜ್ವಲ್ ಹಾಗೂ ಸ್ನೇಹಿತರು ಎರಡು ವಾಹನಗಳಲ್ಲಿ ಮಂಡಗದ್ದೆಗೆ ಊಟಕ್ಜೆ ತೆರಳಿದ್ದರು. ಇದನ್ನೂ ಓದಿ … Read more

ಗಾಜನೂರಿನಲ್ಲಿ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನ ಸ್ಪೋಟ, ಕಾರಣವೇನು?

Gajanur-Congress-Party-workers-angry-over-leaders.

SHIVAMOGGA LIVE NEWS | 25 APRIL 2024 GAJANURU : ಪಕ್ಷದ ಮುಖಂಡರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಗಾಜನೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಗಾಜನೂರಿನ ಗ್ರಂಥಾಲಯ ಸಮೀಪ ಗಾಜನೂರು ನಾಗರಾಜ್‌, ಶಿವಕುಮಾರ್‌ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಇದೇ ವೇಳೆ ಮಾತನಾಡಿದ ಗಾಜನೂರು ನಾಗರಾಜ್‌, ವಿಧಾನಸಭೆ ಚುನಾವಣೆ ಸಂದರ್ಭ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್‌ ಹಂಚಿದ್ದೆವು. ಈಗಲು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಹಾಗಿದ್ದೂ, ಕಳೆದ ಒಂದು ತಿಂಗಳಿಂದ ಪಕ್ಷದ ಬ್ಲಾಕ್‌ … Read more

ಗಾಜನೂರಿನಲ್ಲಿ ದಾಳಿ, ಲೀಟರ್‌ಗಟ್ಟಲೆ ಗೋವಾ ಮದ್ಯ ವಶಕ್ಕೆ

Excise-department-raid-at-gajanuru-in-Shimoga-taluk

SHIVAMOGGA LIVE NEWS | 1 OCTOBER 2023 SHIMOGA : ಮನೆಯೊಂದರ ಮೇಲೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಗೋವಾ (GOA) ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಗಾಜನೂರು ಅಗ್ರಹಾರದ ರಾಜಣ್ಣ ಎಂಬುವವರ ಮನೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 7 ಲೀಟರ್‌ 100 ಎಂಎಲ್‌ನಷ್ಟು ಗೋವಾ ಮದ್ಯ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ – 314 ರೈಲು ವೇಳಾಪಟ್ಟಿ ಬದಲು, ಶಿವಮೊಗ್ಗದ ಯಾವ್ಯಾವ … Read more