ಗಾಂಧಿ ಬಜಾರ್ ಕೇಸರಿಮಯ, ಮಹಾದ್ವಾರ ರೆಡಿ, ಈ ಬಾರಿಯ ಕಾನ್ಸೆಪ್ಟ್ ಏನು?
ಶಿವಮೊಗ್ಗ: ಸೆ.6ರಂದು ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ (ganpati) ರಾಜಬೀದಿ ಉತ್ಸವ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಆರಂಭವಾಗಿದ್ದು, ನಗರ ಕೇಸರಮಯಗೊಂಡಿದೆ. ಅಲ್ಲಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಗಾಂಧಿ ಬಜಾರ್ ಮುಂಭಾಗ ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನ ಮಹಾದ್ವಾರ ಸ್ಥಾಪಿಸಲಾಗಿದೆ. ಎಲ್ಲೆಲ್ಲಿ ಹೇಗಿದೆ ಅಲಂಕಾರ? ಸಮುದ್ರ ಮಂಥನ ಮಹಾದ್ವಾರ ರೆಡಿ ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನವಾದ ಮಹಾದ್ವಾರ ನಿರ್ಮಿಸಲಾಗಿದೆ. ದೇವತೆಗಳು ಮತ್ತು ರಾಕ್ಷಸರ ಮಧ್ಯೆ ಅಮೃತಕ್ಕಾಗಿ ಹಾಲಿನ ಸಮುದ್ರವನ್ನು ಕಡೆಯುವ ಕತೆಯನ್ನು ಈ ಬಾರಿಯ ಮಹಾದ್ವಾರ ಸ್ಥಾಪಿಸಲಾಗಿದೆ. … Read more