ಕೋಣ ತಿವಿದು ಗಂಭೀರ ಗಾಯ, ಸ್ಥಳದಲ್ಲೆ ವ್ಯಕ್ತಿ ಸಾವು

SORABA-NEWS-UPDATE

ಸೊರಬ: ಕೋಣ (buffalo) ತಿವಿದು ತೀವ್ರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸೊರಬ ತಾಲೂಕು ಓಟೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮಂಚಪ್ಪ (60) ಸಾವಿಗೀಡಾದವರು. ಸಾಕಿದ್ದ ಕೋಣವನ್ನು ಮೇಯಿಸಲು ಹೊಲಕ್ಕೆ ಕರೆದೊಯ್ದಾಗ ಅದು ತಿವಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.  ಇದನ್ನೂ ಓದಿ » ಫ್ಯಾನಿಗೆ ನೇಣು ಬಿಗಿದುಕೊಳ್ಳಲು ರೆಡಿಯಾಗಿದ್ದ ವ್ಯಕ್ತಿ, ಅಷ್ಟರಲ್ಲಿ ಮನೆಗೆ ಬಂದರು ಪೊಲೀಸ್‌, ಆಗಿದ್ದೇನು? buffalo

ಶಿವಮೊಗ್ಗದಲ್ಲಿ ರಾಶಿ ರಾಶಿ ಸೈಲೆನ್ಸರ್ ಗಳನ್ನು ರಸ್ತೆ ಮೇಲಿಟ್ಟು ಬುಲ್ಡೋಜರ್ ಹತ್ತಿಸಿದ ಪೊಲೀಸರು

Buldozer-on-modified-bike-silencers

SHIVAMOGGA LIVE NEWS | 23 DECEMBER 2022 ಶಿವಮೊಗ್ಗ : ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ಶಿವಮೊಗ್ಗದ ರಸ್ತೆ ಮೇಲಿಟ್ಟು ಪೊಲೀಸರು ಬುಲ್ಡೋಜರ್ ಹತ್ತಿಸಿದರು. ಇನ್ಮುಂದೆ ಈ ರೀತಿಯ ಸೈಲೆನ್ಸರ್ ಬಳಕೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು (bike silencer) ನಾಶಪಡಿಸಲಾಯಿತು. ಸಾರ್ವಜನಿಕವಾಗಿ ಸೈಲೆನ್ಸರ್ ನಾಶ ಪಡಿಸಿ ಜಾಗೃತಿ ಮೂಡಿಸಲಾಯಿತು. ಸಾಲಾಗಿ ಜೋಡಿಸಿ ಬುಲ್ಡೋಜರ್ ಹತ್ತಿಸಿದರು … Read more