ಸಾರ್ವಜನಿಕರೆ ಎಚ್ಚರ, ಹೊಸನಗರದಲ್ಲಿ ಮೆಸ್ಕಾಂ ಅಲರ್ಟ್‌ ಪ್ರಕಟ, ಏನಿದು?

Hosanagara taluk name Graphics

ಹೊಸನಗರ: ತಾಲೂಕಿನ ಹರಿದ್ರಾವತಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ 33/11 ಕೆ.ವಿ ಉಪವಿದ್ಯುತ್‌ ವಿತರಣಾ ಕೇಂದ್ರ ಶೀಘ್ರದಲ್ಲಿಯೇ ಕಾರ್ಯಾರಂಭಗೊಳ್ಳಲಿದೆ (high alert). ಇದರ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ 33 ಕೆವಿ ಟವರ್‌ಗಳು, 11 ಕೆವಿ ವಿದ್ಯುತ್ ಕಂಬಗಳನ್ನು ಸಾರ್ವಜನಿಕರು ಮುಟ್ಟುವುದಾಗಲಿ, ಸಾಕುಪ್ರಾಣಿಗಳನ್ನು ಕಟ್ಟುವುದಾಗಲಿ ಅಥವಾ ಇವುಗಳ ಸಮೀಪ ಇನ್ಯಾವುದೇ ಅನಧಿಕೃತ ಚಟುವಟಿಕೆ ಮಾಡುವಂತಿಲ್ಲ ಎಂದು ಸಾರ್ವಜನಿಕರ ಹಿತದೃಷ್ಟಿಯಿಂದ ಮೆಸ್ಕಾಂ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ – ಏಲಕ್ಕಿ ಬಾಳೆಹಣ್ಣು ಕಳ್ಳತನ, ದಾಖಲಾಯ್ತು ಪ್ರಕರಣ, ಎಲ್ಲಿ? ಆಗಿದ್ದೇನು?

ಹೊಸನಗರ ಕ್ಷೇತ್ರ, ಶೀಘ್ರದಲ್ಲೇ ಪಾದಯಾತ್ರೆ ಆಯೋಜನೆ

HOSANAGARA-NEWS-GENERAL

ಹೊಸನಗರ: ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯಿಸಿ ಶೀಘ್ರದಲ್ಲೇ ಪಾದಯಾತ್ರೆ (Padayatra) ಆಯೋಜಿಸಲಾಗುವುದು ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ತಿಳಿಸಿದರು. ಇದನ್ನೂ ಓದಿ » ಶಿವಮೊಗ್ಗದ ರೈಸ್‌ ಮಿಲ್‌ ಮಾಲೀಕನಿಗೆ ಹಾಸನದ ವ್ಯಕ್ತಿಯಿಂದ ಲಕ್ಷ ಲಕ್ಷ ವಂಚನೆ, ಆಗಿದ್ದೇನು? ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ.ಸ್ವಾಮಿರಾವ್‌, ಹೊಸನಗರ ವಿಧಾನಸಭಾ ಕ್ಷೇತ್ರ ರಚನೆಗೆ ಹಕ್ಕೊತ್ತಾಯ ಮಂಡಿಸಲು ತಾಲೂಕಿನ ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು, ಸಂಘ ಸಂಸ್ಥೆಗಳ ಜತೆ ಒಟ್ಟಾಗಿ ಸಮಗ್ರ ಹೋರಾಟ ರೂಪಿಸಲಾಗುವುದು ಎಂದರು. ಕ್ಷೇತ್ರ ಪುನ‌ರ್ ವಿಂಗಡಣೆ ಹೊತ್ತಲ್ಲಿ ಹೊಸನಗರ ವಿಧಾನಸಭಾ … Read more