ಶಿವಮೊಗ್ಗದ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ನೋವು ರಹಿತ ಹೆರಿಗೆ, ಡಾ. ಪೃಥ್ವಿ ಏನೆಲ್ಲ ಹೇಳಿದರು?

Dr-Pruthvi-Press-Meet-at-Matru-Vatsalya

ಶಿವಮೊಗ್ಗ: ನಗರದ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ನೋವು ರಹಿತ ಹೆರಿಗೆ (Painless Delivery) ಮಾಡಿಸಲಾಗುತ್ತದೆ. ಇದರಲ್ಲಿ 20 ವರ್ಷ ಪರಿಣತರಾದ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯರಿರುತ್ತಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಪೃಥ್ವಿ.ಬಿ.ಸಿ ತಿಳಿಸಿದರು. ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಸುದ್ದಿಗೋಷ‍್ಠಿಯಲ್ಲಿ ಮಾತನಾಡಿದ ಡಾ. ಪೃಥ್ವಿ, 35 ವರ್ಷ ವೈದ್ಯಕೀಯ ಅನುಭವ ಹೊಂದಿರುವ ಡಾ.ಗೀತಾ ರವಿ ಮತ್ತು ಡಾ.ಅಮಿತಾ ಹೆಗ್ಡೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 20 ವರ್ಷಗಳ ನೋವು ರಹಿತ ಹೆರಿಗೆಯಲ್ಲಿ ಪರಿಣತಿ ಪಡೆದಿದ್ದಾರೆ. ಬಂಜೆತನ ನಿವಾರಣೆ ಹಾಗೂ ಲ್ಯಾಪ್ರೋಸ್ಕೋಪಿಕ್ … Read more

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಸೌಲಭ್ಯ, ಏನೆಲ್ಲ ಸೌಲಭ್ಯ ಯಾವ್ಯಾವ ದಿನ ಲಭ್ಯ?

160125 mc gann hospital general image

ಶಿವಮೊಗ್ಗ: ಜಿಲ್ಲಾ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (Hospital) ಮೂತ್ರರೋಗ ಶಸ್ತ್ರ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ಮೂತ್ರಪಿಂಡ ಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರ ಸೇವೆಗಳು ಸೋಮವಾರ ಮತ್ತು ಗುರುವಾರ ದೊರೆಯಲಿದೆ. ಒಪಿಡಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನರರೋಗ ವಿಭಾಗದ ಒಪಿಡಿಯು ಸೋಮವಾರ, ಬುಧವಾರ, ಶುಕ್ರವಾರದಂದು ತೆರೆಯಲಿದ್ದು, ನರರೋಗ ಶಸ್ತ್ರಚಿಕಿತ್ಸಾ ಸೇವೆಗೆ ಮಂಗಳವಾರ, ಗುರುವಾರ, ಶನಿವಾರ ಸೇವೆ ಹೊರ ರೋಗಿಗಳಿಗೆ ಲಭ್ಯವಿದೆ. ಚಿಕಿತ್ಸೆಯ ನಂತರ ಶಸ್ತ್ರಚಿಕಿತ್ಸೆ ಅವಶ್ಯವಿದ್ದಲ್ಲಿ ರೋಗಿಗಳನ್ನು ದಾಖಲಿಸಿಕೊಂಡು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ … Read more

ಭದ್ರಾವತಿ ಹುಣಸೇಕಟ್ಟೆಯಲ್ಲಿ ಶೀಘ್ರ ಪೊಲೀಸ್‌ ಠಾಣೆ, ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಅಗ್ರಹ

Protest-for-hospital-and-police-station-at-bhadravati.

ಭದ್ರಾವತಿ: ಹುಣಸೇಕಟ್ಟೆ 5 ಎಕರೆ ಗ್ರಾಮಠಾಣಾ ಜಾಗದಲ್ಲಿ ಶೀಘ್ರ ಸರ್ಕಾರಿ ಆಸ್ಪತ್ರೆ (hospital) ಮತ್ತು ಪೊಲೀಸ್‌ ಠಾಣೆ ನಿರ್ಮಿಸಬೇಕು. ಭೂ ಕಬಳಿಕೆ ತೆರವು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಂಯೋಜಕ ಸಮಿತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಹುಣಸೇಕಟ್ಟೆಯಲ್ಲಿ 5 ಎಕರೆ ಗ್ರಾಮ ಠಾಣಾ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಹೈಕೋರ್ಟ್‌ ಆದೇಶದಂತೆ ಅಲ್ಲಿ ಶೀಘ್ರ ಪೊಲೀಸ್‌ ಠಾಣೆ ಮತ್ತು ಸರ್ಕಾರಿ ಆಸ್ಪತ್ರೆ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಹುಣಸೇಕಟ್ಟೆ ಬಿ.ಬಿ. ಮೈನ್ಸ್‌ ನಿವಾಸಿಗಳಿಗೆ ಹಕ್ಕುಪತ್ರ … Read more

ಶಿವಮೊಗ್ಗದಲ್ಲಿ ಯುವತಿ ಇದ್ದ ಆಂಬುಲೆನ್ಸ್‌ಗೆ ಜೀರೋ ಟ್ರಾಫಿಕ್‌, ವಿಮಾನ ನಿಲ್ದಾಣದಿಂದ ಮುಂಬೈಗೆ ಶಿಫ್ಟ್‌

Patient-Shifted-to-mumbai-in-Air-Ambulance

ಶಿವಮೊಗ್ಗ: ಮಿದುಳು ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದಿಂದ ಮುಂಬೈಗ್‌ಗೆ ಏರ್‌ಲಿಫ್ಟ್‌ (Airlift) ಮಾಡಲಾಗಿದೆ. ಶಿವಮೊಗ್ಗದ ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ ಯುವತಿ ಇದ್ದ ಆಂಬುಲೆನ್ಸ್‌ಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಗಾಂಧಿ ಬಜಾರ್‌ನ ಮಾನ್ಯಾ (21) ಎಂಬುವವರು ಮಿದುಳು ಜ್ವರದ ಚಿಕಿತ್ಸೆಗೆ ಶಿವಮೊಗ್ಗದ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮುಂಬೈನ್‌ ರಿಲಯನ್ಸ್‌ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯಲಾಗಿದೆ. ವಿಮಾನ ನಿಲ್ದಾಣಕ್ಕೆ ಜೀರೋ ಟ್ರಾಫಿಕ್‌ ಮಾನ್ಯಾ ಅವರನ್ನು ತುರ್ತಾಗಿ ಕರೆದೊಯ್ಯಬೇಕಿದ್ದರಿಂದ ಅವರ … Read more

ಶಿವಮೊಗ್ಗದಲ್ಲಿ ಮಕ್ಕಳ ದಂತ ಉಚಿತ ತಪಾಸಣೆ ಶಿಬಿರ

Unity Hospital doctors about dental camp

ಶಿವಮೊಗ್ಗ: ನಗರದ ಕುವೆಂಪು ರಸ್ತೆಯ ಯೂನಿಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೇ 4ರಂದು ಬೆಳಿಗ್ಗೆ 10ಕ್ಕೆ ದಂತ ಉಚಿತ ತಪಾಸಣೆ ಶಿಬಿರ (camp) ಆಯೋಜಿಸಲಾಗಿದೆ. ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯದ ದೃಷ್ಟಿಯಿಂದ ಈ ಶಿಬಿರ ನಡೆಸಲಾಗುತ್ತಿದೆ. ದಂತ ತಪಾಸಣೆ, ಹಲವು ರೀತಿಯ ಚಿಕಿತ್ಸೆ ಮತ್ತು ಔಷಧಿ ನೀಡಲಾಗುತ್ತದೆ. ದಂತ ಚಿಕಿತ್ಸೆಯಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಮಕ್ಕಳ ತಜ್ಞ ವೈದ್ಯ ಶಂಭುಲಿಂಗ ಬಂಕೊಳ್ಳಿ ತಿಳಿಸಿದ್ದಾರೆ.  ಮಾಹಿತಿಗೆ ದೂರವಾಣಿ ಸಂಖ್ಯೆ: 87621 71225 ಸಂಪರ್ಕಿಸಬಹುದು. ಭಾರತೀಯ … Read more

ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಲೋಗೋ ರಿಲೀಸ್‌, ಕಡಿಮೆ ವೆಚ್ಚದಲ್ಲಿ ಹೈಟೆಕ್‌ ಟ್ರೀಟ್‌ಮೆಂಟ್‌, ವೈದ್ಯರು ಹೇಳಿದ್ದೇನು?

Dr-Pradeep-and-Dr-Praveen-NU-Shimoga-kidney-hospital.

ಶಿವಮೊಗ್ಗ : ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿರುವ ಎನ್‌.ಯು ಆಸ್ಪತ್ರೆ ಈಗ ಶಿವಮೊಗ್ಗ ಕಿಡ್ನಿ (Kidney) ಆಸ್ಪತ್ರೆಯಾಗಿ ಮರುನಾಮಕರಣಗೊಂಡಿದೆ. ಕಿಡ್ನಿ ದಿನದ ಅಂಗವಾಗಿ ಇವತ್ತು ನೂತನ ಹೆಸರು ಅನಾವರಣ ಮಾಡಲಾಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯರು, ಮರುನಾಮಕರಣಕ್ಕೆ ಕಾರಣ ನೀಡಿದರು. ಯಾರೆಲ್ಲ ಏನೆಲ್ಲ ಹೇಳಿದರು? ನವಜಾತ ಶಿಶುಗಳಿಂದ ಎಲ್ಲ ವಯೋಮಾನದವರಿಗೆ ಕಿಡ್ನಿ ಸಮಸ್ಯೆ ಆಗುತ್ತಿದೆ. ಡಯಾಬೆಟಿಕ್ ಕಿಡ್ನಿ ಸಮಸ್ಯೆ ಈಗ ಉಲ್ಬಣಗೊಂಡಿದೆ. ಜೀವನಶೈಲಿಯೆ ಇದಕ್ಕೆ ಮೂಲ ಕಾರಣ. ಉತ್ತಮ ಜೀವನ ಶೈಲಿ ರೂಢಿಸಿಕೊಂಡರೆ ಕಿಡ್ನಿ ಸಮಸ್ಯೆಯಿಂದ … Read more

ಸಾಗರದ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ, ಏನೆಲ್ಲ ಸೌಲಭ್ಯ ಇರಲಿದೆ? ಮೀಟಿಂಗ್‌ನಲ್ಲಿ ಏನೆಲ್ಲ ಚರ್ಚೆಯಾಯ್ತು?

MLA-Beluru-Gopalakrishna-meeting-at-sagara

ಸಾಗರ : ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯನ್ನು (Hospital) 100 ಹಾಸಿಗೆ ಸಾಮರ್ಥ್ಯದಿಂದ 250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಪರಿವರ್ತಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ಸಾಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಶಾಸಕ ಬೇಳೂರು ಗೋಪಾಲಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿದರು. ಎಂಎಲ್‌ಎ ಏನೆಲ್ಲ ಹೇಳಿದರು? 300 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆಸ್ಪತ್ರೆಯ ಹಿಂಭಾಗದಲ್ಲಿರುವ ವಸತಿ ಗೃಹಗಳು … Read more

ಶಿವಮೊಗ್ಗದಲ್ಲಿ ಹೃದಯ ಉಚಿತ ತಪಾಸಣೆ ಶಿಬಿರ, ಎಲ್ಲಿ? ಯಾರೆಲ್ಲ ಭಾಗವಹಿಸಬಹುದು?

Shimoga-News-update

SHIMOGA NEWS, 21 SEPTEMBER 2024 : ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಸೆಪ್ಟೆಂಬರ್‌ 29ರಂದು ಹೃದಯ ಉಚಿತ ತಪಾಸಣಾ ಶಿಬಿರ (Camp) ಹಮ್ಮಿಕೊಳ್ಳಲಾಗಿದೆ.  ನಗರದ ಶಿವಮೂರ್ತಿ ವೃತ್ತದ ಬಳಿಯಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ. ಸೆ.28ರ ರಾತ್ರಿ 8ರೊಳಗೆ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ. ಜಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಈ ಶಿಬಿರದಲ್ಲಿ ಉಚಿತವಾಗಿ ಇಸಿಜಿ, ಇಕೋ … Read more

ಮತದಾನ ಮಾಡಿದವರಿಗೆ ನಂಜಪ್ಪ ಆಸ್ಪತ್ರೆಯಲ್ಲಿ ಭಾರಿ ರಿಯಾಯಿತಿ, ಯಾವ್ಯಾವ ಪರೀಕ್ಷೆಗೆ ಡಿಸ್ಕೌಂಟ್‌ ಇದೆ?

Nanjappa-Cancer-Care-Hospital-in-Shimoga-Sagara-Road.

SHIVAMOGGA LIVE NEWS | 6 MAY 2024 SHIMOGA : ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದರೆ ಲ್ಯಾಬ್‌ ಪರೀಕ್ಷೆಗಳ ಮೇಲೆ ರಿಯಾಯಿತಿ ನೀಡುವುದಾಗಿ ನಂಜಪ್ಪ ಆಸ್ಪತ್ರೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ರಿಯಾಯಿತಿ ಶಿವಮೊಗ್ಗ ಮತ್ತು ದಾವಣಗೆರೆಯ ನಂಜಪ್ಪ ಆಸ್ಪತ್ರೆ, ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ಲಭ್ಯ. ಲ್ಯಾಬ್‌ ಪರೀಕ್ಷೆಗಳ ಮೇಲೆ ಶೇ.25ರಷ್ಟು ರಿಯಾಯಿತಿ. ಇಸಿಜಿ, ಇಕೋ, ಟಿ.ಎಂ.ಟಿ, ಸಿ.ಟಿ, ಎಂ.ಆರ್‌.ಐ, ಅಲ್ಟ್ರಾ ಸೌಂಡ್‌ ಮತ್ತು ಮ್ಯಾಮೋಗ್ರಾಫಿ ಪರೀಕ್ಷೆಗಳ ಮೇಲೆ ಶೇ.15ರಷ್ಟು ರಿಯಾಯಿತಿ ನೀಡಲಾಗುತ್ತದೆ. … Read more

ಹೊಟ್ಟೆನೋವು ಅಂತಾ ಸಾಗರದ ಆಸ್ಪತ್ರೆಗೆ ಬಂದ ಮಹಿಳೆಗೆ 2 ಗಂಟೆ ಶಸ್ತ್ರಚಿಕಿತ್ಸೆ, ಹೊರ ಬಂತು ಕೆ.ಜಿ.ಗಟ್ಟಲೆ ಗೆಡ್ಡೆ

Operation-Theater-AI-Image-Medical-Purpose

SHIVAMOGGA LIVE NEWS | 25 APRIL 2024 SAGARA : ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಬೆಳೆದಿದ್ದ 7 ಕೆ.ಜಿ ತೂಕದ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ಹೊಸನಗರ ತಾಲೂಕು ಜಯನಗರ ನಿವಾಸಿ ಶಶಿಕಲಾ ಎಂಬುವವರಿಗೆ ಸಾಗರದ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ವೈದ್ಯರು 2 ಗಂಟೆ ಶಸ್ತ್ರಚಿಕಿತ್ಸೆ ನಡೆಸಿದರು. ಶಶಿಕಲಾ ಅವರು ಕೆಲವು ಸಮಯ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿರುವುದು ಗೊತ್ತಾಗಿದೆ. ವೈದ್ಯರಾದ ನಾಗೇಂದ್ರಪ್ಪ, ಪ್ರತಿಮಾ, ಶರ್ಮಿತಾ, ಬಿ.ಜಿ.ಸಂಗಮ್, … Read more