ಶಿವಮೊಗ್ಗ ಜಂಬೂ ಸವಾರಿಗೆ ಎರಡೇ ಆನೆ, ತಾಲೀಮು ಇಲ್ಲದೆ ಅಖಾಡಕ್ಕೆ ಇಳಿಸುತ್ತಿದೆ ಪಾಲಿಕೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಅಕ್ಟೋಬರ್ 2021 ಘಟನೆ 1 : ಶ್ರೀರಂಗಪಟ್ಟಣದ ದಸರಾ ಮೆರವಣಿಗೆಯಲ್ಲಿ ಗೋಪಾಲಸ್ವಾಮಿ ಎಂಬ ಆನೆ ಗಾಬರಿಯಾಗಿತ್ತು. ಪಟಾಕಿ ಶಬ್ದದಿಂದ ವಿಚಲಿತವಾದ ಗೋಪಾಲಸ್ವಾಮಿ ಆನೆ ಅಂಬಾರಿಯೊಂದಿಗೆ ತಿರುಗಿ ನಿಂತಿತ್ತು. ಇದರಿಂದ ಕೆಲಕ್ಷಣ ಗೊಂದಲ ಮತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಘಟನೆ 2 : 2016ರಲ್ಲಿ ಶಿವಮೊಗ್ಗದಲ್ಲಿ ಅಂಬಾರಿ ಹೊತ್ತು ನಿಲ್ಲುತ್ತಿದ್ದಂತೆ ಸಾಗರ ಆನೆಯ ಆರೋಗ್ಯದಲ್ಲಿ ವ್ಯತ್ಯಾಸವಾಯಿತು. ಬಳಿಕ ಆನೆ ಬದಲು ಲಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ಇರುವ ಅಂಬಾರಿಯ ಮೆರವಣಿಗೆ … Read more