ಶಿವಮೊಗ್ಗಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ, VISLನಲ್ಲಿ ನಡೆಯಲಿದೆ ಮಹತ್ವದ ಮೀಟಿಂಗ್‌

hd-kumaraswamy-visit-to-visl-in-bhadravathi

ಶಿವಮೊಗ್ಗ: ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್‌.ಡಿ.ಕುಮಾರಸ್ವಾಮಿ (HD Kumaraswamy) ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ (Shimoga) ವಿವಿಧ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ನ.29ರಂದು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shimoga Airport) ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆಗೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆವರೆಗೆ VISL ಕಾರ್ಖಾನೆಯಲ್ಲಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಂಜೆ 6.15ಕ್ಕೆ … Read more

ಶಿವಮೊಗ್ಗದ ಜೆಡಿಎಸ್‌ ಮುಖಂಡ ಸಿದ್ದಪ್ಪ ವಿಧಿವಶ

jDS-Leader-Siddappa-No-more

ಶಿವಮೊಗ್ಗ : ಜೆಡಿಎಸ್‌ ಮುಖಂಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದಪ್ಪ (62) ನಿಧನರಾಗಿದ್ದಾರೆ (No More). ಅನಾರೋಗ್ಯದ ಹಿನ್ನೆಲೆ ಬೆಳಗಿನ ಜಾವ ಸಿದ್ದಪ್ಪ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸಿದ್ದಪ್ಪ ಬಹುಕಾಲದಿಂದ ಜೆಡಿಎಸ್‌ ಪಕ್ಷದಲ್ಲಿ ಸಕ್ರಿಯವಾಗಿದ್ದರು. ಜಿಲ್ಲಾ ಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಸದ್ಯ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ಸಿದ್ದಪ್ಪ ನಿಧನಕ್ಕೆ ಪಕ್ಷದ ಪ್ರಮುಖರು, ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್‌ … Read more

ಶಿವಮೊಗ್ಗ ಪಾಲಿಕೆ ವಲಯ ಕಚೇರಿಗೆ ವಾರ್ಡ್‌ಗಳ ವಿಂಗಡಣೆ ಅವೈಜ್ಞಾನಿಕ, ಜೆಡಿಎಸ್‌ ಆಕ್ರೋಶ, ಮನವಿಯಲ್ಲಿ ಏನೇನಿದೆ?

JDS-Submits-Memorandum-about-Palike-division-office

ಶಿವಮೊಗ್ಗ : ಆಡಳಿತದ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆಯನ್ನು ಮೂರು ವಿಭಾಗವಾಗಿ (Division) ವಿಂಗಡಿಸಲಾಗಿದೆ. ಆದರೆ ಈ ವಿಂಗಡಣೆಯಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಕುವೆಂಪು ರಂಗಮಂದಿರದಲ್ಲಿ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್‌ ನೇತೃತ್ವದಲ್ಲಿ ಜೆಡಿಎಸ್‌ ನಗರ ಅಧ್ಯಕ್ಷ ದೀಪಕ್‌ ಸಿಂಗ್‌ ಮನವಿ ಸಲ್ಲಿಸಿದರು. ಏನೆಲ್ಲ ನ್ಯೂನತೆಗಳಿವೆ? ಪಾಲಿಕೆಯ ವಲಯ 1ರ ಕಚೇರಿಯು ವಿನೋಬಗರದಲ್ಲಿದೆ. ಈ ವಲಯಕ್ಕೆ ಟಿಪ್ಪು ನಗರ, ಸವಾಯಿ ಪಾಳ್ಯ ಮತ್ತು ವಿದ್ಯಾನಗರವನ್ನು ಸೇರಿಸಲಾಗಿದೆ. … Read more

ಜಮೀರ್‌ ರಾಜೀನಾಮೆಗೆ ಒತ್ತಾಯ, ಶಿವಮೊಗ್ಗದಲ್ಲಿ ಹೋರಾಟ

Jds-protest-against-zameer-ahmed-in-shimoga.

SHIMOGA NEWS, 16 NOVEMBER 2024 : ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಎಂದು ನಿಂದಿಸಿದ ಜಮೀರ್‌ ಅಹಮದ್‌ ಖಾನ್‌ ಅವರನ್ನು ತಕ್ಷಣವೆ ಸಂಪುಟದಿಂದ (Cabinet) ಕೈಬಿಡಬೇಕು. ಜಮೀರ್‌ ಅಹಮದ್‌ ಖಾನ್‌ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಜೆಡಿಎಸ್‌ ಕಾರ್ಯಕರ್ತರು, ಜೆಡಿಎಸ್‌ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರನ್ನು ಜಮೀರ್‌ ಅಹಮದ್‌ ಅವರು ನಿಂದಿಸಿದ್ದಾರೆ. ಜಮೀರ್‌ ಅಹಮದ್‌ … Read more

‘ಸೂಕ್ತ ಬೆಳಕಿಲ್ಲ, ಕಿರಿದಾದ ಪ್ರವೇಶ ದ್ವಾರ’, ಶಿವಮೊಗ್ಗ ಡಿಸಿ ಕಚೇರಿ ಮುಂದೆ ವ್ಯಾಪಾರಿಗಳ ಆಕ್ರೋಶ

120724 vinobanagara shivalaya vendors protest jds

SHIVAMOGGA LIVE NEWS | 12 JULY 2024 SHIMOGA : ವಿನೋಬನಗರ 100 ಅಡಿ ರಸ್ತೆ ಶಿವಾಲಯ ಪಕ್ಕದಲ್ಲಿನ ಮಾರುಕಟ್ಟೆ (Market) ಸಂಕೀರ್ಣಕ್ಕೆ ಸೂಕ್ತ ಬೆಳಕಿನ ವ್ಯವಸ್ಥೆ ಮತ್ತು ಪ್ರವೇಶದ್ವಾರದ ನ್ಯೂನತೆ ಸರಿಪಡಿಸುವಂತೆ ಆಗ್ರಹಿಸಿ ಜೆಡಿಎಸ್ ನೇತೃತ್ವದಲ್ಲಿ ವ್ಯಾಪಾರಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಶಾಂತವೇರಿ ಗೋಪಾಲಗೌಡ ವೃತ್ತದಿಂದ ಭಗತ್‌ಸಿಂಗ್ ವೃತ್ತದವರೆಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗಾಗಿ ಶಿವಾಲಯದ ಬಳಿ ಮಹಾನಗರ ಪಾಲಿಕೆಯಿಂದ ಮಾರುಕಟ್ಟೆ ನಿರ್ಮಿಸಲಾಗಿದೆ. ಹೂವು, ಹಣ್ಣು ಮತ್ತು ತರಕಾರಿ … Read more

‘ಭ್ರಮೆಯಲ್ಲಿದೆ ಕಾಂಗ್ರೆಸ್‌’, ಜೆಡಿಎಸ್‌ ಆರೋಪ, ‘ಅತಿವೃಷ್ಟಿ ನಿರ್ವಹಣೆ ಹೇಗೆ?’, ಮಾಜಿ ಶಾಸಕ ಪ್ರಶ್ನೆ

Kadidal-Gopal-and-KB-Prasanna-Kumar-press-meet

SHIVAMOGGA LIVE NEWS | 30 MAY 2024 SHIMOGA : ವಿಧಾನ ಪರಿಷತ್ ಚುನಾವಣೆಯನ್ನು ಕಾಂಗ್ರೆಸ್ ಹಣ ಬಲದಲ್ಲಿ (Money Power) ಗೆಲ್ಲಬಹುದು ಎಂಬ ಭ್ರಮೆಯಲ್ಲಿದೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಕಡಿದಾಳ್‌ ಗೋಪಾಲ್ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಋತ್ಯ ಶಿಕ್ಷಕರ ಕ್ಷೇತ್ರದ ಭೋಜೇಗೌಡ ಹಾಗೂ ಪದವೀಧರ ಕ್ಷೇತ್ರದ ಡಾ.ಧನಂಜಯ ಸರ್ಜಿ ಪರ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ಆದರೆ, ಕಾಂಗ್ರೆಸ್ ಹಣ ಹಂಚುವ ಮೂಲಕ ಮತ ಸೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಡಾ.ಧನಂಜಯ … Read more

ಶಿವಮೊಗ್ಗದಲ್ಲಿ ಬೀದಿಗಿಳಿದ ಜೆಡಿಎಸ್‌ ಕಾರ್ಯಕರ್ತರು, ಸಿಬಿಐ ತನಿಖೆಗೆ ಪಟ್ಟು, ಡಿಕೆಶಿ ವಿರುದ್ಧ ಸಿಟ್ಟು

JDS-held-protest-in-Shimoga-againt-pen-drive-case.

SHIVAMOGGA LIVE NEWS | 15 MAY 2024 SHIMOGA : ಅಶ್ಲೀಲ ವಿಡಿಯೋ ಪ್ರಕರಣ ಮತ್ತು ಪೆನ್‌ಡ್ರೈವ್‌ (Pen Drive) ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾ ಜೆಡಿಎಸ್‌ ವತಿಯಿಂದ ಶಿವಮೊಗ್ಗದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಯಾರೆಲ್ಲ ಏನೇನು ಹೇಳಿದರು? ಶಾರದಾ ಪೂರ್ಯಾನಾಯ್ಕ್‌, ಶಾಸಕಿ ‘ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಸ್ಐಟಿ ಮೇಲೆ ನಂಬಿಕೆ … Read more

ತೀರ್ಥಹಳ್ಳಿಯಲ್ಲಿ ಡಿಕೆಶಿ ರಾಜೀನಾಮೆಗೆ ಪಟ್ಟು, ಸಿಬಿಐ ತನಿಖೆಗೆ ಆಗ್ರಹ

JDS-protest-in-Thirthahalli-submit-memorandum

SHIVAMOGGA LIVE NEWS | 14 MAY 2024 THIRTHAHALLI : ಹಾಸನ ಪೆನ್‌ಡ್ರೈವ್‌ ಪ್ರಕರಣದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೆಸರು ಕೇಳಿ ಬಂದಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರದ ಎಸ್‌ಐಟಿ ತನಿಖೆ ಬದಲು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ತೀರ್ಥಹಳ್ಳಿ ತಾಲೂಕು ಜೆಡಿಎಸ್‌ ವತಿಯಿಂದ ಆಗ್ರಹಿಸಿಲಾಯಿತು. ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರ ಜೆಡಿಎಸ್‌ ಕಾರ್ಯಕರ್ತರು, ಪೆನ್‌ ಡ್ರೈವ್‌ ವಿಚಾರದಲ್ಲಿ ಜೆಡಿಎಸ್‌ ಪಕ್ಷದ ನಾಯಕರ ವಿರುದ್ಧ ಅಪವಾದ ಹೊರಿಸಿ ಪಕ್ಷವನ್ನು ದರ್ಬಲಗೊಳಿಸುವ … Read more

ಶಿವಮೊಗ್ಗ ಜೆಡಿಎಸ್‌ ಕಚೇರಿಗೆ ಸಂಸದ ರಾಘವೇಂದ್ರ, ಬಿಜೆಪಿ ಮುಖಂಡರು ಭೇಟಿ

BY-Raghavendra-Visit-JDS-Office-in-Shimoga

SHIVAMOGGA LIVE NEWS | 17 MARCH 2024 SHIMOGA : ಜಿಲ್ಲಾ ಜೆಡಿಎಸ್‌ ಕಚೇರಿಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿದ್ದರು. ನೆಹರೂ ರಸ್ತೆಯಲ್ಲಿರುವ ಕಚೇರಿಯಲ್ಲಿ ಜೆಡಿಎಸ್‌ ಕಾರ್ಯಕರ್ತರ ಜೊತೆಗೆ ರಾಘವೇಂದ್ರ ಸಭೆ ನಡೆಸಿದರು. ಈ ಸಂದರ್ಭ ಸಂಸದರಿಗೆ ಜೆಡಿಎಸ್‌ ಕಾರ್ಯಕರ್ತೆಯರು ಆರತಿ ಬೆಳಗಿ ಸ್ವಾಗತಿಸಿದರು. ಸಭೆಯಲ್ಲಿ ರಾಘವೇಂದ್ರ ಹೇಳಿದ್ದೇನು? ತುರ್ತು ಪರಿಸ್ಥಿತಿ ವಿರೋಧಿಸಿ ಜನಸಂಘ ಮತ್ತು ಜನತಾ ಪರಿವಾರ ಒಟ್ಟಾಗಿ ಹೋರಾಟ ಮಾಡಿದ್ದು ಇತಿಹಾಸ. ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡಬೇಕಿದೆ. ಪ್ರಚಾರ … Read more

ಕೊಲೆ ಯತ್ನ ಕೇಸ್‌ ವಿರುದ್ಧ ಪೊಲೀಸ್‌ ಠಾಣೆ ಮುಂದೆ ಬಿಜೆಪಿ, ಜೆಡಿಎಸ್‌ ಪಕ್ಷದಿಂದ ಹೋರಾಟ, ಏನಿದು ಪ್ರಕರಣ?

bjp-jds-workers-protest-in-front-of-bhadaravathi-hosamane-police-station

SHIVAMOGGA LIVE NEWS | 20 DECEMBER 2023 BHADRAVATHI : ಡೈರಿ ಚುನಾವಣೆ ವೇಳೆ ವಿನಾಕಾರಣ ಇಬ್ಬರು ಮುಖಂಡರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ಧದ ಪ್ರಕರಣವನ್ನು ತಕ್ಷಣವೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ನಗರದ ಹೊಸಮನೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು. ಕೊಲೆ ಯತ್ನ ಪ್ರಕರಣ ದಾಖಲು ತಾಲ್ಲೂಕಿನ ಕಾಚಗೊಂಡನಹಳ್ಳಿ ಗ್ರಾಮದ ಡೈರಿ ಚುನಾವಣೆ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಡಿ.ಚಂದ್ರಶೇಖರ್ ಮತ್ತು ಡಿ.ಆನಂದ ಅವರು … Read more