ಮನೆಗೆ ಹೊರಟಿದ್ದವನ ಪಾಲಿಗೆ ಜವರಾಯನಂತೆ ಬಂದ ಕ್ಯಾಂಟರ್, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಬೈಕ್ ಸವಾರ
BHADRAVATHI | ಕ್ಯಾಂಟರ್ (CANTER) ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ಶಿವಮೊಗ್ಗದ ಮಂಡೇನಕೊಪ್ಪದ ಚಂದುನಾಯ್ಕ (35) ಗಾಯಗೊಂಡಿದ್ದಾರೆ. ಶಿವಮೊಗ್ಗ – ತರೀಕರೆ ರಸ್ತೆಯ ಹೆಚ್.ಕೆ.ಜಂಕ್ಷನ್ ಬಳಿ ಘಟನೆ ಸಂಭವಿಸಿದೆ. ಭದ್ರಾವತಿ ಗೋಣಿ ಬೀಡು ಗ್ರಾಮದಲ್ಲಿ ಪರಿಚಿತರ ಮನೆಗೆ ಚಂದುನಾಯ್ಕ ಭೇಟಿ ನೀಡಿದ್ದರು. ಸೆ. 30ರ ಸಂಜೆ 7.30ರ ಹೊತ್ತಿಗೆ ಶಿವಮೊಗ್ಗದ ಮಂಡೇನಕೊಪ್ಪದಲ್ಲಿರುವ ಮನೆಗೆ ತೆರಳುತ್ತಿದ್ದರು. ಹೆಚ್.ಕೆ.ಜಂಕ್ಷನ್ ಬಳಿ ಕ್ಯಾಂಟರ್ (CANTER) ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಚಾಲಕ … Read more