ಇನ್ನೋವಾ ಕಾರು ಅಡ್ಡಗಟ್ಟಿ ಫೋನ್‌ ಪೇ ಮೂಲಕ ದುಡ್ಡು ಹಾಕಿಸಿಕೊಂಡು, ಮೊಬೈಲ್‌ಗಳ ದರೋಡೆ

Sagara-Road-Gadikoppa-Shimoga-city

ಶಿವಮೊಗ್ಗ: ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದವರನ್ನು ಅಡ್ಡಗಟ್ಟಿ, ಬೆದರಿಸಿ ದರೋಡೆ (robbery) ಮಾಡಲಾಗಿದೆ. ಶಿವಮೊಗ್ಗದ ಸಾಗರ ರಸ್ತೆಯ ವಾಜಪೇಯಿ ಲೇಔಟ್ ಬಳಿ ಘಟನೆ ನಡೆದಿದೆ. ದ್ವಿಚಕ್ರ ವಾಹದಲ್ಲಿ ಬಂದ ಮೂವರು ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದ ಒಂದು ರೈಲು ಜನವರಿ 4ರಂದು ರದ್ದು ವಿನೋಬನಗರದ ನಿವಾಸಿ ಬಾಬು ಎಂಬುವವರು ಶ್ವೇತಾ ಅವರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರು ಕಾರನ್ನು ಅಡ್ಡಗಟ್ಟಿದ್ದಾರೆ. ಬಾಬು ಅವರ ಮೇಲೆ ಹಲ್ಲೆ ನಡೆಸಿ, ಅವರ ಫೋನ್ ಪೇ ಮೂಲಕ … Read more

ಶಿವಮೊಗ್ಗದ ಮಹಿಳೆಯರೆ ಎಚ್ಚರ, ವಾಕಿಂಗ್‌ ವೇಳೆ ನಡೆಯಿತು ದುಷ್ಕೃತ್ಯ, ದೂರು ದಾಖಲು

Crime-News-General-Image

ಶಿವಮೊಗ್ಗ: ಕೆಂಚಪ್ಪ ಬಡಾವಣೆಯ ಅಂಗನವಾಡಿ ಸಮೀಪ ವಾಕಿಂಗ್‌ ಮಾಡುತ್ತಿದ್ದ ವೃದ್ಧೆಯೊಬ್ಬರ ಚಿನ್ನದ ಸರವನ್ನು (Chain snatching) ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿರುವವರಿಗೆ GOOD NEWS, ಇಲ್ಲಿದೆ ಉತ್ತಮ ವೇತನದ ಉದ್ಯೋಗ ಮನೆಯ ಮುಂದೆ ವಾಕಿಂಗ್ ಮಾಡುತ್ತಿದ್ದ ಜಯಲಕ್ಷ್ಮಿ ಎಂಬುವವರನ್ನು ಹಿಂಬಾಲಿಸಿದ ಇಬ್ಬರು ಅಪರಿಚಿತರು, ಅವರ ಕೊರಳಲ್ಲಿದ್ದ ಸುಮಾರು 15 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಕಳ್ಳರು ಜಯಲಕ್ಷ್ಮಿ ಅವರನ್ನು ಕೆಳಕ್ಕೆ ತಳ್ಳಿದ್ದು, ಅವರು … Read more

ವಿಷ ಸೇವಿಸಿದ್ದ ಭದ್ರಾವತಿಯ ಗೃಹಿಣಿ ಚಿಕಿತ್ಸೆ ಫಲಿಸದೆ ಸಾವು

Bhadravathi-ayesha-ends-life

ಭದ್ರಾವತಿ: ಗಂಡನ ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆಯಿಷಾ (23) ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ. (mother) ಭದ್ರಾವತಿಯ ಸಾದತ್‌ ಕಾಲೋನಿಯಲ್ಲಿ ಮೂರು ದಿನದ ಹಿಂದೆ ಆಯಿಷಾ ವಿಷ ಸೇವಿಸಿದ್ದರು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೃತರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದು, ಹಳೇನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಇವತ್ತು ಪಲ್ಸ್‌ ಪೋಲಿಯೊ, ಶಿವಮೊಗ್ಗ ಜಿಲ್ಲೆಯಲ್ಲಿ ಹೇಗಿದೆ ವ್ಯವಸ್ಥೆ? ಎಷ್ಟು ಬೂತ್‌ ಸ್ಥಾಪಿಸಲಾಗಿದೆ?