ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ, ಯುವಕ ಸಾವು, ಮತ್ತೊಬ್ಬನಿಗೆ ಗಂಭೀರ ಪೆಟ್ಟು

Bike-Crash-youth-succumbed-at-Thirthahalli.

ಕುಂಸಿ: ತೀರ್ಥಹಳ್ಳಿ ತಾಲೂಕು ಹುಂಚದಕಟ್ಟೆ ಬಳಿ ಭಾನುವಾರ ರಾತ್ರಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ (bike crash) ಸಮೀಪದ ಸನ್ನಿವಾಸದ ಯುವಕ ಅವಿನಾಶ (23) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ನಿತ್ಯಾನಂದಗೆ ಗಂಭೀರ ಪೆಟ್ಟಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಿನಾಶ್ ಹಾಗೂ ಆತನ ಸ್ನೇಹಿತ ನಿತ್ಯಾನಂದ ಭಾನುವಾರ ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಗೆ ಹೋಗಿ ರಾತ್ರಿ ವಾಪಸ್ ಬರುವಾಗ ಹುಂಚದಕಟ್ಟೆ ಬಳಿ ನಿಯಂತ್ರಣ ತಪ್ಪಿ ಬೈಕ್‌ ವಿದ್ಯುತ್‌ ಕಂಬಕ್ಕೆ ಗುದ್ದಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಬೊಲೇರೋ ವಾಹನ ಪಲ್ಟಿ, ಮಹಿಳೆ ಸಾವು, ಎಲ್ಲಿ? ಹೇಗಾಯ್ತು ಘಟನೆ?

Bolero-Incident-at-Bhadravathi-Bisilumane.

ಭದ್ರಾವತಿ: ಚಾಲಕನ ನಿಯಂತ್ರಣ ತಪ್ಪಿ ಬೊಲೇರೋ ವಾಹನ ಪಲ್ಟಿಯಾಗಿದ್ದು (Bolero accident) ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಭದ್ರಾವತಿಯ ದೊಡ್ಡೇರಿ ಸಮೀಪದ ನೆಟ್ಟಗಲಟ್ಟಿ ಗ್ರಾಮದ ಲಕ್ಷ್ಮಮ್ಮ (48) ಮೃತರು. ಕೆಲಸ ಮುಗಿಸಿ ಹೋಗುತ್ತಿದ್ದರು ಗಾಜನೂರು ಸಮೀಪದ ನರ್ಸರಿಯಲ್ಲಿ ಕೆಲಸ ಮುಗಿಸಿ ಬೊಲೇರೋ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಭದ್ರಾವತಿಯ ಬಿಸಿಲುಮನೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬೊಲೇರೋ ಪಲ್ಟಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಲಕ್ಷ್ಮಮ್ಮ ಸ್ಥಳದಲ್ಲೆ ಸಾವನ್ನಪ್ಪಿದಾರೆ. ಇದನ್ನೂ ಓದಿ » ಕುಟುಂಬದವರೆಲ್ಲ ಮಲಗಿದ್ದಾಗಲೇ ಮನೆಯಲ್ಲಿ ಕಳ್ಳತನ, ಲಕ್ಷ ಲಕ್ಷದ ಚಿನ್ನಾಭರಣ, … Read more