ಕೊಮ್ಮನಾಳ್‌ನಲ್ಲಿ ರಾತ್ರಿ ಇದ್ದ ಬೈಕ್ ಬೆಳಗ್ಗೆ ನಾಪತ್ತೆ, ಆಗಿದ್ದೇನು?
ಶಿವಮೊಗ್ಗ: ಕೊಮ್ಮನಾಳ್ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ (Bike theft). ಮನೆ ಮುಂದೆ ನಿಲ್ಲಿಸಿದ್ದ ಬೈಕ್ ರಾತ್ರೋರಾತ್ರಿ ನಾಪತ್ತೆಯಾಗಿದೆ. ಹಾಲೇಶಪ್ಪ ಎಂಬುವವರು ತಮ್ಮ ಹೋಂಡಾ ಆಕ್ಟಿವಾ ಬೈಕನ್ನು ಸಂಜೆ ಮನೆಯ ಮುಂದೆ ನಿಲ್ಲಿಸಿದ್ದರು. ಅಂದು ಮಧ್ಯರಾತ್ರಿವರೆಗೆ ಬೈಕ್ ಅಲ್ಲೇ ಇತ್ತು. ಮಾರನೇ ದಿನ ಬೆಳಗ್ಗೆ ನೋಡಿದಾಗ ಬೈಕ್ ಕಾಣೆಯಾಗಿತ್ತು ಎಂದು ಆರೋಪಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿಕಾರಿಪುರದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ, ಆಗಿದ್ದೇನು?