ಕುವೈತ್ ದೇಶದಿಂದ ಶಿವಮೊಗ್ಗಕ್ಕೆ ಬಂತು ಆಕ್ಸಿಜನ್ ಕಂಟೈನರ್, ಎಷ್ಟು ಪೂರೈಕೆಯಾಗಿದೆ? ಎಲ್ಲಿ ಸಂಗ್ರಹಿಸಲಾಯ್ತು?

280521 Oxygen Tanker From Kuwait Comes to Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MAY 2021 ಕರೋನ ಪರಿಸ್ಥಿತಿ ನಿರ್ವಹಣೆಗೆ ವಿದೇಶದಿಂದಲೂ ಶಿವಮೊಗ್ಗಕ್ಕೆ ಆಕ್ಸಿಜನ್ ಬಂದಿದೆ. ಕುವೈತ್ ದೇಶದಿಂದ 20 ಟನ್ ಆಕ್ಸಿಜನ್ ಸರಬರಾಜಾಗಿದೆ. ಮಂಗಳೂರಿನಿಂದ ಬಂದಿದ್ದ ಆಕ್ಸಿಜನ್ ಟ್ಯಾಂಕರನ್ನು ಶಿವಮೊಗ್ಗದ ಖಾಸಗಿ ಸಂಸ್ಥೆಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಕುವೈತ್‍ ದೇಶದಿಂದ ಹಡಗು ಮೂಲಕ ಆಕ್ಸಿಜನ್ ಕಂಟೈನರ್‍ಗಳು ಮಂಗಳೂರು ಬಂದರಿಗೆ ತಲುಪಿದೆ. ಈ ಪೈಕಿ 20 ಟನ್ ಕಂಟೈನರ್ ಒಂದು ಶಿವಮೊಗ್ಗಕ್ಕೆ ಬಂದಿದೆ. ಕೇಂದ್ರ ಸರ್ಕಾರದ ಹಂಚಿಕೆಯಂತೆ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. … Read more