ಕುವೈತ್ ದೇಶದಿಂದ ಶಿವಮೊಗ್ಗಕ್ಕೆ ಬಂತು ಆಕ್ಸಿಜನ್ ಕಂಟೈನರ್, ಎಷ್ಟು ಪೂರೈಕೆಯಾಗಿದೆ? ಎಲ್ಲಿ ಸಂಗ್ರಹಿಸಲಾಯ್ತು?

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MAY 2021

ಕರೋನ ಪರಿಸ್ಥಿತಿ ನಿರ್ವಹಣೆಗೆ ವಿದೇಶದಿಂದಲೂ ಶಿವಮೊಗ್ಗಕ್ಕೆ ಆಕ್ಸಿಜನ್ ಬಂದಿದೆ. ಕುವೈತ್ ದೇಶದಿಂದ 20 ಟನ್ ಆಕ್ಸಿಜನ್ ಸರಬರಾಜಾಗಿದೆ. ಮಂಗಳೂರಿನಿಂದ ಬಂದಿದ್ದ ಆಕ್ಸಿಜನ್ ಟ್ಯಾಂಕರನ್ನು ಶಿವಮೊಗ್ಗದ ಖಾಸಗಿ ಸಂಸ್ಥೆಯಲ್ಲಿ ಸಂಗ್ರಹಿಸಿ ಇಡಲಾಗಿದೆ.

ಕುವೈತ್‍ ದೇಶದಿಂದ ಹಡಗು ಮೂಲಕ ಆಕ್ಸಿಜನ್ ಕಂಟೈನರ್‍ಗಳು ಮಂಗಳೂರು ಬಂದರಿಗೆ ತಲುಪಿದೆ. ಈ ಪೈಕಿ 20 ಟನ್ ಕಂಟೈನರ್ ಒಂದು ಶಿವಮೊಗ್ಗಕ್ಕೆ ಬಂದಿದೆ. ಕೇಂದ್ರ ಸರ್ಕಾರದ ಹಂಚಿಕೆಯಂತೆ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.

ಖಾಸಗಿ ಸಂಸ್ಥೆಯಲ್ಲಿ ಆಕ್ಸಿಜನ್ ಸಂಗ್ರಹ

ಕುವೈತ್‍ ದೇಶದಿಂದ ಬಂದಿರುವ ಆಕ್ಸಿಜನ್ ಅನ್ನು ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಇರುವ ಖಾಸಗಿ ಸಂಸ್ಥೆಯಲ್ಲಿ ಸಂಗ್ರಹಿಸಿ ಇಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಪರ ಜಿಲ್ಲಾಧಿಕಾರಿ ಹಾಗೂ ಆಕ್ಸಿಜನ್ ನಿರ್ವಹಣೆ ವ್ಯವಸ್ಥೆಯ ನೋಡಲ್ ಅಧಿಕಾರಿ ಜಿ.ಅನುರಾಧ, ಸದ್ಯ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಆಕ್ಸಿಜನ್ ಸಂಗ್ರಹಕ್ಕೆ ವ್ಯವಸ್ಥೆ ಇರದ ಕಾರಣ, ಜಿಲ್ಲೆಯಲ್ಲಿ ಎರಡು ಖಾಸಗಿ ಸಂಸ್ಥೆಗಳಲ್ಲಿ ಆಕ್ಸಿಜನ್ ಸಂಗ್ರಹ ಮಾಡಲಾಗುತ್ತಿದೆ. ಕುವೈತ್‍ನಿಂದ ಬಂದ ಆಕ್ಸಿಜನ್ ಅನ್ನು ಖಾಸಗಿ ಸಂಸ್ಥೆಯಲ್ಲಿ ಸದ್ಯಕ್ಕೆ ಸಂಗ್ರಹಿಸಲಾಗಿದೆ ಎಂದರು.

ಇದರ ಬಳಕೆ ಹೇಗೆ?

ವಿಐಎಸ್‍ಎಲ್‍ ಕಾರ್ಖಾನೆ ಮತ್ತು ಮೆಗ್ಗಾನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಇದು ಸದ್ಯ ಜಿಲ್ಲೆಗೆ ಸಾಕಾಗುತ್ತಿದೆ. ಈಗ ಕುವೈತ್‍ನಿಂದ ಆಕ್ಸಿಜನ್ ಬಂದಿರುವುದು ಹೆಚ್ಚುವರಿಯಾಗಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ 19 ಕಎಲ್‍ಡಿ ಆಕ್ಸಿಜನ್ ಉತ್ಪಾದನೆಯಾಗುತ್ತಿದ್ದು, ಇದನ್ನು ಮೆಗ್ಗಾನ್ ಆಸ್ಪತ್ರೆಗೆ ಬಳಕೆ ಮಾಡಲಾಗುತ್ತಿದೆ. ಇನ್ನು, ವಿಐಎಸ್ಎಲ್‍ನಲ್ಲಿ ಉತ್ಪಾದನೆ ಆಗುತ್ತಿರುವುದನ್ನು ಜಂಬೋ ಸಿಲಿಂಡರ್‍ಗಳಲ್ಲಿ ಫಿಲ್ಲಿಂಗ್ ಮಾಡಿ, ಜಿಲ್ಲೆಯ ವಿವಿಧ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.

ಇದನ್ನೂ ಓದಿ | ಶಿವಮೊಗ್ಗದ ಗ್ರಾಮಗಳೆ ಕರೋನ ಹಾಟ್ ಸ್ಪಾಟ್, ಶೇ.54ರಷ್ಟು ಸೋಂಕಿತರು ಹಳ್ಳಿ ವಾಸಿಗಳು, ಇಲ್ಲಿದೆ ತಾಲೂಕುವಾರು ಡಿಟೇಲ್ಸ್

ಈಗ ಬಂದಿರುವ ಆಕ್ಸಿಜನ್‍ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳು ಬೇಡಿಕೆ ಸಲ್ಲಿಸಿದರೆ ನಿಗದಿತ ಹಣ ಪಡೆದು ಅವುಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ.

ಸದ್ಯ ಜಿಲ್ಲೆಯಲ್ಲಿ ಕರೋನ ಪ್ರಕರಣಗಳು ತಗ್ಗುತ್ತಿವೆ. ಅಕ್ಸಿಜನ್ ಬಳಕೆ ಪ್ರಮಾಣವೂ ಇಳಿಕೆಯಾಗುತ್ತಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಆಕ್ಸಿಜನ್ ಸಂಗ್ರಹ ಮಾಡಿಟ್ಟುಕೊಳ್ಳುವುದು ಆಡಳಿತಕ್ಕೆ ಅನಿವಾರ್ಯವಾಗಿದೆ.

ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment