ಮೆಗ್ಗಾನ್ ಆಸ್ಪತ್ರೆ ಎಮರ್ಜನ್ಸಿ ವಾರ್ಡ್ ಮುಂದೆ ಸುಸ್ತಾಗಿ ಬಿದ್ದ ವ್ಯಕ್ತಿ ಸಾವು, ಪತ್ತೆಯಾಗದ ಗುರುತು
ಶಿವಮೊಗ್ಗ: ಡಿಸೆಂಬರ್ 28ರಂದು ಮೆಗ್ಗಾನ್ ಆಸ್ಪತ್ರೆಯ (McGann Hospital) ಎಮರ್ಜನ್ಸಿ ವಾರ್ಡ್ ಎದುರು ಸುಸ್ತಾಗಿ ಬಿದಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಂದಾಜು 35 ವರ್ಷದ ವ್ಯಕ್ತಿಯು ಮೆಗ್ಗಾನ್ ಆಸ್ಪತ್ರೆಯ ಎಮರ್ಜನ್ಸಿ ವಾರ್ಡ್ ಮುಂಭಾಗ ಸುಸ್ತಾಗಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪರಿಶೀಲಿಸಿದಾಗ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವ್ಯಕ್ತಿಯು 5.5 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ. ಮೈಮೇಲೆ ತಿಳಿಹಸಿರು ಕಂದು ಮಿಶ್ರಿತ ಅರ್ಧ ತೋಳಿನ ಶರ್ಟ್ ಹಾಗೂ … Read more