ಹಿರಿಯರ ಪೂಜೆ ಮುಗಿಸಿ ಸಂಬಂಧಿಕರು, ಸ್ನೇಹಿತರನ್ನು ಕಳುಹಿಸಿದ ಮೇಲೆ ಮನೆಯವರಿಗೆ ಕಾದಿತ್ತು ಬಿಗ್‌ ಶಾಕ್

Vidyanagara-Smart-city-board

ಶಿವಮೊಗ್ಗ: ಹಿರಿಯರ ಪೂಜೆ ಸಂದರ್ಭ ಮನೆಯಲ್ಲಿ ಕಳಶಕ್ಕೆ ಹಾಕಿದ್ದ ಬಂಗಾರದ ಸರ (Gold Chain) ನಾಪತ್ತೆಯಾಗಿದೆ. ಶಿವಮೊಗ್ಗದ ವಿದ್ಯಾನಗರದ ಶಶಿಕುಮಾರ್‌ ಎಂಬುವವರ ಮನೆಯಲ್ಲಿ ಘಟನೆಯಾಗಿದೆ. ಶಶಿಕುಮಾರ್‌ ಅವರ ಮನೆಯಲ್ಲಿ ಹಿರಿಯರ ಪೂಜೆ ವೇಳೆ ಅವರ ತಾಯಿಯ ಬಂಗಾರದ ಸರವನ್ನು ಕಳಶಕ್ಕೆ ಸುತ್ತಿದ್ದರು. ರಾತ್ರಿ 7.30ರ ಬಳಿಕ ಸಂಬಂಧಿಕರು, ಸ್ನೇಹಿತರು ಸೇರಿ ಹಲವರು ಊಟಕ್ಕೆ ಬಂದಿದ್ದರು. ರಾತ್ರಿ 9.30ರ ಹೊತ್ತಿಗೆ ಕಳಶಕ್ಕೆ ಸುತ್ತಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಊಟಕ್ಕೆ ಬಂದವರಿಗೆ ವಿಚಾರಿಸಿದ ಶಶಿಕುಮಾರ್‌ ಅವರು ಬಳಿಕ … Read more

ಪೂಜೆ ಮಾಡಿ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್‌ ಮಾಯ

crime name image

SHIMOGA NEWS, 14 OCTOBER 2024 : ವಿಜಯ ದಶಮಿಯಂದು ಪೂಜೆ ಸಲ್ಲಿಸಿ ಊರಿನ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್‌ (Tractor) ಕಳುವಾಗಿದೆ. ಶಿವಮೊಗ್ಗ ತಾಲೂಕು ಆಯನೂರು – ಹಾರನಹಳ್ಳಿ ರಸ್ತೆಯ ನರಸಿಂಹ ದೇವಸ್ಥಾನದ ಮುಂಭಾಗ ಘಟನೆ ಸಂಭವಿಸಿದೆ. ಚನ್ನಹಳ್ಳಿಯ ರೈತ ಪಾಲಾಕ್ಷಪ್ಪ ಅವರು ಟ್ರಾಕ್ಟರ್‌ಗೆ ಪೂಜೆ ಸಲ್ಲಿಸಿ ದೇಗುಲದ ಮುಂದೆಯೇ ಟ್ರಾಕ್ಟರ್‌ ಅನ್ನು ರಾತ್ರಿ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ 8 ಗಂಟೆ ಹೊತ್ತಿಗೆ ದೇಗುಲದ ಬಳಿ ಹೋದಾಗ ಟ್ರಾಕ್ಟರ್‌ ಕಾಣಿಸಲಿಲ್ಲ. ಎಲ್ಲೆಡೆ ಹುಡುಕಿದ ಪಾಲಾಕ್ಷಪ್ಪ ಅವರು … Read more

ಶಿವಮೊಗ್ಗದಿಂದ ಕೆಲಸಕ್ಕೆಂದು ಆಫ್ರಿಕಾಗೆ ಹೋಗಿದ್ದ, ಭಾರತಕ್ಕೆ ಹಿಂತಿರುಗಿ 7 ವರ್ಷವಾದರೂ ಮನೆಗೆ ಬಾರದ ವ್ಯಕ್ತಿ

200123 Police Jeep With Light jpg

SHIVAMOGGA LIVE NEWS | 26 JUNE 2024 SHIMOGA: ಕೆಲಸಕ್ಕೆಂದು ಆಫ್ರಿಕಾ ದೇಶಕ್ಕೆ ತೆರಳಿದ್ದ ವ್ಯಕ್ತಿ ಭಾರತಕ್ಕೆ ಮರಳಿದ್ದು ಮನೆಗೆ ಹಿಂತಿರುಗಿಲ್ಲ. ಏಳು ವರ್ಷದಿಂದ ಆತ ಕಾಣೆಯಾಗಿದ್ದಾನೆ (Missing) ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಇಬ್ರಾಹಿಂ ಖಲೀಲ್‌ ವುಲ್ಲಾ (39) ಕಾಣೆಯಾದಾತ. ವೆಸ್ಟ್‌ ಅಫ್ರಿಕಾದ ಸಿರಾ ಲಿಯೋನ್‌ ಎಂಬಲ್ಲಿಗೆ ಇಬ್ರಾಹಿಂ ಖಲೀಲ್‌ ವುಲ್ಲಾ ಕೆಲಸಕ್ಕೆ ತೆರಳಿದ್ದ. 2016ರಲ್ಲಿ ಈತ ಭಾರತಕ್ಕೆ ಹಿಂತಿರುಗಿದ್ದ. ಅಂದಿನಿಂದ ಈತ ಮನೆಗೆ ಬಂದಿಲ್ಲ ಎಂದು ಪ್ರಕಟಣೆಯಲ್ಲಿ … Read more

ಮೇಯಲು ಹೋಗಿದ್ದ ಹಸುಗಳು ಹಿಂತಿರುಗಿದ್ದವು, ಎಣಿಸಿದಾಗ ಒಡತಿಗೆ ಕಾದಿತ್ತು ಆಘಾತ

Crime-News-General-Image

SHIVAMOGGA LIVE NEWS | 5 APRIL 2024 SHIMOGA : ಮೇಯಲು ಬಿಟ್ಟಿದ್ದ ಮೂರು ಹಸುಗಳು ನಾಪತ್ತೆಯಾಗಿವೆ. ಶಿವಮೊಗ್ಗದ ಅನಪಿನಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಇಲ್ಲಿನ ರತ್ನಮ್ಮ ಎಂಬುವವರು ಸಾಕಿದ್ದ ಎಂಟು ಹಸುಗಳ ಪೈಕಿ ಮೂರು ಹಸುಗಳು ಕಳ್ಳತನವಾಗಿವೆ. ಮಾ.16ರಂದು ಮೇಯಲು ಬಿಟ್ಟಿದ್ದ ಹಸುಗಳ ಪೈಕಿ ಎರಡು ಹಸುಗಳು ಮರಳಿ ಕೊಟ್ಟಿಗೆಗೆ ಬಂದಿಲ್ಲ. ಮಾ.26ರಂದು ಮತ್ತೊಂದು ಹಸು ನಾಪ್ತೆಯಾಗಿದೆ. ಇವುಗಳ ಮೌಲ್ಯ 55 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಮೇಯಲು ಬಿಟ್ಟಿದ್ದ ಹಸುಗಳ ಕಳ್ಳತನವಾಗಿದೆ ಎಂದು ಆರೋಪಿಸಿ … Read more

ಶಿವಮೊಗ್ಗದಿಂದ KSRTC ಬಸ್‌ ಹತ್ತಿದ ಮಹಿಳೆ, ನಡು ದಾರಿಯಲ್ಲಿ ಕಾದಿತ್ತು ಶಾಕ್‌

KSRTC-Bus-General-Image-Shimoga-Bangalore

SHIVAMOGGA LIVE NEWS | 5 FEBRUARY 2024 SHIMOGA : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತರೀಕೆರೆಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ನಾಪತ್ತೆಯಾಗಿದೆ. ತರೀಕೆರೆ ತಾಲೂಕಿನ ಜಯಮ್ಮ ಅವರ ಚಿನ್ನದ ಸರ ಕಳ್ಳತನವಾಗಿದೆ.  ಸಂಬಂಧಿಯೊಬ್ಬರು ಅಪಘಾತಕ್ಕೀಡಾಗಿ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ವಿಚಾರಿಸಿ ಜಯಮ್ಮ, ಶಿವಮೊಗ್ಗದಿಂದ ತರೀಕೆರೆಗೆ ಮರಳುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತೆರಳುವಾಗ ಶಿವಮೊಗ್ಗ – ಭದ್ರಾವತಿ ಮಾರ್ಗ ಮಧ್ಯೆ ಕೊರಳಲ್ಲಿದ್ದ 2 ಲಕ್ಷ ರೂ. ಮೌಲ್ಯದ ಬಂಗಾರದ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. ಸೀಟಿನ … Read more

ಆಯನೂರು TO ಪಂಜಾಬ್‌ ಹೊರಟಿದ್ದ ಶುಂಠಿ ಲಾರಿ ನಾಪತ್ತೆ, ವಾಟ್ಸಪ್‌ ಮೆಸೇಜ್‌ ಕಂಡು ವರ್ತಕನಿಗೆ ಬಿಗ್‌ ಶಾಕ್

Crime-News-General-Image

SHIVAMOGGA LIVE NEWS | 23 NOVEMBER 2023 AYANUR : ಪಂಜಾಬ್‌ಗೆ 180 ಕ್ವಿಂಟಾಲ್‌ ಶುಂಠಿ ತುಂಬಿಕೊಂಡು ಹೊರಟ ಲಾರಿ ನಿಗದಿತ ಸ್ಥಳ ತಲುಪದೆ ನಾಪತ್ತೆಯಾಗಿದೆ. ಲಾರಿ ಚಾಲಕ ಮೊಬೈಲ್ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾನೆ. ಆಯನೂರಿನ ಶುಂಟಿ ವ್ಯಾಪಾರಿಗೆ ನಷ್ಟವಾಗಿದ್ದು ಕುಂಸಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಯನೂರು TO ಪಂಜಾಬ್‌ಗೆ ಲಾರಿ ಸಯ್ಯದ್‌ ಸಾದಿಕ್‌ ಎಂಬುವವರು ಕಳೆದ 8 ವರ್ಷದಿಂದ ಸುತ್ತಮುತ್ತಲ ರೈತರಿಂದ ಶುಂಠಿ ಖರೀದಿಸಿ ವ್ಯಾಪಾರ ಮಾಡುತ್ತಿದ್ದಾರೆ. ನ.18ರಂದು ಆಯನೂರಿನಿಂದ 180 ಕ್ವಿಂಟಾಲ್‌ ಶುಂಠಿಯನ್ನು … Read more

3 ಕ್ಯಾಮರಾ ಬಾಡಿಗೆಗೆ ಪಡೆದ, 7 ದಿನವಾದರು ಮರಳಲಿಲ್ಲ, ಮನೆ ಬಳಿ ಹೋದ ಫೋಟಗ್ರಾಫರ್‌ಗೆ ಕಾದಿತ್ತು ಆಘಾತ

Doddapete-Police-Station.

SHIVAMOGGA LIVE NEWS | 3 NOVEMBER 2023 SHIMOGA : ಫೋಟೊಗ್ರಾಫರ್‌ ಒಬ್ಬರಿಂದ ಮೂರು ಕ್ಯಾಮರಾಗಳನ್ನು (Camera) ಬಾಡಿಗೆಗೆ ಪಡೆದ ವ್ಯಕ್ತಿ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಈ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ಬುದ್ದ ನಗರದ ಫೋಟೊಗ್ರಾಫರ್‌ ರುದ್ರೇಶ್‌ ಬಳಿ ಕೆನಾನ್‌ 200ಡಿ, ಕೆನಾನ್‌ 1200ಡಿ ಮತ್ತು ನಿಕಾನ್‌ 7500 ಕ್ಯಾಮರಾಗಳಿದ್ದವು. ಅ.10ರಂದು ಪವನ್‌ ಎಂಬಾತ 7 ದಿನಕ್ಕೆ ಕ್ಯಾಮರಾ ಬಾಡಿಗೆಗೆ ಬೇಕು ಎಂದು ಕೇಳಿದ್ದ. ಆತನ ಆಧಾರ್‌ ಕಾರ್ಡ್‌ ಪಡೆದು 15 … Read more

ಸಂಸದ ರಾಘವೇಂದ್ರ ಸೇರಿ ಹಲವರು ವಶಕ್ಕೆ | ಚಾರ್ಲಿಗಾಗಿ ಬಹುಮಾನ | ಶಿವಮೊಗ್ಗ ನಗರದ 10 ಫಟಾಫಟ್‌ ಸುದ್ದಿ

BY-Raghavendra-taken-to-police-custody-for-protest

SHIVAMOGGA LIVE | 16 JUNE 2023 | FATAFAT NEWS ಸಂಸದ ರಾಘವೇಂದ್ರ ಸೇರಿ ಹಲವರು ಪೊಲೀಸ್‌ ವಶಕ್ಕೆ SHIMOGA : ವಿದ್ಯುತ್‌ ದರ ಹೆಚ್ಚಳ ಖಂಡಿಸಿ ಬಿಜೆಪಿ ಗ್ರಾಮಾಂತರ ಕಾರ್ಯಕರ್ತರು ಗುರುವಾರ ಶಿವಮೊಗ್ಗದಲ್ಲಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸರು ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಕೆ.ಬಿ.ಅಶೋಕ್‌ ನಾಯ್ಕ್‌ ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು. ಬುಧವಾರ ಬಿಜೆಪಿ ನಗರ ಘಟಕದ ಪ್ರತಿಭಟನೆ ವೇಳೆ ಕೆಲವು ಕಾರ್ಯಕರ್ತರು ಮೆಸ್ಕಾಂ ಕಚೇರಿಯ ಕಿಟಿಕಿ ಗಾಜಿಗೆ … Read more

ರಾಷ್ಟ್ರೀಯ ತನಿಖಾ ಸಂಸ್ಥೆ ವಿಚಾರಣೆಗೆ ಹಾಜರಾದ ಮರುದಿನವೇ ಮೊಬೈಲ್‌ ಬಿಟ್ಟು ಶಿವಮೊಗ್ಗದಲ್ಲಿ ಯುವಕ ನಾಪತ್ತೆ

Shimoga-City-NIA-Team

SHIVAMOGGA LIVE | 29 MAY 2023 SHIMOGA : ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಚಾರಣೆಗೆ ಹಾಜರಾಗಬೇಕಿದ್ದ ಯುವಕನೊಬ್ಬ ಶಿವಮೊಗ್ಗದಲ್ಲಿ ನಾಪತ್ತೆಯಾಗಿದ್ದಾನೆ. ಮೊಬೈಲ್‌, ಬೈಕನ್ನು ಮನೆಯಲಿಯೇ ಬಿಟ್ಟು ಕಾಣೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಮೇ 24ರಂದು ಮನೆಯಿಂದ ಯುವಕ ನಾಪತ್ತೆಯಾಗಿದ್ದಾನೆ ಎಂದು ಆತನ ಕುಟುಂಬದವರು ದೂರು ನೀಡಿದ್ದಾರೆ. ಎನ್‌ಐಎ ವಿಚಾರಣೆ ಮುಗಿಸಿ ಮನೆಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಯುವಕನ ಮೊಬೈಲ್‌ಗೆ ನೊಟೀಸ್‌ ಜಾರಿ ಮಾಡಲಾಗಿತ್ತು. ಮೇ 23ರಂದು ಎನ್‌ಐಎ ಕಚೇರಿಗೆ … Read more

ಶಿವಮೊಗ್ಗದಲ್ಲಿ ಹೆಂಡತಿ ಜೊತೆ ಲಾಡ್ಜ್‌ಗೆ ಬಂದ ವ್ಯಕ್ತಿ, ಬಾತ್‌ ರೂಂಗೆ ಹೋಗಿ ಹೊರ ಬಂದಾಗ ಕಾದಿತ್ತು ಶಾಕ್‌

Crime-News-General-Image

SHIVAMOGGA LIVE NEWS | 27 APRIL 2023 SHIMOGA : ಲಾಡ್ಜ್‌ ರೂಂನಲ್ಲಿ (Lodge Room) ಪತಿಯನ್ನು ಲಾಕ್‌ ಮಾಡಿ, ಆತನ ಮೊಬೈಲ್‌ ಫೋನ್‌, ಪರ್ಸ್‌, ಬಟ್ಟೆ ಬ್ಯಾಗ್‌ ಸಹಿತ ಪತ್ನಿ ನಾಪತ್ತೆಯಾಗಿದ್ದಾಳೆ. ಪತ್ನಿಯನ್ನು ಹುಡುಕಿ ಕೊಡುವಂತೆ ಪತಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ. ಶಿವಮೊಗ್ಗ ಬಸ್‌ ನಿಲ್ದಾಣದ ಎದುರಿನ ಅಶೋಕ ಲಾಡ್ಜ್‌ನಲ್ಲಿ ಘಟನೆ ಸಂಭವಿಸಿದೆ. ಹಾವೇರಿ ಜಿಲ್ಲೆಯ ಶ್ರೀಕಾಂತ ಎಂಬುವವರು ತಮ್ಮ ಪತ್ನಿಯೊಂದಿಗೆ ಲಾಡ್ಜ್‌ನಲ್ಲಿ ರೂಂ (Lodge Room) ಮಾಡಿದ್ದಾಗ ಘಟನೆ ಸಂಭವಿಸಿದೆ. ಇದನ್ನೂ ಓದಿ … Read more