ಮಹಾನಗರ ಪಾಲಿಕೆ ಮೇಲೆ ಎಸಿಬಿ ದಾಳಿ, ಬಿಜೆಪಿ ಆಡಳಿತದ ವಿರುದ್ಧ ಮಾಜಿ ಉಪ ಮೇಯರ್ ಸಿಡಿಮಿಡಿ

Mahanagara-Palike-Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 05 ಅಕ್ಟೋಬರ್ 2021 ಮಹಾನಗರ ಪಾಲಿಕೆ ಕಂದಾಯ ವಿಭಾಗದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿರುವುದು ಬಿಜೆಪಿಯ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಉಪ ಮೇಯರ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪಾಲಾಕ್ಷಿ ಆರೋಪಿಸಿದ್ದಾರೆ. ಇದನ್ನು ಓದಿ | ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ಎಸಿಬಿ ದಾಳಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪಾಲಾಕ್ಷಿ ಅವರು, ಪಾಲಿಕೆ ಮೇಲೆ ಹಿಂದೆಂದೂ ಇಂತಹ ದಾಳಿಯಾಗಿರಲಿಲ್ಲ. ಮಹಾನಗರ ಪಾಲಿಕೆಯಲ್ಲಿ ವ್ಯಾಪಕ … Read more

BREAKING NEWS | ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ಎಸಿಬಿ ದಾಳಿ

Breaking News Plate

ಶಿವಮೊಗ್ಗ ಲೈವ್.ಕಾಂ | SHIMOGA NEWS | 04 ಅಕ್ಟೋಬರ್ 2021 ಶಿವಮೊಗ್ಗ ಮಹಾನಗರ ಪಾಲಿಕೆ ಕಂದಾಯ ವಿಭಾಗದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಡತಗಳ ಪರಿಶೀಲನೆ ನಡೆಸಲಾಗುತ್ತಿದೆ. ಕಂದಾಯ ವಿಭಾಗದ ಮೇಲೆ ದಾಳಿಯಾಗಿದ್ದು, ಕೆಲಸ ಸ್ಥಗಿತಗೊಳಿಸಲಾಗಿದೆ. ಈ ವಿಭಾಗದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಸಂಬಂಧ ದೂರುಗಳು ಬಂದ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ..   (ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ … Read more

ಶಿವಮೊಗ್ಗ ಸಿಟಿಯಲ್ಲಿ ಒಂದು ದಿನ ಮಾಂಸ ಮಾರಾಟ ನಿಷೇಧ, ಆದೇಶ ಉಲ್ಲಂಘಿಸಿದರೆ ಕ್ರಮ

Shimoga City Nehru Road General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 01 ಅಕ್ಟೋಬರ್ 2021 ಶಿವಮೊಗ್ಗ ನಗರದಾದ್ಯಂತ ಅಕ್ಟೋಬರ್ 2ರಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 02 ರಂದು ಗಾಂಧಿ ಜಯಂತಿ ಪ್ರಯುಕ್ತ ಸರ್ಕಾರದ ಸುತ್ತೋಲೆ ಅನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟ ಉದ್ದಿಮೆದಾರರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ. ಒಂದು ವೇಳೆ … Read more

ಶಿವಮೊಗ್ಗ ಸಿಟಿಯ ಪ್ರತಿ ಮನೆಗೂ ಹಸಿರು, ನೀಲಿ ಬಣ್ಣದ ಕಸದ ಬುಟ್ಟಿ, ಇವತ್ತಿಂದಲೇ ವಿತರಣೆ ಶುರು

300921 Dustbin Distribution in Shimoga Palike

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಸೆಪ್ಟೆಂಬರ್ 2021 ಸ್ವಚ್ಛ ಶಿವಮೊಗ್ಗ ನಿರ್ಮಾಣದ ಗುರಿಯೊಂದಿಗೆ ನಗರದ ಪ್ರತಿ ಮನೆಗೂ ಕಸದ ಬುಟ್ಟಿ ವಿತರಣೆ ಮಾಡಲಾಗುತ್ತಿದೆ. ಕಸದ ಬುಟ್ಟಿ ವಿತರಣಾ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು. ಮಹಾನಗರ ಪಾಲಿಕೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕಸದ ಬುಟ್ಟಿಗಳನ್ನು ವಿತರಿಸಲಾಯಿತು. 84 ಸಾವಿರ ಮನೆಗಳಿಗೆ ಕಸದ ಬುಟ್ಟಿ ಶಿವಮೊಗ್ಗದ ಪ್ರತಿ ಮನೆಗೂ ಕಸದ ಬುಟ್ಟಿ ವಿತರಣೆ ಮಾಡಲಾಗುತ್ತಿದೆ. 84,300 ಮನೆಗಳಿಗೆ ಕಸದ ಬುಟ್ಟಿ … Read more

ಶಿವಮೊಗ್ಗ ಸಿಟಿಯಲ್ಲಿ ಎರಡು ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Water Tap image

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಸೆಪ್ಟೆಂಬರ್ 2021 ಶಿವಮೊಗ್ಗ ನಗರದಾದ್ಯಂತ ಎರಡು ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾದ್ಯತೆ ಇದೆ. ಸಾರ್ವಜನಿಕರು ಈ ಬಗ್ಗೆ ಸಹಕರಿಸಬೇಕು ಎಂದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 20 ಮತ್ತು 21ರಂದು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾದ್ಯತೆ ಇದೆ. ಮೆಸ್ಕಾಂನ 110/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ದುರಸ್ಥಿ ಮತ್ತು ನಿರ್ವಹಣೆ … Read more

ರನ್ನಿಂಗ್ ರೇಸ್’ನಲ್ಲಿ ಶಿವಮೊಗ್ಗ ಮೇಯರ್ ಫಸ್ಟ್, ಗುರಿ ತಲುಪಲಿಲ್ಲ ಜಾವಲಿನ್..!

130921 Shimoga Mayor Running Race

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021 ರನ್ನಿಂಗ್ ರೇಸ್’ನಲ್ಲಿ ಫಸ್ಟ್. ಜಾವಲಿನ್ ಎಸೆತದಲ್ಲಿ ಗುರಿ ತಲುಪದ ಶಿವಮೊಗ್ಗ ಪಾಲಿಕೆ ಮೇಯರ್. ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಪಾಲ್ಗೊಂಡಿದ್ದರು. ಅವರೊಂದಿಗೆ ಪಾಲಿಕೆಯ ಕಾರ್ಪೊರೇಟರ್’ಗಳು ಪಕ್ಷಭೇದ ಮರೆತು ಭಾಗವಹಿಸಿ, ಖುಷಿಪಟ್ಟರು. ಕಾರ್ಮಿಕರು ಖುಷಿಯಾಗಿದ್ದರೆ ನಗರ ಸ್ವಚ್ಛ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟಕ್ಕೆ ಮೇಯರ್ ಸುನೀತಾ ಅಣ್ಣಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ … Read more

ಶಿವಮೊಗ್ಗ ಸಿಟಿಯ ಪ್ರತಿ ವಾರ್ಡ್​​​ನಲ್ಲೂ ಲಸಿಕೆಗೆ ಡಿಮಾಂಡ್

280621 Memorandum for DC about Vaccination 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 JUNE 2021 ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ವಿತರಣೆ ವೇಗವನ್ನು ಮತ್ತಷ್ಟು ಹೆಚ್ಚಳ ಮಾಡಬೇಕು ಎಂದು ಕಾಂಗ್ರೆಸ್, ಜೆಡಿಎಸ್ ಕಾರ್ಪೊರೇಟರ್‍ಗಳು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ಕಾರ್ಪೊರೇಟರ್‍ಗಳು, ಪ್ರತಿ ವಾರ್ಡ್‍ನಲ್ಲೂ ಲಸಿಕೆ ನೀಡುವ ಕಾರ್ಯ ಮಾಡಬೇಕಿದೆ. ವಾರ್ಡ್‍ಗಳಲ್ಲಿ ಇರುವ ಸರ್ಕಾರಿ ಶಾಲೆ, ಅಂಗನವಾಡಿಗಳಲ್ಲಿ ಲಸಿಕೆ ವಿತರಣೆ ಮಾಡಬೇಕು. ಆಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲರಿಗೂ ಶೀಘ್ರದಲ್ಲಿ ಲಸಿಕೆ ನೀಡಲು ಸಾದ್ಯವಾಗಲಿದೆ ಎಂದು ಮನವಿಯಲ್ಲಿ … Read more

ಶಿವಮೊಗ್ಗ ನಗರದಲ್ಲಿ ಮತ್ತೆ ಫೀಲ್ಡಿಗಿಳಿದ ಪಾಲಿಕೆ, ಸ್ಯಾನಿಟೈಸೇಷನ್ ಶುರು, ಇವತ್ತು ಎಲ್ಲೆಲ್ಲಿ ಮಾಡಲಾಗ್ತಿದೆ?

020521 Sanitization in Shimoga Aamir Ahmed Circle 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 MAY 2021 ಶಿವಮೊಗ್ಗ ನಗರದ ಪ್ರಮುಖ ಕಡೆಗಳಲ್ಲಿ ಸ್ಯಾನಿಟೈಸೇಷನ್‍ ಮಾಡಲಾಗುತ್ತಿದೆ. ಮಹಾನಗರ ಪಾಲಿಕೆ ವತಿಯಿಂದ ಸ್ಯಾನಿಟೈಸ್ ಮಾಡಲಾಗುತ್ತಿದೆ. ನಗರದ ಅಮೀರ್ ಅಹಮದ್ ಸರ್ಕಲ್‍ನಲ್ಲಿ ಸ್ಯಾನಿಟೈಸ್ ಮಾಡಲಾಯಿತು. ಬಳಿಕ ಬಿ.ಹೆಚ್‍.ರಸ್ತೆ, ನೆಹರೂ ರೋಡ್‍ನಲ್ಲಿ ಸ್ಯಾನಿಟೈಸ್‍ ಮಾಡಿಸಲಾಗುತ್ತಿದೆ. ಸ್ಯಾನಿಟೈಸರ್ ತುಂಬಿರುವ ಟ್ಯಾಂಕ್‍ ಹೊತ್ತಿರುವ ವಾಹನದಲ್ಲಿ, ಪಿಪಿಇ ಕಿಟ್ ಧರಿಸಿರುವ ಪಾಲಿಕೆ ಸಿಬ್ಬಂದಿ ಸ್ಯಾನಿಟೈಸ್‍ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ನೀವಿನ್ನೂ ಕರೋನ ಲಸಿಕೆ ಪಡೆದಿಲ್ಲವಾ? ಕೂಡಲೆ ಕೆಳಗಿರುವ ಫೋಟದಲ್ಲಿನ ನಂಬರ್‍ಗೆ ಕರೆ … Read more

ಶಿವಮೊಗ್ಗ ಮಾರ್ಡನ್ ಟಾಕೀಸ್ ಹಿಂಭಾಗದ ರಸ್ತೆಗೆ ಮೇಯರ್ ದಿಢೀರ್ ಭೇಟಿ, ವ್ಯಾಪಾರಿಗಳಿಗೆ ಒಂದು ವಾರದ ಗಡುವು

150421 Mayor Deputy Mayor Visit Modern Talkies Behind road 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 APRIL 2021 ಒಂದು ವಾರದ ಗಡುವು. ಅಷ್ಟರಲ್ಲಿ ರಸ್ತೆ ಮೇಲಿರುವ ಗುಜರಿ ವಸ್ತುಗಳೆಲ್ಲ ತೆರವಾಗಬೇಕು. ಇಲ್ಲವಾದಲ್ಲಿ ಪಾಲಿಕೆ ವಾಹನ ಬರಲಿದೆ..! ಇದು ಶಿವಮೊಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಅವರ ಖಡಕ್ ಎಚ್ಚರಿಕೆ. ನಗರದ ಮಾರ್ಡನ್ ಟಾಕೀಸ್ ಹಿಂಭಾಗ ಹಳೆ ತೀರ್ಥಹಳ್ಳಿ ರಸ್ತೆಗೆ (ಒ.ಟಿ.ರಸ್ತೆ) ಹೊಂದಿಕೊಂಡಂತೆ ಇರುವ ಪ್ಯಾರಲಲ್ ರಸ್ತೆಗೆ ಇವತ್ತು ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸ್ಥಾಯಿ ಸಮಿತಿ ಅಧ್ಯಕ್ಷ … Read more

ಹೊಸತೊಡಕಿಗೆ ತೊಡಕಾದ ಶಿವಮೊಗ್ಗ ಪಾಲಿಕೆ, ಮಾಂಸದ ಅಂಗಡಿಗಳೆಲ್ಲ ಬಂದ್, ಜನರ ಆಕ್ರೋಶ

140421 Chicken Centers Closed in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 APRIL 2021 ಯುಗಾದಿ ಮರುದಿನ ಹೊಸತೊಡಕು ಆಚರಿಸುವುದು ವಾಡಿಕೆ. ಆದರೆ ಈ ಬಾರಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿರುವುದು, ಹೊಸತೊಡಕು ಆಚರಣೆಗೆ ತೊಡಕಾಗಿದೆ. ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡಾ.ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧಿಸಲಾಗಿದೆ. ಒಂದು ವೇಳೆ ಇದನ್ನು ವಿರೋಧಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಈ ಕುರಿತು … Read more