ಶ್ರದ್ಧಾ ಭಕ್ತಿಯಿಂದ ನೆರವೇರಿತು ಮೈಲಾರಲಿಂಗೇಶ್ವರ-ಮಾಲತೇಶ ಗಟ್‌ಪರವು
SHIVAMOGGA LIVE NEWS | 1 NOVEMBER 2023 SHIKARIPURA : ಮೈಲಾರಲಿಂಗೇಶ್ವರ, ಮಾಲತೇಶ ದೇವರ ಧಾರ್ಮಿಕ ಕಾರ್ಯಕ್ರಮ ಗಟ್ ಪರವು (paravu) ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೊಡ್ಡ ಸಂಖ್ಯೆಯ ಭಕ್ತರು ಪರವುನಲ್ಲಿ ಭಾಗವಹಿಸಿದ್ದರು. ಶಿಕಾರಿಪುರದ ಮಾಸೂರು ರಸ್ತೆಯ ಶಿಬಾರಕಟ್ಟೆಯಲ್ಲಿ ಗಟ್ ಪರವು ನಡೆಯಿತು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಕ್ಷೇತ್ರದಲ್ಲಿ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವ ಅಂಗವಾಗಿ ಭಕ್ತರು ಹಾಗೂ ಗೊರವಯ್ಯನವರು ಗಟ್‌ಪರವು ನಡೆಸುವುದು ವಾಡಿಕೆ. ಗೊರವಯ್ಯ ಅವರು ಮತ್ತು ದೇವರು ಹೊತ್ತ ಮಹಿಳೆಯರ ನೇತೃತ್ವದಲ್ಲಿ … Read more