ಶಿವಮೊಗ್ಗದಲ್ಲಿ ರೈತರಿಂದ ರೈಲ್ ರೋಖೋ ಚಳವಳಿ, ರೈಲ್ವೆ ನಿಲ್ದಾಣಕ್ಕೆ ಬಿಗಿ ಬಂದೋಬಸ್ತ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 18 FEBRUARY 2021 ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ಹಿನ್ನೆಲೆ ದೇಶಾದ್ಯಂತ ರೈಲ್ ರೋಖೋ ಚಳವಳಿ ನಡೆಯುತ್ತಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿಯೂ ಚಳವಳಿ ನಡೆಸಲಾಯಿತು. ಆದರೆ ಪ್ರತಿಭಟನಾನಿರತ ರೈತರನ್ನು ರೈಲು ನಿಲ್ದಾಣದ ಒಳಗೆ ಬಿಡದೆ ತಡೆ ಹಿಡಿಯಲಾಯಿತು. ರೈತ ಸಂಘದ ನೇತೃತ್ವದಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ಮೊಂಡಾಟ ಮುಂದುವರೆಸದಂತೆ ಎಚ್ಚರಿಸಲಾಯಿತು. ನಿಲ್ದಾಣಕ್ಕೆ ಪೊಲೀಸ್ ಸರ್ಪಗಾವಲು … Read more