BREAKING NEWS | ಭಾರಿ ಮಳೆಗೆ ಕುಸಿದ ಮನೆ ಗೋಡೆ, ಮಹಿಳೆ ಸ್ಥಳದಲ್ಲೇ ಸಾವು

breaking news graphics

ಭದ್ರಾವತಿ | ಭಾರಿ ಮಳೆಗೆ ಮನೆ ಗೋಡೆ (WALL) ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಓರ್ವ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭದ್ರಾವತಿ ತಾಲೂಕಿನ ಕಾಚಿಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಭಾಗ್ಯಮ್ಮ (55) ಎಂಬವವರು ಮೃತ ದುರ್ದೈವಿ. ಗೋಡೆ ಕುಸಿದು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಊಟ ಮುಗಿಸಿ ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಗೋಡೆ ಕುಸಿದಿದೆ ಎಂದು ತಿಳಿದು ಬಂದಿದೆ. ಇನ್ನು ಘಟನೆಯಲ್ಲಿ ಕೃಷ್ಣಮೂರ್ತಿ ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಗಂಟೆ ಗಂಟೆಗೂ … Read more

ಶಿವಮೊಗ್ಗದಲ್ಲಿ ಮಳೆಯೋ ಮಳೆ, ಹಳದಿ ಅಲರ್ಟ್ ಘೋಷಣೆ

Rain-in-Shimog-City

ಶಿವಮೊಗ್ಗ | ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಶಿವಮೊಗ್ಗ ಸೇರಿದಂತೆ ಐದು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ (YELLOW ALERT) ಘೋಷಣೆ ಮಾಡಲಾಗಿದೆ. ಇವತ್ತು ರಾತ್ರಿಯು ಭಾರಿ ಮಳೆ ಸುರಿಯುವ ಸಂಭವವಿದೆ. ಜಿಲ್ಲೆಯಾದ್ಯಂತ ಇವತ್ತೂ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಕೆಲವು ಹೊತ್ತು ಬಿಡುವು ನೀಡುತ್ತಿರುವ ಮಳೆ, ನಂತರ ಅಬ್ಬರಿಸುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜೋರು ಮಳೆ ಸುರಿದಿದೆ. ಈ ಅವಧಿಯಲ್ಲಿ … Read more

ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಜೋರು ಮಳೆ, ಯಾವ್ಯಾವ ತಾಲೂಕಲ್ಲಿ ಎಷ್ಟಾಗಿದೆ ವರ್ಷಧಾರೆ?

Tunga-River-Full-During-Rain

ಶಿವಮೊಗ್ಗ | ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ (HEAVY RAIN). ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನಲ್ಲಿ ಜೋರು ಜೋರು ಮಳೆಯಾಗಿದೆ. ಹಾಗಾಗಿ ಜಲಾಶಯಗಳ ಒಳ ಮತ್ತು ಹೊರ ಹರಿವು ಹೆಚ್ಚಳವಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ 46 ಮಿ.ಮೀ ಮಳೆಯಾಗಿದೆ (HEAVY RAIN) ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಅಧಿಕ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ತೀರ್ಥಹಳ್ಳಿಯಲ್ಲಿ 67 ಮಿ.ಮೀ ಮಳೆಯಾಗಿದೆ. ಹೊಸನಗರದಲ್ಲಿ 66 … Read more

ತೀರ್ಥಹಳ್ಳಿ, ಹೊಸನಗರದಲ್ಲಿ ವರ್ಷಧಾರೆ ಜೋರು, ಆಗುಂಬೆಯಲ್ಲಿ ವರುಣನ ಅಬ್ಬರ

rain in shimoga

ಶಿವಮೊಗ್ಗ| ತೀರ್ಥಹಳ್ಳಿ, ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಆಗುಂಬೆ (AGUMBE) ಭಾಗದಲ್ಲಿ ವರುಣ ಅಬ್ಬರಿಸಿದ್ದಾನೆ.  ಹಲವು ಕಡೆ ನೂರು ಮಿ.ಮೀಗಿಂತಲೂ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಆಗುಂಬೆಯಲ್ಲಿ (AGUMBE) 226 ಮಿ.ಮೀ ಮಳೆಯಾಗಿದೆ. ಹೊನ್ನೆತಾಳು ವ್ಯಾಪ್ತಿಯಲ್ಲಿ 124.50 ಮಿ.ಮೀ, ಬಿದರಗೋಡು ವ್ಯಾಪ್ತಿಯಲ್ಲಿ 128.50 ಮಿ.ಮೀ ಮಳೆಯಾಗಿದೆ. ಹೊಸನಗರ ಸುಳಗೋಡು ವ್ಯಾಪ್ತಿಯಲ್ಲಿ 129.50 ಮಿ.ಮೀ ಮಳೆಯಾಗಿದೆ.ಯಡೂರು ಭಾಗದಲ್ಲಿ 137 ಮಿ.ಮೀ, ಹುಲಿಕಲ್’ನಲ್ಲಿ 186 ಮಿ.ಮೀ, ಮಾಸ್ತಿಕಟ್ಟೆಯಲ್ಲಿ … Read more

ಇನ್ನು ನಾಲ್ಕು ದಿನ ಶಿವಮೊಗ್ಗದಲ್ಲಿ ಅಬ್ಬರಿಸಲಿದೆ ಮಳೆ, ಎಷ್ಟು ಮಳೆ ಆಗಲಿದೆ?

Rain-in-Shimoga-City.

ಶಿವಮೊಗ್ಗ | ಜಿಲ್ಲೆಯಾದ್ಯಂತ ಇನ್ನು ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ (RAIN ALERT) ಇದೆ. ಈ ಸಂಬಂಧ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆಗಸ್ಟ್ 6 ರಿಂದ 9ರವರೆಗೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಪೈಕಿ ಎರಡು ದಿನ ಗುಡುಗು ಸಹಿತ ಮಳೆ ಸುರಿಯುವ ಸಂಭವವಿದೆ ಎಂದು ತಿಳಿಸಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ … Read more

ಶಿವಮೊಗ್ಗದಲ್ಲಿ ಮುಂದುವರಿದ ಮಳೆ, ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ? ಏನೆಲ್ಲ ಹಾನಿಯಾಗಿದೆ?

Rain-at-Shimoga

ಶಿವಮೊಗ್ಗ | ಜಿಲ್ಲೆಯಾದ್ಯಂತ ನಿರಂತರ ಮಳೆಯಾಗಿದೆ (HEAVY RAIN). ಕಳೆದ 24 ಗಂಟೆಯಲ್ಲಿ 22 ಮಿ.ಮೀ ವರ್ಷಧಾರೆಯಾಗಿದೆ. ಭಾರಿ ಮಳೆಗೆ ಹಲವು ಕಡೆ ಆಸ್ತಿಪಾಸ್ತಿ ಹಾನಿ ಉಂಟಾಗಿದೆ. 24 ಗಂಟೆ ಅವಧಿಯಲ್ಲಿ ಹೊಸನಗರ ತಾಲೂಕಿನಲ್ಲಿ ಅತ್ಯಧಿಕ ಮಳೆಯಾಗಿದೆ. ಇಲ್ಲಿ 33.6 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿ 30.3 ಮಿ.ಮೀ, ಸಾಗರದಲ್ಲಿ 27.6 ಮಿ.ಮೀ, ಭದ್ರಾವತಿಯಲ್ಲಿ 25.9 ಮಿ.ಮೀ, ಶಿವಮೊಗ್ಗದಲ್ಲಿ 15.8 ಮಿ.ಮೀ, ಶಿಕಾರಿಪುರದಲ್ಲಿ 8 ಮಿ.ಮೀ, ಸೊರಬದಲ್ಲಿ 1.6 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ, ಭದ್ರಾವತಿಯಲ್ಲಿ ಹಾನಿ ಶಿವಮೊಗ್ಗ ಮತ್ತು … Read more

ಭದ್ರಾವತಿಯಲ್ಲಿ ಮಳೆಯೋ ಮಳೆ, ಬೈಪಾಸ್ ರಸ್ತೆ ಜಲಾವೃತ

Bilaki-Cross-Bhadravathi-Rain-Effect

ಭದ್ರಾವತಿ | ಸಂಜೆ ವೇಳೆಗೆ ಭಾರಿ ಮಳೆ ಸುರಿದಿದ್ದು, ಹಲವು ಕಡೆ ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದೆ. ರಸ್ತೆಗಳು (BYPASS ROAD) ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಭಾರಿ ಮಳೆಗೆ ಭದ್ರಾವತಿ ಬೈಪಾಸ್ ರಸ್ತೆ ಜಲಾವೃತವಾಗಿದೆ. ಬಿಳಕಿ ಕ್ರಾಸ್ (BYPASS ROAD) ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಹಾಗಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬೈಪಾಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಬಿಳಕಿ ಕ್ರಾಸ್’ನಲ್ಲಿ ಭಾರಿ ಮಳೆಗೆ ರಸ್ತೆ ಜಲಾವೃತ ಆಗಿರುವ ವಿಡಿಯೋ ಸಾಮಾಜಿಕ … Read more

BREAKING NEWS | ಶಿವಮೊಗ್ಗ ನಗರದಲ್ಲಿ ಮಳೆ ಅಬ್ಬರ, ಅಂಗಡಿ, ಮನೆಗಳಿಗೆ ನುಗ್ಗಿದ ನೀರು

Rain-in-Shimoga-NT-Road.

ಶಿವಮೊಗ್ಗ |  ನಗರದ ವಿವಿಧೆಡೆ ಸಂಜೆ ವೇಳೆಗೆ ಭಾರಿ ಮಳೆ ಸುರಿಯುತ್ತಿದೆ. ಜೋರು ಮಳೆಯಿಂದಾಗಿ ಹಲವು ಕಡೆ ಕಟ್ಟಡಗಳಿಗೆ ನೀರು ನುಗ್ಗಿದೆ. ಶಿವಮೊಗ್ಗದ ಬೈಪಾಸ್ ರಸ್ತೆ, ಊರುಗಡೂರು, ಸೂಳೆಬೈಲು ಸುತ್ತಮುತ್ತ ಭಾರಿ ಮಳೆಯಾಗಿದೆ. ಜೋರು ಮಳೆಗೆ ಚರಂಡಿಗಳು ತುಂಬಿ ಹೋಗಿವೆ. ಆದ್ದರಿಂದ ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಕ್ಕಪಕ್ಕದ ಮನೆಗಳು, ಕಟ್ಟಡಗಳಿಗೂ ಮಳೆ ನೀರು ನುಗ್ಗಿದೆ. ಆರ್.ಎಂ.ಎಲ್ ನಗರದಲ್ಲೂ ವಿವಿಧೆಡೆ ಮಳೆ ನೀರು ಮನೆ, ಮಳಿಗೆಗಳಿಗೆ ನುಗ್ಗಿದೆ. ಜನರು ಮಳೆ ನೀರನ್ನು ಹೊರಗೆ ಹಾಕಲು ಹರಸಾಹಸ ಪಡುತ್ತಿದ್ದಾರೆ. … Read more

ಶಿವಮೊಗ್ಗದಲ್ಲಿ ಭಾರಿ ಮಳೆ, ಯಾವ್ಯಾವ ಊರಲ್ಲಿ 100 ಮಿ.ಮೀಗಿಂತಲೂ ಹೆಚ್ಚು ಮಳೆಯಾಗಿದೆ?

Rain-at-Hosanagara

ಶಿವಮೊಗ್ಗ |  ಜಿಲ್ಲೆಯಾದ್ಯಂತ ಮಳೆ ಅಬ್ಬರಿಸುತ್ತಿದೆ. ಕೆಲವೆಡೆ ಬಿಡುವು ಕೊಡದೆ ನಿರಂತರ ಮಳೆ (HEAVY RAIN) ಸುರಿಯುತ್ತಿದೆ. ವರ್ಷಧಾರೆ ಅಬ್ಬರಕ್ಕೆ ಶಿವಮೊಗ್ಗ ನಗರ ಮತ್ತು ಜಿಲ್ಲೆಯ ವಿವಿಧೆಡೆಯ ತಗ್ಗು ಪ್ರದೇಶದ ಮನೆಗಳ ಜನರಿಗೆ ಆತಂಕ ಶುರುವಾಗಿದೆ. ಮೂರು ದಿನ ಹಳದಿ ಅಲರ್ಟ್ ಶಿವಮೊಗ್ಗ ಜಿಲ್ಲೆಯಾದ್ಯಂತ ಮೂರು ದಿನ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಆಗಸ್ಟ್ 2, 3 ಮತ್ತು 4ರಂದು ಭಾರಿ ಮಳೆಯಾಗುವ (HEAVY RAIN) ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈಗಾಗಲೆ ಕಳೆದ ರಾತ್ರಿ … Read more

BREAKING NEWS – ಶಿವಮೊಗ್ಗ ಜಿಲ್ಲೆಯಾದ್ಯಂತ ಮೂರು ದಿನ ಯಲ್ಲೋ ಅಲರ್ಟ್

Rain-At-Shimoga-City

ಶಿವಮೊಗ್ಗ |  ಜಿಲ್ಲೆಯಾದ್ಯಂತ ಬಿಡುವು ನೀಡಿದ್ದ ಮಳೆ ಪುನಃ ಅಬ್ಬರಿಸಲು ಆರಂಭಿಸಿದೆ. ಮೂರು ದಿನ ಯಲ್ಲೋ ಅಲರ್ಟ್ (YELLOW ALERT) ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಆಗಸ್ಟ್ 2, 3 ಮತ್ತು 4ರಂದು ಯಲ್ಲೋ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹಾಗಾಗಿ ಇನ್ನು ಮೂರು ದಿನ ಭಾರಿ ಮಳೆ ಸುರಿಯುವ ಸಾಧ್ಯಯತೆ ಇದೆ. ಇದನ್ನೂ ಓದಿ – ಮತ್ತೊಂದು ದಾಖಲೆ ನಿರ್ಮಿಸಿದ ಶಿವಮೊಗ್ಗ ಲೈವ್, ಮಿಲಿಯನ್’ಗೂ ಹೆಚ್ಚು ವಿವ್ಸ್, ಲಕ್ಷ ಲಕ್ಷ ಓದುಗರು ADVERTISEMENT … Read more