ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಯಲ್ಲೋ ಅಲರ್ಟ್

061021 Heavy Rain At Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ನವೆಂಬರ್ 2021 ಶಿವಮೊಗ್ಗದಲ್ಲಿ ಇವತ್ತು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ. ಗುಡುಗು ಸಹಿತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ ಕೆಲವು ಕಡೆ ಮಳೆಯಾಗಿದೆ. ಇವತ್ತು ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದೆ.

ಶಿವಮೊಗ್ಗ ಸೇರಿ ಎಂಟು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ, ಇನ್ನೆಷ್ಟು ದಿನ ಮಳೆ ಸುರಿಯಲಿದೆ?

rain in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ನವೆಂಬರ್ 2021 ಶಿವಮೊಗ್ಗ ಸೇರಿದಂತೆ ರಾಜ್ಯ ಎಂಟು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ. ನವೆಂಬರ್ 9ರವರೆಗೆ ಮಳೆ ಮುಂದುವರೆಯಲಿದೆ. ಆ ಬಳಿಕ ಮಳೆ ಪ್ರಮಾಣದ ತಗ್ಗಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಂಭವವಿದೆ. ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ … Read more

ಶಿವಮೊಗ್ಗದಲ್ಲಿ ಮುಂದುವರೆದ ಜಿಟಿಜಿಟಿ ಮಳೆ, ಮೋಡ ಕವಿದ ವಾತಾವರಣ

170621 Rain At Shimoga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ನವೆಂಬರ್ 2021 ದೀಪಾವಳಿ ಪಟಾಕಿ ಅಬ್ಬರಕ್ಕೆ ಶಿವಮೊಗ್ಗದಲ್ಲಿ ಮಳೆ ಅಡ್ಡಿ ಉಂಟು ಮಾಡಿದೆ. ನಿರಂತರ ಮಳೆಯಿಂದಾಗಿ ದೀಪಾವಳಿ ಸಂಭ್ರಮ ತುಸು ಕಳೆಗುಂದಿದೆ. ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆ ಶುರುವಾದ ಮಳೆ ನಿರಂತರವಾಗಿ ಬರುತ್ತಿದೆ. ಜಿಟಿಜಿಟಿ ಮಳೆಯಿಂದಾಗಿ ಜನರು ಮನೆಯೊಳಗೆ ಉಳಿಯುವಂತಾಗಿದೆ. ಹಬ್ಬ ಮತ್ತು ಮಳೆಯಿಂದಾಗಿ ಶಿವಮೊಗ್ಗ ನಗರದಲ್ಲಿ ವಾಹನ ಮತ್ತು ಜನ ಸಂಚಾರ ಕಡಿಮೆ ಇದೆ. ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು … Read more

ಶಿವಮೊಗ್ಗ ಸಿಟಿಯಲ್ಲಿ ಮಧ್ಯಾಹ್ನದಿಂದ ಮಳೆ ಶುರು, ಜಿಲ್ಲೆಯ ವಿವಿಧೆಡೆಯೂ ವರುಣ ಪ್ರತ್ಯಕ್ಷ

240721 Bypass Road No Rain 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ನವೆಂಬರ್ 2021 ದೀಪಾವಳಿ ಹಬ್ಬದಂದು ಶಿವಮೊಗ್ಗದಲ್ಲಿ ಜೋರು ಮಳೆಯಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಬಹು ಹೊತ್ತಿನಿಂದ ಬಿರುಸಾಗಿ ಮಳೆ ಸುರಿಯುತ್ತಿದೆ. ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನದಿಂದಲೂ ಮಳೆಯಾಗುತ್ತಿದೆ. ಮಧ್ಯಾಹ್ನ ಸ್ವಲ್ಪ  ಹೊತ್ತು ಸುರಿದಿದ್ದ ಮಳೆ ಕೊಂಚ ಬಿಡುವು ನೀಡಿತ್ತು. ಸಂಜೆ ವೇಳೆಗೆ ಪುನಃ ಆರಂಭವಾಗಿದೆ. ಸಾಗರ ತಾಲೂಕಿನಲ್ಲೂ ಮಳೆ ಸುರಿಯುತ್ತಿದೆ. ಲಿಂಗನಮಕ್ಕಿ ಸುತ್ತಮುತ್ತಲು ಜೋರು ಮಳೆಯಾಗುತ್ತಿರುವ ವರದಿಯಾಗಿದೆ. ತೀರ್ಥಹಳ್ಳಿ, ಹೊಸನಗರದ ವಿವಿಧೆಡೆಯು ಮಳೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ … Read more

ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ಕು ದಿನ ಯಲ್ಲೋ ಅಲರ್ಟ್

061021 Heavy Rain At Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ನವೆಂಬರ್ 2021 ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ರಾಜ್ಯದ ವಿವಿಧೆಡೆ ನಾಲ್ಕು ದಿನ ನಿರಂತರ ಮಳೆಯಾಗಲಿದೆ. ನ.5ರವರೆಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ಶಿವಮೊಗ್ಗ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್. ನ.2 ರಿಂದ ನ.5ರವರೆಗೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಮಳೆಯಾಗಲಿದೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದ್ದು, ಉತ್ತರ … Read more

ಭಾರಿ ಮಳೆಗೆ ಶಿವಮೊಗ್ಗದಲ್ಲಿ ರಸ್ತೆಗಳು ಜಲಾವೃತ, ಯಮನಂತೆ ಕಾಡಿದ ಸ್ಮಾರ್ಟ್ ಸಿಟಿ ಗುಂಡಿಗಳು

211021 Smart city pot holes in Shimoga during rain

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಅಕ್ಟೋಬರ್ 2021 ಒಂದೆಡೆ ಅಕಾಲಿಕ ಮಳೆಯಿಂದಾಗಿ ಸಂಕಷ್ಟ. ಮತ್ತೊಂದೆಡೆ ಸ್ಮಾರ್ಟ್ ಸಿಟಿ ಗುಂಡಿಗಳಿಂದ ಪ್ರಾಣ ಸಂಕಟ. ಈ ರಾತ್ರಿ ಶಿವಮೊಗ್ಗ ನಗರದ ಜನರು ಎದುರಿಸಿದ ಪ್ರಮುಖ ಸವಾಲುಗಳಿವು. ಇದನ್ನು ಓದಿ | ಶಿವಮೊಗ್ಗದಲ್ಲಿ ಭಾರಿ ಮಳೆ, ಮನೆ ಸೇರಲು ಜನರ ಸರ್ಕಸ್, ವ್ಯಾಪಾರಿಗಳಿಗೆ ಸಂಕಷ್ಟ, ಹಲವೆಡೆ ಕರೆಂಟ್ ಕಟ್ ಭಾರಿ ಮಿಂಚು, ಗುಡುಗು ಸಹಿತ ದಿಢೀರ್ ಮಳೆಯಿಂದಾಗಿ ಜನರು ತತ್ತರಿಸಿ ಹೋದರು. ಬಿಡುವು ಕೊಡದೆ ಮಳೆ ಸುರಿಯಿತು. ಮಳೆ … Read more

ಶಿವಮೊಗ್ಗದಲ್ಲಿ ಭಾರಿ ಮಳೆ, ಮನೆ ಸೇರಲು ಜನರ ಸರ್ಕಸ್, ವ್ಯಾಪಾರಿಗಳಿಗೆ ಸಂಕಷ್ಟ, ಹಲವೆಡೆ ಕರೆಂಟ್ ಕಟ್

211021 Night Rain in Shimoga City

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಅಕ್ಟೋಬರ್ 2021 ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಗುಡುಗು, ಮಿಂಚು ಸಹಿತ ವರುಣ ಅಬ್ಬರಿಸುತ್ತಿದ್ದಾನೆ. ಇದರಿಂದ ಜನ ಜೀವನಕ್ಕೆ ಅಡ್ಡಿ ಉಂಟಾಗಿದೆ. ಎಂಟು ಗಂಟೆ ಹೊತ್ತಿಗೆ ಶಿವಮೊಗ್ಗ ನಗರದಲ್ಲಿ ಮಳೆ ಶುರುವಾಗಿದೆ. ಒಂದು ಗಂಟೆಗೂ ಹೆಚ್ಚು ಹೊತ್ತು ನಿರಂತರ ಮಳೆ ಸುರಿಯುತ್ತಿದೆ. ಮಿಂಚು, ಗುಡುಗು ಅಬ್ಬರ ಜೋರಿದೆ. ಹೊಂಡ, ಗುಂಡಿ ತುಂಬ ನೀರು ಶಿವಮೊಗ್ಗ ನಗರದಾದ್ಯಂತ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಇದರಿಂದ ರಸ್ತೆ ತುಂಬೆಲ್ಲ ಹೊಂಡ, … Read more

ಅಂಬು ಕಡಿಯುವ ಸಂಪ್ರದಾಯದ ನಂತರ ಶಿವಮೊಗ್ಗದಲ್ಲಿ ಗುಡುಗು ಸಹಿತ ಜೋರು ಮಳೆ

Rain-At-Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಅಕ್ಟೋಬರ್ 2021 ನವರಾತ್ರಿಯ ಕೊನೆ ದಿನ ಶಿವಮೊಗ್ಗದಲ್ಲಿ ವರುಣ ಅಬ್ಬರಿಸಲು ಆರಂಭಿಸಿದ್ದಾನೆ. ಅಂಬು ಕಡಿಯುವ ಸಂಪ್ರದಾಯ ಮುಗಿಯುತ್ತಿದ್ದಂತೆ ಭಾರಿ ಮಳೆ ಶುರುವಾಗಿದೆ. ಶಿವಮೊಗ್ಗದಲ್ಲಿ ಗುಡುಗು, ಮಿಂಚು ಸಹಿತ ಜೋರು ಮಳೆಯಾಗುತ್ತಿದೆ. ಅಂಬು ಕಡಿಯುವ ಕಾರ್ಯಕ್ರಮ ಸೇರಿದಂತೆ ವಿವಿಧೆಡೆಗೆ ಬಂದಿದ್ದ ಜನರು ಮಳೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಜೋರು ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. (ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ … Read more

ಶಿವಮೊಗ್ಗದ ತುಂಗಾ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

140819 Drone Video Pradeep Tunga River 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 06 ಅಕ್ಟೋಬರ್ 2021 ಶಿವಮೊಗ್ಗದ ತುಂಗಾ ನದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತದೇಹವು ನದಿಯಲ್ಲಿ ತೇಲೆ ಬಂದಿರುವ ಶಂಕೆ ಇದೆ. ರಾಜೀವ್ ಗಾಂಧಿ ಬಡಾವಣೆ ಬಳಿ ಹೊಳೆಯಲ್ಲಿ ಮೃತದೇಹ ಕಾಣಿಸಿಕೊಂಡಿದೆ. ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆ ತಂದಿದ್ದಾರೆ. ಮೃತ ವ್ಯಕ್ತಿಯು ಸುಮಾರು 50 ವರ್ಷದವರಾಗಿದ್ದಾರೆ. ಅವರ ಗುರುತು ಪತ್ತೆಯಾಗಿಲ್ಲ. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. (ಶಿವಮೊಗ್ಗ ಲೈವ್.ಕಾಂ … Read more

ಮನೆಗಳಿಗೆ ನುಗ್ಗಿತು ಮಳೆ ನೀರು, ರಸ್ತೆಗಳು ಸಂಪೂರ್ಣ ಜಲಾವೃತ, ಪಾಲಿಕೆಗೆ ಜನರ ಹಿಡಿಶಾಪ

061021 Fload at Hosamane Layout in Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 06 ಅಕ್ಟೋಬರ್ 2021 ಭಾರಿ ಮಳೆಗೆ ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಡಾವಣೆಯ ಕೆಲವು ಭಾಗ ಜಲಾವೃತವಾಗಿದೆ. ಇದನ್ನು ಓದಿ | ಶಿವಮೊಗ್ಗದಲ್ಲಿ ಮಳೆ ಆರ್ಭಟ, ಜನ ತತ್ತರ, ರಸ್ತೆಗಳು ಜಲಾವೃತ | PHOTO NEWS ಬಡಾವಣೆಯ ಎರಡನೇ ಕ್ರಾಸ್’ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಭಾರಿ ಮಳೆಯಾಗುತ್ತಿದ್ದಂತೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆ ಜಲಾವೃತವಾಗಿದೆ. ಮಳೆ ಪ್ರಮಾಣದ ಅಧಿಕಾದ ಹಿನ್ನೆಲೆ ಹೊಸಮನೆ ಬಡಾವಣೆಯ ಮನೆಗಳಿಗೆ ನೀರು … Read more