ಶಿವಮೊಗ್ಗದಲ್ಲಿ ಜೋರು ಮಳೆ, ತಗ್ಗು ಪ್ರದೇಶಗಳು ಜಲಾವೃತ, ರಸ್ತೆಗಳ ಮೇಲೆ ನೀರೋ ನೀರು
ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಅಕ್ಟೋಬರ್ 2020 ಶಿವಮೊಗ್ಗದಲ್ಲಿ ಕಳೆದ ಎರಡು ದಿನದಿಂದ ಭಾರಿ ಮಳೆಯಾಗುತ್ತಿದೆ. ಜೋರು ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದೆ. ಹಲವು ಕಡೆ ರಸ್ತೆಗಳು ಜಲಾವೃತವಾಗಿವೆ. ಬಾಲರಾಜ ಅರಸ್ ರಸ್ತೆಯಿಂದ ದುರ್ಗಿಗುಡಿ ಕಡೆಗೆ ಬರುವ ಕಾಂಗ್ರೆಸ್ ಜಿಲ್ಲಾ ಕಚೇರಿ ಇರುವ ರಸ್ತೆಯಲ್ಲಿ ಚರಂಡಿ ತುಂಬಿ ಹರಿದಿದೆ. ಇದರಿಂದ ರಸ್ತೆ ಸಂಪುರ್ಣವಾಗಿ ಜಲವೃತವಾಗಿತ್ತು. ಮಳೆ ನಿಂತು ನೀರು ಸರಾಗವಾಗಿ ಹರಿದು ಹೋಗುವವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಗಿತ್ತು. ಆರ್‍ಎಂಎಲ್ … Read more