ಸಾಗರದಲ್ಲಿ ಹೆಗ್ಗೋಡಿನ ಚರಕಕ್ಕೆ ಸಿಕ್ತು ಮರು ಚಾಲನೆ, ಸರ್ಕಾರದಿಂದ ಸೌಲಭ್ಯ ಒದಗಿಸುವ ಭರವಸೆ
ಶಿವಮೊಗ್ಗ ಲೈವ್.ಕಾಂ | SAGARA NEWS | 3 ಅಕ್ಟೋಬರ್ 2020 ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿ ಸ್ಥಗಿತಗೊಂಡಿದ್ದ ಹೆಗ್ಗೋಡಿನ ಚರಕ ಮಹಿಳಾ ವಿವಿದ್ದೋದ್ದೇಶ ಸಹಕಾರ ಸಂಘಕ್ಕೆ ಗಾಂಧಿ ಜಯಂತಿಯಂದು ಮರಚಾಲನೆ ನೀಡಲಾಗಿದೆ. ನೂತನ ಕಟ್ಟಡವನ್ನೂ ಉದ್ಘಾಟಿಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಚರಕಕ್ಕೆ ಮರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕರೋನ ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದ್ದ ಚರಕ ಮರುಚಾಲನೆ ಪಡೆಯುತ್ತಿದೆ. ಸಂಸ್ಥೆಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು. … Read more