ಕರೋನ ವರದಿಯ ಸೀಲ್ನಲ್ಲಿ ಅಕ್ಷರ ವ್ಯತ್ಯಾಸ, ತೀರ್ಥಹಳ್ಳಿ ಮಹಿಳೆಗೆ ವಿಮಾನ ಹತ್ತಿಸದ ಸ್ಪೈಸ್ ಜೆಟ್, ವ್ಯತ್ಯಾಸ ಆಗಿದ್ದೇನು?
ಶಿವಮೊಗ್ಗ ಲೈವ್.ಕಾಂ |SHIMOGA NEWS | 23 NOVEMBER 2020 ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೀಲ್ ಎಡವಟ್ಟಿನಿಂದ, ತೀರ್ಥಹಳ್ಳಿಯ ಮಹಿಳೆಯೊಬ್ಬರನ್ನು ಮಂಗಳೂರು ಏರ್ಪೋರ್ಟ್ನಲ್ಲಿ ವಿಮಾನ ಹತ್ತದಂತೆ ತಡೆಯಲಾಗಿದೆ. ಸಿಮ್ಸ್ ಸಂಸ್ಥೆ ನೀಡಿದ್ದ ಕರೋನ ವರದಿಯಲ್ಲಿ ಸ್ಪೆಲ್ಲಿಂಗ್ ವ್ಯತ್ಯಾಸದಿಂದ ಗೊಂದಲ ನಿರ್ಮಾಣವಾಗಿತ್ತು. ಏನಿದು ಘಟನೆ? ತೀರ್ಥಹಳ್ಳಿಯ 47ನೇ ವರ್ಷದ ಚಾಂದ್ ಬೇಗಂ ಅವರು ದುಬೈಗೆ ತೆರಳಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ದುಬೈನಲ್ಲಿರುವ ಮಗನ ಮನೆಗೆ ತೆರಳಬೇಕಿತ್ತು. ಮಂಗಳೂರಿನಿಂದ ಸ್ಪೈಸ್ ಜೆಟ್ ಸಂಸ್ಥೆಯ ವಿಮಾನದಲ್ಲಿ ಶುಕ್ರವಾರ ರಾತ್ರಿ … Read more