ಮೈಮೇಲೆ ಹರಿದ ಜಂಬಿಟ್ಟಿಗೆ ಲಾರಿ, ಸ್ಥಳದಲ್ಲೇ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

man-breathed-last-near-ripponpete-in-hosanagara.

ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆ ನೋಡ್ಲು ಬಸ್ ನಿಲ್ದಾಣದ ಬಳಿ ಜಂಬಿಟ್ಟಿಗೆ ತುಂಬಿದ್ದ ಲಾರಿ ಡಿಕ್ಕಿ (Road Accident) ಹೊಡೆದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಂಬಳ್ಳಿಯ ಎಣ್ಣೆನೋಡ್ಲು ನಿವಾಸಿ ನಯಾಜ್ ಅಹಮದ್ (38) ಮೃತರು. ತೀರ್ಥಹಳ್ಳಿ ಕಡೆಗೆ ಹೊರಟಿದ್ದ ಖಾಸಗಿ ಬಸ್ ನಿಲ್ದಾಣದಲ್ಲಿ ನಿಂತಿತ್ತು. ನಾಟಿ ಔಷಧದ ಪಾರ್ಸಲ್ ಕಳಿಸುವ ಉದ್ದೇಶದಿಂದ ನಯಾಜ್ ಚಾಲಕನ ಜೊತೆ ಮಾತನಾಡುತ್ತಾ ನಿಂತಿದ್ದರು. ರಿಪ್ಪನ್‌ಪೇಟೆ ಕಡೆಯಿಂದ ವೇಗವಾಗಿ ಬಂದ ಲಾರಿ ನಯಾಜ್‌ ಅಹಮದ್‌ಗೆ ಡಿಕ್ಕಿ ಹೊಡೆದು ಮೈಮೇಲೆ ಹರಿದಿದೆ. … Read more

ರಸ್ತೆಯಲ್ಲಿ ದಿಢೀರ್‌ ಎದುರಿಗೆ ಬಂದ ಮುಸುಕುಧಾರಿ, ಖಾರದ ಪುಡಿ ಎರಚಿ, ಗೃಹಿಣಿ ತಲೆಗೆ ರಾಡ್‌ನಿಂದ ಹೊಡೆತ

281123-Anandapura-Police-Station-Board.webp

ಆನಂದಪುರ: ಇಲ್ಲಿನ ಮಸ್ಕಲಬೈಲು ಗ್ರಾಮದಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಕಣ್ಣಿಗೆ ಖಾರದ ಪುರಡಿ ಎರಚಿ, ಬೈಕ್‌ನ ಹಿಂಬದಿ ಕುಳಿತಿದ್ದ ಅವರ ಸೊಸೆಯ ತಲೆಗೆ ಸ್ಟೀಲ್‌ ರಾಡ್‌ನಿಂದ ಹೊಡೆಯಲಾಗಿದೆ (Shocking attack) ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದ ಮತ್ತೆರಡು ಇಂದಿರಾ ಕ್ಯಾಂಟೀನ್‌ಗಳು ಉದ್ಘಾಟನೆಗೆ ಟೈಮ್‌ ಫಿಕ್ಸ್‌ ಶೃತಿ ಅವರು ಸೊರಬದಲ್ಲಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದರು. ಅವರ ಮಾವ ಶೃತಿ ಅವರನ್ನು ಬೈಕಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಮರದ ಮರೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ದಿಢೀರ್‌ ರಸ್ತೆಗೆ … Read more

ಪಿಳ್ಳಂಗೆರೆಯಲ್ಲಿ ಚಿನ್ನಾಭರಣ ಕಳ್ಳತನ, ಹೇಗಾಯ್ತು ಘಟನೆ?

301123-Shimoga-Rural-Police-Station.webp

ಶಿವಮೊಗ್ಗ: ಮನೆಯೊಂದರ ಬೀಗ ಮುರಿದು (House burglary) ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಯಾರು ಇಲ್ಲದ ಸಮಯ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿದ್ದಾರೆ. ಇದನ್ನೂ ಓದಿ » ಉದ್ಯಮಿಗಳೇ ಹುಷಾರ್‌, ಶಿವಮೊಗ್ಗ ಜಿಲ್ಲೆಯ ಡಾಂಬಾರು ವ್ಯಾಪಾರಿಗೆ ಲಕ್ಷ ಲಕ್ಷ ಮೋಸ, ಆಗಿದ್ದೇನು? ಶಿವಮೊಗ್ಗ ತಾಲೂಕು ಪಿಳ್ಳಂಗೆರೆ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಇಕ್ಬಾಲ್‌ ಅಹಮದ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಬೀರುವಿನಲ್ಲಿಟ್ಟಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ನೆಕ್ಲೇಸ್, ಮಕ್ಕಳ ಚಿನ್ನದ ಉಂಗುರಗಳು, ಕಿವಿ ಓಲೆ ಮತ್ತು ಬೆಳ್ಳಿಯ ಆಭರಣಗಳನ್ನು … Read more

ವಿನೋಬನಗರದಲ್ಲಿ ಅರುಣ್‌ ಕೊಲೆ, ಕಾರಣವೇನು? ಘಟನೆ ಬಗ್ಗೆ SP ಮೊದಲ ಪ್ರಕ್ರಿಯೆ

SP-GK-Mithun-Kumar-speaks-about-Arun-murder-case.

ಶಿವಮೊಗ್ಗ: ವಿನೋಬನಗರದ ತರಕಾರಿ ಮಂಡಿ ಬಳಿ ಕಳೆದ ರಾತ್ರಿ ನಡೆದ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ಮೂರು ತಂಡ (police teams) ರಚಿಸಲಾಗಿದೆ. ಶೀಘ್ರ ಮೂವರು ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ, ಘಟನೆ ಕುರಿತು ವಿವರಣೆ ನೀಡಿದ್ದಾರೆ. ಎಸ್‌.ಪಿ ಏನೆಲ್ಲ ಹೇಳಿದರು? ಅರುಣ್‌ (26) ಎಂಬಾತನ ಹತ್ಯೆಯಾಗಿದೆ. ಆತನ ಹೆಂಡತಿಯ ಸೋದರ ಮಾವ ಮತ್ತು ಆತನ ಇಬ್ಬರು ಸ್ನೇಹಿತರು … Read more

ಗುತ್ತಿಗೆದಾರನ ಆತ್ಮಹತ್ಯೆ ಕುರಿತು ಶಿವಮೊಗ್ಗದಲ್ಲಿ ಗೃಹ ಸಚಿವರ ಮೊದಲ ಪ್ರತಿಕ್ರಿಯೆ

Home-Minister-Araga-Janendra-About-Udupi-Suicide

SHIVAMOGGA LIVE NEWS | HOME MINISTER | 12 ಏಪ್ರಿಲ್ 2022 ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲಿನ ಆರೋಪ ಸಂಬಂಧವು ಹೇಳಿಕೆ ನೀಡಿದ್ದಾರೆ. ಗೃಹ ಸಚಿವರು ಹೇಳಿದ್ದೇನು? ‘ಉಡುಪಿ ಜಿಲ್ಲಾ ರಕ್ಷಣಾಧಿಕಾರಿ ಅವರ ಜೊತೆಗೆ ಈಗಷ್ಟೆ ಮಾತನಾಡಿದ್ದೇನೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸುತ್ತಿದ್ದಾರೆ. ಅವರು ಬಂದ ಬಳಿಕ ಕೊಠಡಿಯ ಬಾಗಿಲು … Read more

ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಮನೆಗೆ ಮುತ್ತಿಗೆ ಯತ್ನ

Shimoga-Youth-Congress-Protest-against-Eshwarappa

SHIVAMOGGA LIVE NEWS | Youth Congress | 12 ಏಪ್ರಿಲ್ 2022 ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಖಂಡಿಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕೆ.ಎಸ್.ಈಶ್ವರಪ್ಪ ಅವರ ನಿವಾಸಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರ ನಿವಾಸಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಬಿ.ಹೆಚ್.ರಸ್ತೆಯಿಂದ ಮಲ್ಲೇಶ್ವರ … Read more

ಲಕ್ಷಾಂತರ ಮೌಲ್ಯದ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಮೂವರ ಮೇಲೆ ಸಾಗರ ಪೊಲೀಸರ ದಾಳಿ

Sagara Police Station Building

SHIVAMOGGA LIVE NEWS | Ambergris  | 12 ಏಪ್ರಿಲ್ 2022 ಬೆಲೆಬಾಳುವ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೆಳದಿ ರಸ್ತೆಯ ರಾಮಪ್ಪ (40), ಕಾರ್ಗಲ್’ನ ಸಂದೀಪ್ ಜಾನ್ (49), ಸಾಗರ ನೆಹರೂ ನಗರದ ರೋಹಿತ್ (42) ಬಂಧಿತರು. ಸಾಗರ ರೈಲ್ವೆ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ ತಿಮಿಂಗಿಲ ವಾಂತಿ (ಅಂಬರ್ಗ್ರೀಸ್) ವಶಕ್ಕೆ ಪಡೆಯಲಾಗಿದೆ. ಅರ್ಧ … Read more

ಮನೆ ಬಾಗಿಲಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಬೆಳಗಾಗುವುದರಲ್ಲಿ ಇಲ್ಲ

SHIVAMOGGA LIVE NEWS | Crime News | 11 ಏಪ್ರಿಲ್ 2022 ಮನೆ ಬಾಗಿಲ ಪಕ್ಕದಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದ ಹೋಂಡಾ ಡಿಯೋ ಬೈಕ್ ಕಳ್ಳತನವಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯೂ ಮಂಡ್ಲಿಯ ಗಂಧರ್ವ ನಗರದ ಆನಂದ ಎಂಬುವವರಿಗೆ ಸೇರಿದ ಬೈಕ್ ಕಳವಾಗಿದೆ. ಭಾನುವಾರ ರಾತ್ರಿ 10 ಗಂಟೆಗೆ ಮನೆ ಬಳಿ ತಂದು ನಿಲ್ಲಿಸಿದ್ದ ಬೈಕ್ ಬೆಳಗೆದ್ದು ನೋಡಿದಾಗ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಬಳಿಕ ಪೊಲೀಸ್ ಠಾಣೆಗೆ ಬಂದು ದೂರು … Read more

ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಎಂಜಿನಿಯರ್ ಬೈಕ್’ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

Tunga-Nagara-Police-Station-Shimoga

SHIVAMOGGA LIVE NEWS | Crime News Today | 12 ಏಪ್ರಿಲ್ 2022 ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಬೈಕ್ ಸಂಪೂರ್ಣ ಸುಟ್ಟು ಹೋಗಿದೆ. ಎಂಜಿನಿಯರ್ ಸುರೇಂದ್ರಬಾಬು ಎಂಬುವವರು ಓಡಿಸುತ್ತಿದ್ದ ಹೋಂಡಾ ಆಕ್ಟೀವಾ ಬೈಕ್’ಗೆ ಬೆಂಕಿ ಹಚ್ಚಲಾಗಿದೆ. ಶನಿವಾರ ಬೆಳಗಿನ ಜಾವ ರಾಮಿನಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ | ‘ಕಸ್ಟಮರ್ ಕೇರ್’ಗೆ ಕರೆ ಮಾಡಿದ್ಮೇಲೆ ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಉಳಿದದ್ದು ಬರೀ 2 ರೂ..! ಸುರೇಂದ್ರ … Read more

ಕಾಡಿನಲ್ಲಿ ಅಂದರ್ – ಬಾಹರ್ ಜೂಜಾಟ, ಪೊಲೀಸರಿಂದ ದಾಳಿ

police jeep

SHIVAMOGGA LIVE NEWS | Gambling| 12 ಏಪ್ರಿಲ್ 2022 ಕಾಡಿನಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆ ಸಂಬಂಧ ಮೂವರನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಉಳಿದವರು ಪರಾರಿಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಶ್ರೀಧರ್ (27), ಸುರೇಶ್ (26), ಬಸವರಾಜ (31) ಬಂಧಿತರು. ಗಾಜನೂರಿನ ಕಾಡಿನಲ್ಲಿ ಇವರು ಜೂಜಾಟ ಆಡುತ್ತಿದ್ದರು. ಜೂಜಾಟದ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆ ತುಂಗಾ ನಗರ ಠಾಣೆ ಪಿಎಸ್ಐ ಶಿವಪ್ರಸಾದ್ ಅವರ ನೇತೃತ್ವದಲ್ಲಿ ದಾಳಿ … Read more