ಶಿವಮೊಗ್ಗದ ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ

New-Deputy Commissioner Prabhuling-Kavalakatti-takes-charge

ಶಿವಮೊಗ್ಗ: ನೂತನ ಜಿಲ್ಲಾಧಿಕಾರಿಯಾಗಿ (Deputy Commissioner) ಪ್ರಭುಲಿಂಗ್‌ ಕವಲಿಕಟ್ಟಿ ಇಂದು ಅಧಿಕಾರ ಸ್ವೀಕರಿಸಿದರು. ಡಿಸೆಂಬರ್‌ 31ರಂದು ಪ್ರಭುಲಿಂಗ್‌ ಕವಲಿಕಟ್ಟಿ ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿತ್ತು. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ್‌ ಕವಲಿಕಟ್ಟಿ ಅವರಿಗೆ ಅಧಿಕಾರ ವಹಿಸಿಕೊಟ್ಟರು. ನಂತರ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ್‌ ಕವಲಿಕಟ್ಟಿ ಅವರು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಇದನ್ನೂ ಓದಿ » ಶಿವಮೊಗ್ಗದ ನೂತನ ರಕ್ಷಣಾಧಿಕಾರಿ ಅಧಿಕಾರ ಸ್ವೀಕಾರ, ಮಹತ್ವದ ಮೀಟಿಂಗ್‌