ಕೊನೆಗೂ ಫ್ಯಾನ್ಸ್’ಗೆ ಸಿಕ್ತು ನಟ ವಿಜಯ್ ದರ್ಶನ, ಮತ್ತಷ್ಟು ಜನರಿಗೆ ಈಗ ಕಾತುರ, ಶಿವಮೊಗ್ಗದ ಹಳೇ ಜೈಲಲ್ಲಿ ದಳಪತಿ ಶೂಟಿಂಗ್

ಶಿವಮೊಗ್ಗ ಲೈವ್.ಕಾಂ | SHIMOGA | 12 ಡಿಸೆಂಬರ್ 2019 ತಮಿಳು ಸೂಪರ್ ಸ್ಟಾರ್ ವಿಜಯ ಅಭಿನಯದ ಮಹತ್ವಾಕಾಂಕ್ಷಿಯ ದಳಪತಿ 64 ಸಿನಿಮಾದ ಶೂಟಿಂಗ್ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಲಕ್ಷ್ಮೀ ಟಾಕೀಸ್ ಬಳಿ ಇರುವ ಹಳೆ ಜೈಲು ಆವರಣದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಕಳೆದ ಮೂರು ದಿನದಿಂದ ನಿರಂತರ ಶೂಟಿಂಗ್ ನಡೆಯುತ್ತಿದೆ. ಚಿತ್ರದ ಪ್ರಮುಖ ಸೀಕ್ವೆನ್ಸ್ ಒಂದರ ಚಿತ್ರೀಕರಣವನ್ನು ಶಿವಮೊಗ್ಗದ ಹಳೆ ಜೈಲಿನಲ್ಲಿ ಮಾಡಲಾಗುತ್ತಿದೆ. ಇದಕ್ಕಾಗಿ ಜೈಲು ಕಟ್ಟಡದೊಳಗೆ ಸೆಟ್ ಕೂಡ ಹಾಕಲಾಗಿದೆ. ಇಳಯ ದಳಪತಿ ನೋಡಲು ಫ್ಯಾನ್ಸ್ ಕಾತುರ … Read more

ಶಿವಮೊಗ್ಗದಲ್ಲಿ ‘ಒಡೆಯ’ನಿಗೆ ಭರ್ಜರಿ ಓಪನಿಂಗ್, ಡಿ ಬಾಸ್ ಪೋಸ್ಟರ್’ಗೆ ಹಾಲಿನ ಅಭಿಷೇಕ, ಹೇಗಿದೆ ಗೊತ್ತಾ ಸೆಲಬ್ರೇಷನ್?

ಶಿವಮೊಗ್ಗ ಲೈವ್.ಕಾಂ | SHIMOGA | 12 ಡಿಸೆಂಬರ್ 2019 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾಗೆ ಶಿವಮೊಗ್ಗದಲ್ಲೂ ಭರ್ಜರಿ ಓಪನಿಂಗ್ ಸಿಕ್ಕಿದೆ. ರಾತ್ರಿಯಿಂದಲೇ ಚಿತ್ರಮಂದಿರದ ಮುಂದೆ ಫ್ಯಾನ್ಸ್ ಸೆಲಬ್ರೇಷನ್ ನಡೆಯುತ್ತಿದೆ. HPC ಚಿತ್ರಮಂದಿರದಲ್ಲಿ ನಟ ದರ್ಶನ್ ಪೋಸ್ಟರ್’ಗೆ ಬೆಳಗ್ಗೆಯಿಂದಲೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುತ್ತಿದ್ದಾರೆ. ಪಟಾಕಿ ಹೊಡೆದು, ದರ್ಶನ್ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಚಿತ್ರಮಂದಿರದ ಸುತ್ತಲು ಅಭಿಮಾನಿಗಳು ಫ್ಲೆಕ್ಸ್ ಹಾಕಿ, ಒಡೆಯನಿಗೆ ಶುಭ ಕೋರಿದ್ದಾರೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ … Read more

HOSANAGARA | ಮತ್ತೆ 50ಕ್ಕೂ ಹೆಚ್ಚು ಲಾರಿ ತಡೆದು ಆಕ್ರೋಶ, ಲಾರಿ ಸಂಚಾರ್ ಬಂದ್’ಗೆ ಆಗ್ರಹ

ಶಿವಮೊಗ್ಗ ಲೈವ್.ಕಾಂ | HOSANAGARA | 11 ಡಿಸೆಂಬರ್ 2019 ಗಣಿ ಲಾರಿಗಳ ವಿರುದ್ಧ ಹೊಸನಗರದ ಕುಂಬತ್ತಿ ಗ್ರಾಮಸ್ಥರು ಪುನಃ ಧ್ವನಿ ಏರಿಸಿದ್ದಾರೆ. ಮತ್ತೆ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಲಾರಿಗಳಿಂದಾಗಿ ಕುಂಬತ್ತಿಯಲ್ಲಿ ಜನ, ಜಾನುವಾರುಗಳ ಓಡಾಟ ಕಷ್ಟಕರವಾಗಿದೆ. ಮನೆಯಿಂದ ಹೊರಗೆ ಕಾಲಿಡಲು ಕುಂಬತ್ತಿ ಗ್ರಾಮಸ್ಥರು ಹೆದರುವಂತಾಗಿದ ಎಂದು ಆರೋಪಿಸಿ ಇವತ್ತು ದಿಢೀರ್ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಕುಂಬತ್ತಿ ಗ್ರಾಮದಲ್ಲಿ ಲಾರಿಗಳಿಂದಾಗಿ ಪ್ರತಿದಿನ ಒಂದಿಲ್ಲೊಂದು ಅವಾಂತರ ಸೃಷ್ಟಿಯಾಗುತ್ತಿದೆ. ಇದರಿಂದ ಜನರು ತ್ತತರಿಸಿ ಹೋಗಿದ್ದಾರೆ. ಹಾಗಾಗಿ ಈ … Read more

SORABA | ಮತ್ತೆ ಪ್ರತ್ಯಕ್ಷವಾದ ಆನೆ ಹಿಂಡು, ಗ್ರಾಮಸ್ಥರಲ್ಲಿ ಢವಢವ, ಕಾಡಾನೆಗಳನ್ನು ಓಡಿಸಲು ಹರಸಾಹಸ

ಶಿವಮೊಗ್ಗ ಲೈವ್.ಕಾಂ | SORABA | 11 ಡಿಸೆಂಬರ್ 2019 ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವ ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ. ಆನೆ ಹಿಂಡಿನಿಂದಾಗಿ ಜನರು ಆತಂಕಕ್ಕೀಡಾಗಿದ್ದಾರೆ. ಸೊರಬ ತಾಲೂಕು ತಲಗಡ್ಡೆ ಕಿರು ಅರಣ್ಯದಲ್ಲಿ ನಾಲ್ಕು ಕಾಡಾನೆಗಳು ಬೀಡು ಬಿಟ್ಟಿವೆ. ಅರಣ್ಯದ ಅಕ್ಕಪಕ್ಕದ ಬಂಕಸಾಣ, ಕಚವಿ, ತಲಗಡ್ಡೆ ಗ್ರಾಮಗಳ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇDU ರೈತರಿಗೆ ಸಂಕಷ್ಟ ತಂದೊಡ್ಡಿದೆ. ಆನೆಗಳು ಪ್ರತ್ಯಕ್ಷವಾದ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ … Read more

NEWS 1 ರಾಜೀನಾಮೆ ಅಂಗೀಕರಿಸಬೇಡಿ, ಶಿವಮೊಗ್ಗ ಕಾಂಗ್ರೆಸ್ ಒತ್ತಾಯ | NEWS 2 ಮಂಗನ ಕಾಯಿಲೆ ಜಾಗೃತಿಗೆ ಡಿಸಿ

H-S-Sundaresh-Congress-President

ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019 NEWS 1 | ‘ದಿನೇಶ್ ಗುಂಡೂರಾವ್ ರಾಜೀನಾಮೆ ಅಂಗೀಕರಿಸಬೇಡಿ’ ಶಿವಮೊಗ್ಗ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ದಿನೇಶ್ ಗುಂಡೂರಾವ್ ಅವರು ನೀಡಿರುವ ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಂಗೀಕರಿಸಬಾರದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಒತ್ತಾಯಿಸಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಹೊಣೆಯನ್ನು ಕೆಪಿಸಿಸಿ ಅಧ್ಯಕ್ಷರ ಮೇಲೆ ಹೊರಿಸುವುದು ಸರಿಯಲ್ಲ. ಅನರ್ಹರ ಗೆಲುವಿಗೆ ಹಣಬಲ ಸೇರಿದಂತೆ ಅನೇಕ ಕಾರಣಗಳಿವೆ. … Read more

THIRTHAHALLI | ತಾಲೂಕು ಪಂಚಾಯ್ತಿ ಮುಂದೆ ಕಾಂಗ್ರೆಸ್ ಪ್ರತಿಭಟನೆ, ಅಧ್ಯಕ್ಷೆ ಮೇಲಿನ ಹಲ್ಲೆಗೆ ಖಂಡನೆ, ಅರೆಸ್ಟ್’ಗೆ ಆಗ್ರಹ

ಶಿವಮೊಗ್ಗ ಲೈವ್.ಕಾಂ | THIRTHAHALLI | 10 ಡಿಸೆಂಬರ್ 2019 ಕೋಣಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೇಲೆ ಬಿಜೆಪಿ ಮುಖಂಡರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಇವತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನಾ ಸಭೆ ನಡೆಸಿದ ಕಾಂಗ್ರೆಸ್ ಮುಖಂಡರು, ಸಭೆಯೊಂದರಲ್ಲಿ ಕೋಣಂದರೂ ಜಿಲ್ಲಾ ಪಂಚಾಯಿತಿ ಸದಸ್ಯೆಯ ಪತಿ ಪೂರ್ಣೇಶ್ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾ ಪ್ರಫುಲ್ಲಚಂದ್ರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ … Read more

ದುಬೈನಿಂದ ದೊಡ್ಡಪೇಟೆ ಠಾಣೆಗೆ ಕೊರಿಯರ್’ನಲ್ಲಿ ಬರ್ತಿದೆ ಮೂರು ಮೊಬೈಲ್, ಪಾರ್ಸಲ್ ಬರ್ತಿರೋದ್ಯಾಕೆ? ಕಳುಹಿಸ್ತಿರೋದ್ಯಾರು?

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019 ಒಮ್ಮೆ ಕಳವಾದ ಮೊಬೈಲ್ ವಾಪಸ್ ಕೈಸೇರುವುದು ವಿರಳ. ಅದರಲ್ಲೂ ಕಳ್ಳತನದ ಮಾಲು ಖರೀದಿಸಿದವರೇ ಪೋಸ್ಟ್ ಮೂಲಕ ಹೊರದೇಶದಿಂದ ಆ ಮೊಬೈಲ್‌ಗಳನ್ನು ಹಿಂದುರುಗಿಸುವುದು ಅಪರೂಪ. ಆದರೆ, ಇಂತಹ ಸನ್ನಿವೇಶಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆ ಸಾಕ್ಷಿಯಾಗಲಿದೆ. ಹೌದು, ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕಳವಾದ ಸ್ಮಾರ್ಟ್‌ಫೋನ್‌ಗಳು ಮಾಲೀಕರ ಕೈಸೇರಲಿದ್ದು, ದುಬೈನಿಂದ ಅವುಗಳನ್ನು ಪಾರ್ಸಲ್ ಮಾಡಲಾಗಿದೆ. ಪೊಲೀಸರ ಮೊಬೈಲ್’ಗಳನ್ನೇ ಕದ್ದಿದ್ದ ಕಳ್ಳ ಅಕ್ಟೋಬರ್‌ನಲ್ಲಿ ನಡೆದ ಹಿಂದೂ ಮಹಾಸಭಾ ಗಣೇಶ ಮೆರವಣಿಗೆ ಬಂದೋಬಸ್ತ್‌ಗೆ … Read more

SHIMOGA | ಸಾಮೂಹಿಕ ಮದುವೆ ಸಮಾರಂಭದಲ್ಲಿ ಆಯನೂರು ಮಂಜುನಾಥ್ ಮಗಳ ವಿವಾಹ

041119 Ayanur Manjunath Press Meet 1

ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019 ಧರ್ಮಶ್ರೀ ಸೇವಾ ಟ್ರಸ್ಟ್‌ನಿಂದ ಜ.30ಕ್ಕೆ ಶಿವಮೊಗ್ಗದಲ್ಲಿ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಇದೇ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪುತ್ರಿ ಶಮಾಕಾ ಸಹ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಾಗರ ರಸ್ತೆಯ ಪ್ರೇರಣಾ ಕನ್ವೆನ್ಸನ್ ಹಾಲ್‌ನಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿದ್ದು, ಆಯನೂರು ಪುತ್ರಿ ವಿವಾಹದ ಜತೆ 101 ಜೋಡಿ ನವಜೀವನ ಪ್ರವೇಶಿಸಬೇಕು ಎಂಬುದು ನಮ್ಮ ಆಶಯ ಎಂದು ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಡಿ.30ರೊಳಗೆ … Read more

GOOD NEWS | ಶಿವಮೊಗ್ಗದ ಮಹಿಳೆಯರಿಗೆ ಗುಡ್ ನ್ಯೂಸ್, ನಡು ರಾತ್ರಿಯಲ್ಲೂ ಸೇಫಾಗಿ ಮನೆ ತಲುಪಿಸಲು ಪೊಲೀಸರ ಸ್ಪೆಷಲ್ ಪ್ಲಾನ್

police jeep

ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019 ತೆಲಂಗಾಣದಲ್ಲಿ ಪಶು ವೈದ್ಯೆ ಅತ್ಯಾಚಾರ, ಬರ್ಬರ ಹತ್ಯೆ ಪ್ರಕರಣದ ಬಳಿಕ ಮಹಿಳಾ ಸುರಕ್ಷೆ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಮಧ್ಯೆ ರಾತ್ರಿ ವೇಳೆ ಮಹಿಳೆಯರು ಸುರಕ್ಷತೆಯಿಂದ ಸಂಚರಿಸಲು ಅನುವು ಮಾಡಿಕೊಡಲು ಶಿವಮೊಗ್ಗ ಪೊಲೀಸರು ವಿಭಿನ್ನ ಹೆಜ್ಜೆ ಇರಿಸಿದ್ದಾರೆ. ಮಹಿಳೆಯರು ಸುರಕ್ಷಿತೆಯಿಂದ ನಿಗದಿತ ಸ್ಥಳ ತಲುಪಲು ಇನ್ಮುಂದೆ ಪೊಲೀಸರು ನೆರವು ನೀಡಲಿದ್ದಾರೆ. ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಪ್ರಕಟಣೆ ಹೊರಡಿಸಿದ್ದು, ತುರ್ತು ಸಂದರ್ಭದಲ್ಲಿ ಮಹಿಳೆಯರು ಕರೆ ಮಾಡಬಹುದು … Read more

VINOBANAGARA | ವಾಹನ ತಪಾಸಣೆ ವೇಳೆ ಅನುಮಾನದ ವರ್ತನೆ, ವಿಚಾರಣೆ ನಡೆಸಿದಾಗ ಹೊರಬಿತ್ತು ವರ್ಷದ ಹಿಂದಿನ ಖತರ್ನಾಕ್ ಕಳ್ಳತನ ಕೇಸ್

ಶಿವಮೊಗ್ಗ ಲೈವ್.ಕಾಂ | SHIMOGA | 09 ಡಿಸೆಂಬರ್ 2019 ನಿಲ್ಲಿಸಿದ್ದ ಕಾರಿನ ಮ್ಯಾಗ್ ವೀಲ್’ಗಳನ್ನು ಕಳ್ಳತನ ಮಾಡಿದ್ದ ಕಳ್ಳರು ಒಂದು ವರ್ಷದ ಬಳಿಕ ಅರೆಸ್ಟ್ ಆಗಿದ್ದಾರೆ. ವಿನೋಬಗರ ಪೊಲೀಸರು ಇವರನ್ನು ಬಂಧಿಸಿದ್ದಾರೆ. 2018ರ ಡಿಸೆಂಬರ್’ನಲ್ಲಿ, ವಿನೋಬನಗರ ಪೊಲೀಸ್ ಚೌಕಿ ಬಳಿಕ ಮ್ಯಾಗ್ ವೀಲ್’ಗಳನ್ನು ಕಳ್ಳತನ ಮಾಡಲಾಗಿತ್ತು. ಆದರೆ ಕಳ್ಳರು ಪತ್ತೆಯಾಗಿರಲಿಲ್ಲ. ಇತ್ತೀಚೆಗೆ ಇದೇ ಕಳ್ಳರು ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕಿಡ್ನಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. … Read more