ಶಿವಮೊಗ್ಗದಲ್ಲಿ ಈ ಬಾರಿ ಅದ್ಧೂರಿ ದಸರಾ, ಉದ್ಘಾಟನೆ ಯಾರಿಂದ? ಜಂಬೂ ಸವಾರಿ ಯಾವತ್ತು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 27 ಸೆಪ್ಟೆಂಬರ್ 2019 ಮಹಾನಗರ ಪಾಲಿಕೆ ವತಿಯಿಂದ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 29ರಿಂದ ನವರಾತ್ರಿ ಉತ್ಸವ ನಡೆಯಲಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪಾಲಿಕೆ ಮೇಯರ್ ಲತಾ ಗಣೇಶ್, ಪಾರಂಪರಿಕ ದಸರಾ ಆಚರಣೆಯನ್ನು ಅದ್ಧೂರಿಯಾಗಿ ನೆರವೇರಿಸಲಾಗುತ್ತದೆ ಎಂದರು. ದಸರಾ ಉದ್ಘಾಟನೆಗೆ ಬರ್ತಿದ್ದಾರೆ ಪ್ರಸಿದ್ಧ ಕವಿ ಸೆಪ್ಟೆಂಬರ್ 29ರಂದು ಶಿವಮೊಗ್ಗದ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಡದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಕವಿ … Read more

ಗಾಂಜಾ ಪತ್ತೆಗೆ ಮತ್ತೆ ಡ್ರೋಣ್ ಹಾರಿಬಿಟ್ಟ ಅಬಕಾರಿ ಇಲಾಖೆ, ಎಲ್ಲೆಲ್ಲಿ ಕಾರ್ಯಾಚರಣೆ ನಡೆಸಲಾಯ್ತು ಗೊತ್ತಾ?

270919 Drone To Find Ganja 1

ಶಿವಮೊಗ್ಗ ಲೈವ್.ಕಾಂ | ಸೊರಬ | 27 ಸೆಪ್ಟೆಂಬರ್ 2019 ಜೋಳ ಮತ್ತು ಶುಂಠಿ ಬೆಳೆ ನಡುವೆ ಗಾಂಜಾ ಬೆಳೆ ಬೆಳೆದಿರುವುದನ್ನು ಪತ್ತೆ ಹಚ್ಚಲು ಅಬಕಾರಿ ಇಲಾಖೆ ಪುನಃ ಡ್ರೋಣ್ ಕಾರ್ಯಾಚರಣೆ ಆರಂಭಿಸಿದೆ. ಸೊರಬ ತಾಲೂಕಿನ ವಿವಿಧೆಡೆ ಮೊದಲ ಹಂತದ ಡ್ರೋಣ್ ಆಪರೇಷನ್ ನಡೆಸಲಾಗಿದೆ. ಸಾಗದ್ದೆ, ಕೊಡಕಣಿ, ಮಾಳೆಕೊಪ್ಪ, ಸಾರೆಕೊಪ್ಪ ಗ್ರಾಮಗಳಲ್ಲಿ ಜೋಳ ಮತ್ತು ಶುಂಠಿ ಬೆಳೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಡ್ರೋಣ್ ಹಾರಿಸಿಬಿಟ್ಟರು. ಆದರೆ ಗಾಂಜಾ ಪತ್ತೆ ಆಗಿಲ್ಲ. ಈ ನಡುವೆ ಡ್ರೋಣ್ ಕಾರ್ಯಾಚರಣೆ … Read more

ಸಿಎಂ ಯಡಿಯೂರಪ್ಪಗೆ ಟೈಮ್ ಕೊಡುತ್ತಿಲ್ಲ ಮೋದಿ, ಕಾರು ಬಿಟ್ಟು ಕೆಳಗಿಳಿಯುತ್ತಿಲ್ಲ ಈಶ್ವರಪ್ಪ, ಕಾಂಗ್ರೆಸ್ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 26 ಸೆಪ್ಟೆಂಬರ್ 2019 ಅತಿವೃಷ್ಟಿ ಕುರಿತು ಪರಿಶೀಲನಾ ಸಭೆ ನಡೆಸಬೇಕಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾರು ಬಿಟ್ಟು ಕಳೆಗಿಳಿಯುತ್ತಿಲ್ಲ. ಕಂದಾಯ ಸಚಿವರು ಚಿಕ್ಕಮಗಳೂರು ಬಿಟ್ಟು ಬೇರಾವ ಜಿಲ್ಲೆಗು ತೆರಳಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ದಿವಾಕರ್ ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ದಿವಾಕರ್, ಅತಿವೃಷ್ಟಿ ಸಂದರ್ಭವನ್ನು ನಿಭಾಯಿಸುವ ಪ್ರಮುಖ ಜವಾಬ್ದಾರಿ ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳ ಮೇಲಿರುತ್ತದೆ. ಆದರೆ ಗ್ರಾಮೀಣಾಭಿವೃದ್ದಿ ಸಚಿವರು ಕಾರು ಬಿಟ್ಟು ಕೆಳಗಿಳಿಯುವುದಿಲ್ಲ ಅನ್ನುವುದಕ್ಕೆ ಬೆಳಗಾವಿಯಲ್ಲಿ ಆದ … Read more

ಸಾಗರ ಗಣಪತಿ ಕರೆಗೆ ಎಂಎಲ್ಎ ಭೇಟಿ, ಒತ್ತುವರಿ ತಡೆಗೆ ಕ್ರಮ, ಕೆರೆ ಒತ್ತುವರಿ ತಡೆಗೆ ಕೈಗೊಂಡ ಕ್ರಮವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಸಾಗರ | 26 ಸೆಪ್ಟೆಂಬರ್ 2019 ಸಾಗರದ ಗಣಪತಿ ಕೆರೆ ಕಾಮಗಾರಿ ಸ್ಥಳವನ್ನು ಶಾಸಕ ಹರತಾಳು ಹಾಲಪ್ಪ ಪರಿಶೀಲನೆ ನಡೆಸಿದರು. ಕೆರೆ ಭಾಗ ಒತ್ತುವರಿ ಆಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಗಣಪತಿ ಕೆರೆ ಸುತ್ತಲು ಡ್ರೈನೇಜ್ ತೆಗೆಸಲಾಗುತ್ತಿದೆ. ಕೊಳಚೆ ನೀರು ಗಣಪತಿ ಕೆರೆ ಸೇರಬಾರದು ಮತ್ತು ಕೆರೆ ಜಾಗ ಒತ್ತವರಿ ಮಾಡಬಾರದು ಅನ್ನುವ ಉದ್ದೇಶದಿಂದ ಡ್ರೈನೇಜ್ ತೆಗೆಸಲಾಗುತ್ತಿದೆ. ಈಗಾಗಲೆ ಒಂದು ಭಾಗದಲ್ಲಿ ಡ್ರೈನೇಜ್ ಕೆಲಸ ಪೂರ್ಣಗೊಂಡಿದೆ. ಮತ್ತೊಂದು ಭಾಗದಲ್ಲಿ … Read more

ನಕಲಿ ಹಕ್ಕುಪತ್ರ ನೀಡಿದ ಆರೋಪ, ನಗರ ಆರ್.ಐ ವಿರುದ್ಧ ಎರಡನೇ ಕಂಪ್ಲೇಂಟ್

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಹೊಸನನಗರ | 26 ಸೆಪ್ಟೆಂಬರ್ 2019 ನಕಲಿ ಹಕ್ಕುಪತ್ರ ನೀಡಿದ ಆರೋಪದ ಮೇಲೆ ಹೊಸನಗರ ತಾಲೂಕು ನಗರ ಹೋಬಳಿ ಕಂದಾಯ ನಿರೀಕ್ಷಕ (ಆರ್.ಐ) ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಆರ್.ಐ ದತ್ತಾತ್ರೇಯ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಹಕ್ಕುಪತ್ರ ನೀಡಿದ್ದಲ್ಲದೆ, ಅದನ್ನು ಅವರು ಹಿಂತಿರಿಗಿ ಕೇಳಿದಾಗ ವಾಪಸ್ ನೀಡಿದಿದ್ದ ಹಿನ್ನೆಲೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನೂಲಿಗ್ಗೇರಿ ಶಶಿಕಲಾ ಎಂಬುವವರು ಜಾತಿ ನಿಂದನೆ, ವಂಚನೆ ಮತ್ತು … Read more

ಶಿವಮೊಗ್ಗ ದಸರಾದಲ್ಲಿ ಇವತ್ತು ಮುದ್ದೆ ತಿನ್ನುವ ಸ್ಪರ್ಧೆ, ಹೇಗಿತ್ತು ಕಾಂಪಿಟೇಷನ್? ಹೆಚ್ಚು ಮುದ್ದೆ ತಿಂದಿದ್ದು ಯಾರು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 25 ಸೆಪ್ಟೆಂಬರ್ 2019 ಶಿವಮೊಗ್ಗ ದಸರಾದ ಆಹಾರ ಮೇಳದಲ್ಲಿ ಇವತ್ತು ಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಹಾನಗರ ಪಾಲಿಕೆ ವತಿಯಿಂದ ಶಿವಪ್ಪನಾಯಕ ಪ್ರತಿಮೆ ಬಳಿ ಕಾರ್ಯಕ್ರಮ ನಡೆಸಲಾಯಿತು. ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 50ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧಾಳುಗಳ ಜೊತೆ ಉಪಮೇಯರ್ ಮುದ್ದೆ ತಿನ್ನುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಪಾಲ್ಗೊಂಡಿದ್ದರು. ಮುದ್ದೆ ತಿಂದು ಸ್ಪರ್ಧಿಗಳನ್ನು ಹುರಿದುಂಬಿಸಿದರು. ಮೇಯರ್ ಲತಾ ಗಣೇಶ್, … Read more

ಕಸ್ತೂರಬಾ ಕಾಲೇಜು ಬಳಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಕಾರಣವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 25 ಸೆಪ್ಟೆಂಬರ್ 2019 ಕಸ್ತೂರಬಾ ಕಾಲೇಜು ಮುಂಭಾಗ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಕೈ ಮತ್ತು ಬೆನ್ನಿಗೆ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುಮನ್ ಗಾಯಗೊಂಡಿರುವ ಯುವಕ. ಮಂಗಳವಾರ ರಾತ್ರಿ ಸುಮನ್ ಬೈಕ್’ನಲ್ಲಿ ತೆರಳುತ್ತಿದ್ದಾಗ, ಕಸ್ತೂರಬಾ ಕಾಲೇಜು ಬಳಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಎರಡು ಬೈಕ್’ನಲ್ಲಿ ಹಿಂದಿನಿಂದ ಬಂದು ಅಟ್ಯಾಕ್ ಮಾಡಲಾಗಿದೆ. ಸುಮನ್ ಎಡಗೈಗೆ ಗಂಭೀರ ಗಾಯವಾಗಿದೆ. ಬೆನ್ನಿನ ಮೇಲು ತರಚಿದ ಗಾಯವಾಗಿದೆ. ಈ ಕುರಿತು … Read more

ಜೈಲ್ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್’ನಲ್ಲಿ ಗೊಂದಲವೊ ಗೊಂದಲ, ಠೇವಣಿ ಹಣ ಕೈಗೆ ಸಿಗದೆ ಗ್ರಾಹಕರಿಗೆ ಆತಂಕ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 20 ಸೆಪ್ಟೆಂಬರ್ 2019 ಠೇವಣಿ ಇಟ್ಟಿ ಹಣ ಬಿಡಿಸಲು ಬ್ಯಾಂಕ್ ಸಿಬ್ಬಂದಿ ನಿರ್ಬಂಧ ಹೇರಿದ್ದರಿಂದ, ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಯನ್ನು ತರಾಟಗೆ ತೆಗೆದುಕೊಂಡಿದ್ದಾರೆ. ಜೈಲ್ ರಸ್ತೆಯಲ್ಲಿರುವ ಪಿಎಂಸಿ ಬ್ಯಾಂಕ್’ನಲ್ಲಿ ಘಟನೆ ನಡೆದಿದೆ. ಗ್ರಾಹಕರು ಬ್ಯಾಂಕ್’ನಲ್ಲಿ ಇಟ್ಟಿರುವ ಠೇವಣಿ ಹಣವನ್ನು ಹಿಂಪಡೆಯಲು ಬ್ಯಾಂಕ್ ಸಿಬ್ಬಂದಿ ನಿರ್ಬಂಧ ಹೇರಿದ್ದಾರೆ. ಠೇವಣಿ ಹಣದಲ್ಲಿ ಕೇವಲ ಒಂದು ಸಾವಿರ ರೂ. ಮಾತ್ರ ಬಿಡಿಸಿಕೊಳ್ಳಬಹುದು ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಗೊಂದಲಕ್ಕೀಡಾದ ಗ್ರಾಹಕರು … Read more

VISLಗೆ ಬೇಕು ಬಂಡವಾಳ, ಬೋಧಕ ಸಿಬ್ಬಂದಿ ನೇಮಕಕ್ಕೆ ಒತ್ತಾಯ, ABVP ಕಾರ್ಯಕಾರಿಣಿಯಲ್ಲಿ ಏನೆಲ್ಲ ನಿರ್ಣಯವಾಗಿದೆ ಗೊತ್ತಾ?

VISL Bhadravathi 1

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 23 ಸೆಪ್ಟೆಂಬರ್ 2019 ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಗೆ ಸರ್ಕಾರ ತಕ್ಷಣ ಬಂಡವಾಳ ಹೂಡಿಕೆ ಮಾಡಿ, ಉತ್ಪಾದನೆ ಆರಂಭಿಸಬೇಕು ಅಂತಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯಕಾರಿಣಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ, ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಸ್ಥಿತಿಯಲ್ಲಿ ಇರುವುದು ಶೋಚನೀಯ. ಹಾಗಾಗಿ ಜನಪ್ರತಿನಿಧಿಗಳು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಕಾರ್ಖಾನೆ ಪುನಶ್ಚೇತನದ ಕುರಿತು ಧ್ವನಿ ಎತ್ತಬೇಕು ಎಂದರು. ತೀವ್ರ ನಿಗಾ … Read more

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ, ಅಡಕೆ ಚೀಲಗಳು ಚೆಲ್ಲಾಪಿಲ್ಲಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 23 ಸೆಪ್ಟೆಂಬರ್ 2019 ಅಡಕೆ ಚೀಲಗಳನ್ನು ತುಂಬಿಕೊಂಡಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಯಾವುದೆ ಸಾವು, ನೋವಿನ ವರದಿಯಾಗಿಲ್ಲ. ಆನಂದಪುರದಿಂದ ಶಿಕಾರಿಪುರಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಭೈರಾಪುರ ಕ್ರಾಸ್’ನಲ್ಲಿ ಬೆಳಗ್ಗೆ ಘಟನೆ ನಡೆದಿದೆ. ಲಾರಿ ಪಲ್ಟಿಯಾಗುತ್ತಿದ್ದಂತೆ ಅಡಕೆ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ. ಅಜಾಗರುಕತೆಯ ಚಾಲನೆಯ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – … Read more