ಶಿವಮೊಗ್ಗದಲ್ಲಿ ಎಬಿವಿಪಿಯ ಎರಡು ದಿನದ ರಾಜ್ಯ ಕಾರ್ಯಕಾರಿಣಿ, ಮಹತ್ವದ ವಿಚಾರಗಳ ಚರ್ಚೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 21 ಸೆಪ್ಟೆಂಬರ್ 2019 ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ನ ಎರಡು ದಿನದ ರಾಜ್ಯ ಕಾರ್ಯಕಾರಿಣಿ ಸಭೆ ಶಿವಮೊಗ್ಗದಲ್ಲಿ ಆರಂಭವಾಗಿದೆ. ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ನಡೆಯುತ್ತಿರುವ ಸಭೆಗೆ, ರಾಜ್ಯದ ವಿವಿಧೆಡೆಯಿಂದ ಕಾರ್ಯಕರ್ತರು ಆಗಮಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ, ದೇಶದಲ್ಲಿ ಭಾಷೆ ಮತ್ತು ಜಾತಿ ಆಧಾರದಲ್ಲಿ ಸಮಾಜವನ್ನು ಒಡೆಯುವ ಸಂಚುಗಳು ನಡೆಯುತ್ತಿವೆ. ಇದರ ವಿರುದ್ಧ ಯುವ ಸಮೂಹ ಜಾಗೃತವಾಗಿರಬೇಕು. 370ನೆ ವಿಧಿಗೆ ತಿದ್ದುಪಡಿ ತರುವ ಮೂಲಕ … Read more

ಮನೆ ಬಾಗಿಲ ಬೀಗ ಒಡೆದು, ಅಪ್ಪೆ ಮಾವಿನಮಿಡಿ ಉಪ್ಪಿನಕಾಯಿ ಬಾಟಲಿ ಕದ್ದ ಕಳ್ಳ..!

theft case general image

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 21 ಸೆಪ್ಟೆಂಬರ್ 2019 ಸಾಗರ ತಾಲೂಕಿನ ಬಚ್ಚಗಾರ ಗ್ರಾಮದ ಮನೆಯೊಂದರಲ್ಲಿ ಕಳ್ಳನಿಗೆ ಒಡವೆ, ಹಣ ಸಿಗದ ಕಾರಣ ಮಾವಿನ ಮಿಡಿ ಉಪ್ಪಿನಕಾಯಿಯನ್ನೇ ಕದ್ದೊಯ್ದ ಕುತೂಹಲಕಾರಿ ಘಟನೆ ಗುರುವಾರ ರಾತ್ರಿ ನಡೆದಿದೆ. ಸಾಗರ-ಜೋಗಫಾಲ್ಸ್ ಮಾರ್ಗದಲ್ಲಿರುವ ಬಚ್ಚಗಾರು ಗ್ರಾಮದ ಶುಂಠಿ ಸತ್ಯನಾರಾಯಣಭಟ್ಟರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಏನೂ ಸಿಕ್ಕಿಲ್ಲ. ಆದರೆ, ಸುವಾಸನೆ ಬೀರುವ ಅಪ್ಪೆ ಮಾವಿನ ಮಿಡಿಯ ಉಪ್ಪಿನಕಾಯಿ ಕಂಡಿದೆ. ಅದರ ರುಚಿಯನ್ನು ಸವಿದ ಕಳ್ಳ ಬಾಟಲಿಯನ್ನೇ … Read more

‘ಕೊನೆಗೂ ಈಡೇರಿತು ಬಹು ವರ್ಷದ ಬಿಜೆಪಿ ಆಶಯ, ನನಸಾಯ್ತು ಒಂದು ದೇಶ, ಒಂದು ಸಂವಿಧಾನ’

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 20 ಸೆಪ್ಟೆಂಬರ್ 2019 ದೇಶದಲ್ಲಿ ಒಂದೇ ಕಾನೂನು, ಒಂದೇ ಸಂವಿಧಾನ ಎಂಬ ಸಿದ್ಧಾಂತವನ್ನು  ಇಟ್ಟುಕೊಂಡೇ ಹುಟ್ಟಿರುವ ಬಿಜೆಪಿ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ಏಕತೆಯನ್ನು ಸಾರಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಹೇಳಿದರು ಅಂಬೇಡ್ಕರ್ ಭವನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಒಂದೆ ದೇಶ ಒಂದೆ ಸಂವಿಧಾನ ಪ್ರಬುದ್ಧತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಘದ ಕಾಲದಿಂದಲೂ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದು … Read more

ಶಿವಮೊಗ್ಗದಲ್ಲಿ ಓಂ ಗಣಪತಿ ಅದ್ಧೂರಿ ರಾಜಬೀದಿ ಮೆರವಣಿಗೆ, ಭಾರಿ ಭದ್ರತೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 20 ಸೆಪ್ಟೆಂಬರ್ 2019 ಶಿವಮೊಗ್ಗದ ಓಂ ಗಣಪತಿಯ ರಾಜಬೀದಿ ಉತ್ಸವ ನಡೆಯುತ್ತಿದೆ. ಗಾಂಧಿ ಬಜಾರ್, ಬಿ.ಹೆಚ್.ರಸ್ತೆ ಸೇರಿದಂತೆ, ಕೋಟೆ ರಸ್ತೆ ಮೂಲಕ ಮೆರವಣಿಗೆ ಸಾಗಲಿದೆ. ದೊಡ್ಡ ಸಂಖ್ಯೆಯಲ್ಲಿ ಯುವಕರು ರಾಜಬೀದಿ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಮೆರೆವಣಿಗೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – 9964634494 ಈ ಮೇಲ್ ಐಡಿ | shivamoggalive@gmail.com

ಪದವೀಧರರಿಗೆ ಸಿಗುತ್ತಿಲ್ಲ ಉದ್ಯೋಗ, ಶಿವಮೊಗ್ಗ ಬಸ್ ಸ್ಟಾಂಡ್ ಮುಂದೆ ಕೋಟ್ ತೊಟ್ಟು ಶೂ ಪಾಲಿಶ್, ಹಣ್ಣು, ಟೀ ಮಾರಾಟ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 20 ಸೆಪ್ಟೆಂಬರ್ 2019 ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ NSUI ಕಾರ್ಯಕರ್ತರು ಶಿವಮೊಗ್ಗ ಬಸ್ ಸ್ಟ್ಯಾಂಡ್ ವೃತ್ತದಲ್ಲಿ ಶೂ, ಚಪ್ಪಲಿ ಪಾಲಿಷ ಮಾಡಿ, ಹಣ್ಣು, ಟೀ ಮಾರಾಟ ಮಾಡಿ ವಿಭಿನ್ನ ಪ್ರತಿಭಟನೆ ನಡೆಸಿದರು. ಶಿವಮೊಗ್ಗ ಆಶೋಕ ವೃತ್ತದಲ್ಲಿ NSUI ಕಾರ್ಯಕರ್ತರು, ಮೋದಿ ನೇತೃತ್ವದ  ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಚ್ಚೇ ದಿನ್ ಕಬ್ ಆಯೇಗಾ ಎಂದು ಘೋಷಣೆ ಕೂಗುತ್ತ ಶೂ … Read more

ಗುಂಡಿ ಗಂಡಾಂತರ 4 | ರೋಡ್’ನಲ್ಲಿ ಗುಂಡಿಗಳಿವೆಯೋ, ಗುಂಡಿಗಳ ಮಧ್ಯೆ ಅಲ್ಲಲ್ಲಿ ಡಾಂಬರ್ ಹಾಕಿದ್ದಾರೋ?

200919 LLR Road Potholes 1

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 19 ಸೆಪ್ಟೆಂಬರ್ 2019 ‘ರಸ್ತೆಯಲ್ಲಿ ಗುಂಡಿಗಳಿವೆಯೋ, ಗುಂಡಿಗಳ ಮಧ್ಯೆ ಅಲ್ಲಲ್ಲಿ ಸ್ವಲ್ಪ ಡಾಂಬರು ಹಾಕಲಾಗಿದೆಯೋ..’ ರಸ್ತೆಯ ಅವಸ್ಥೆ ಕಂಡು ಆಟೋ ಚಾಲಕ ಮಂಜುನಾಥ್ ಬಣ್ಣಿಸಿದ್ದು ಹೀಗೆ. ಶಿವಮೊಗ್ಗದ ಎಲ್ಎಲ್ಆರ್ ರೋಡ್’ನಲ್ಲಿ ಎಲ್ಲೆಲ್ಲು ಗುಂಡಿಗಳೇ. ರಸ್ತೆಯ ಆರಂಭದಿಂದ ಅಂತ್ಯದವರೆಗೆ ಸಾಲು ಸಾಲು ಗುಂಡಿಗಳಿವೆ. ಈ ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಗುಂಡಿಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸುವುದು ವಾಹನ ಚಾಲಕರಿಗೆ ಅತಿ ದೊಡ್ಡ ಸವಾಲು. ಬೀಳೋದು, ಗಾಯಗೊಳ್ಳೋದು ಇಲ್ಲಿ ಕಾಮನ್ ವಾಹನ ಚಾಲಕರು ಬೀಳೋದು, ಗಾಯಗೊಳ್ಳುವುದು, … Read more

ಬಾಗಿಲಿಗೆ ಹಾಕಿದ್ದ ಬೀಗ ಹಾಗೆ ಇದೆ, ಆದರೂ ಸರ್ಕಾರಿ ಕಚೇರಿ ಸಭಾಂಗಣದಲ್ಲಿದ್ದ ಸ್ಪೀಕರ್’ಗಳು ನಾಪತ್ತೆ, ಎಲ್ಲಿ ಗೊತ್ತಾ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಸಾಗರ | 20 ಸೆಪ್ಟೆಂಬರ್ 2019 ಹಾಕಿದ್ದ ಬೀಗ ಹಾಗೆ ಇದೆ. ಆದರು ಸಭಾಂಗಣದ ಒಳಗಿದ್ದ ಸ್ಪೀಕರ್’ಗಳು ನಾಪತ್ತೆಯಾಗಿವೆ. ಇದು ಸಾಗರ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ನಡೆದ ವಿಚಿತ್ರ ಕಳ್ಳತನ. ತಾಲೂಕು ಪಂಚಾಯಿತಿ ಸಭೆ ನಡೆಯುವ ಸಭಾಂಗಣದಲ್ಲಿ ಅಳವಡಿಸಿದ್ದ ಎರಡು ಸ್ಪೀಕರ್’ಗಳು ನಾಪತ್ತೆ ಆಗಿವೆ. ಸಭಾಂಗಣದ ಬಾಗಿಲಿಗೆ ಹಾಕಿದ್ದ ಬೀಗ ಹಾಗೆಯೆ ಇದೆ. ಬೀಗಿ ಒಡೆಯದೆ ಸ್ಪೀಕರ್’ಗಳು ಕಳ್ಳತನವಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ದೂರು ನೀಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಿರ್ಧರಿಸಿದ್ದಾರೆ. … Read more

ವಾಸ್ತವ ಮರೆಮಾಚಿ ಕಲ್ಲು ಗಣಿಗಾರಿಕೆಗೆ ಅನುಮತಿ, ಗ್ರಾಮಸ್ಥರ ಆಕ್ರೋಶ, ಬೀದಿಗಿಳಿದು ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | ಹೊಸನಗರ | 20 ಸೆಪ್ಟೆಂಬರ್ 2019 ಮಾನದಂಡಗಳನ್ನು ನಿರ್ಲಕ್ಷಿಸಿ, ವಾಸ್ತವಾಂಶವನ್ನು ಮರೆಮಾಚಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಇದರಿಂದ ಭಾರಿ ಪ್ರಮಾಣದ ಕಾಡು ನಾಶ, ಜನಜೀವನಕ್ಕೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ತಾಲೂಕು ಕಚೇರಿ ಮುಂಭಾಗ ಕ್ಲಲು ಗಣಿಗಾರಿಕೆ ವಿರುದ್ಧ ಘೋಷಣೆ ಕೂಗಿದರು. ಕುಂಭತ್ತಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಇದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ … Read more

ಗೋಪಿ ಸರ್ಕಲ್’ನಲ್ಲಿರುವ ಪೋಸ್ಟ್ ಆಫೀಸ್ ಮುಂದೆ ಇಡಿ ರಾತ್ರಿ ಧರಣಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 20 ಸೆಪ್ಟೆಂಬರ್ 2019 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಚೆ ಇಲಾಖೆ ಸಿಬ್ಬಂದಿ ಗೋಪಿ ಸರ್ಕಲ್’ನಲ್ಲಿರುವ ಪ್ರಧಾನ ಅಂಚೆ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸಿದರು. ಹೊಸ ರಾಷ್ಟ್ರೀಯ ಪಿಂಚಣಿ ಪದ್ಧತಿ ರದ್ದುಗೊಳಿಸಿ ಎಲ್ಲರಿಗು ಹಳೆ ಪಿಂಚಣಿ ವ್ಯವಸ್ಥೆಯನ್ನೆ ಮುಂದುವರೆಸಬೇಕು, ರೈಲ್ವೆ ಇಲಾಖೆಯಲ್ಲಿ ಇರುವಂತೆ ಶೇ.100ರಷ್ಟು ಅನುಕಂಪ ಆಧಾರಿತ ನೌಕರಿ ವ್ಯವಸ್ಥೆಯನ್ನು ತಕ್ಷಣದಿಂದಲೆ ಜಾರಿಗೊಳಿಸಬೇಕು, ಬೆಂಚ್ ಮಾರ್ಕ್ ಪದ್ಧತಿ ತಕ್ಷಣದಿಂದ ಕೈಬಿಡಬೇಕು, ಅಂಚೆ ನೌಕರರ ಸಂಘದ ಸದಸ್ಯರ ವಿರುದ್ಧ ಅನುಸರಿಸುತ್ತಿರುವ … Read more

ಸಿಗಂದೂರು ಲಾಂಚ್’ಗೆ ತೆರಳುವ ಟೋಲ್’ನಲ್ಲಿ ನಕಲಿ ರಶೀದಿ ಪುಸ್ತಕ, ಪಿಡಿಒ ಸೇರಿ ಮೂವರ ವಿರುದ್ಧ ಎಫ್ಐಆರ್

Sigandur-Launch-General-Image

ಶಿವಮೊಗ್ಗ ಲೈವ್.ಕಾಂ | ಸಾಗರ | 20 ಸೆಪ್ಟೆಂಬರ್ 2019 ಟೋಲ್’ಗೇಟ್ ಶುಲ್ಕ ಸಂಗ್ರಹಿಸಲು ನಕಲಿ ರಶೀದಿ ಪುಸ್ತಕ ಬಳಸಿ ಹಣ ದುರುಪಯೋಗ ಮಾಡಿಕೊಂಡ ಆರೋಪದ ಹಿನ್ನೆಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ತುಮರಿ ಗ್ರಾಮ ಪಂಚಾಯಿತಿ ಪಿಡಿಒ ಇಮ್ತಿಯಾಜ್ ಪಾಷಾ, ಟೋಲ್’ಗೇಟ್ ಸಿಬ್ಬಂದಿಗಳಾದ ಮಧುಕುಮಾರ್ ಮತ್ತು ಪವನ್ ಮೇಲೆ ಎಫ್ಐಆರ್ ದಾಖಲಾಗಿದೆ. ಏನಿದು ಪ್ರಕರಣ? ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ಸಿಗಂದೂರು ಲಾಂಚ್’ಗೆ ತೆರಳುವ ಕಳಸವಳ್ಳಿ ಟೋಲ್’ಗೇಟ್’ನಲ್ಲಿ ನಕಲಿ … Read more