ಗುಂಡಿ ಗಂಡಾಂತರ 4 | ರೋಡ್’ನಲ್ಲಿ ಗುಂಡಿಗಳಿವೆಯೋ, ಗುಂಡಿಗಳ ಮಧ್ಯೆ ಅಲ್ಲಲ್ಲಿ ಡಾಂಬರ್ ಹಾಕಿದ್ದಾರೋ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 19 ಸೆಪ್ಟೆಂಬರ್ 2019

‘ರಸ್ತೆಯಲ್ಲಿ ಗುಂಡಿಗಳಿವೆಯೋ, ಗುಂಡಿಗಳ ಮಧ್ಯೆ ಅಲ್ಲಲ್ಲಿ ಸ್ವಲ್ಪ ಡಾಂಬರು ಹಾಕಲಾಗಿದೆಯೋ..’ ರಸ್ತೆಯ ಅವಸ್ಥೆ ಕಂಡು ಆಟೋ ಚಾಲಕ ಮಂಜುನಾಥ್ ಬಣ್ಣಿಸಿದ್ದು ಹೀಗೆ.

Prashanth GPS copy

ಶಿವಮೊಗ್ಗದ ಎಲ್ಎಲ್ಆರ್ ರೋಡ್’ನಲ್ಲಿ ಎಲ್ಲೆಲ್ಲು ಗುಂಡಿಗಳೇ. ರಸ್ತೆಯ ಆರಂಭದಿಂದ ಅಂತ್ಯದವರೆಗೆ ಸಾಲು ಸಾಲು ಗುಂಡಿಗಳಿವೆ. ಈ ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಗುಂಡಿಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸುವುದು ವಾಹನ ಚಾಲಕರಿಗೆ ಅತಿ ದೊಡ್ಡ ಸವಾಲು.

ಬೀಳೋದು, ಗಾಯಗೊಳ್ಳೋದು ಇಲ್ಲಿ ಕಾಮನ್

ವಾಹನ ಚಾಲಕರು ಬೀಳೋದು, ಗಾಯಗೊಳ್ಳುವುದು, ವಾಹನಗಳಿಗೆ ಡ್ಯಾಮೇಜ್ ಅಗುವುದಲ್ಲ ಎಲ್ಎಲ್ಆರ್ ರೋಡ್’ನಲ್ಲಿ ಸಾಮಾನ್ಯವಾಗಿದೆ ಅನ್ನುತ್ತಾರೆ ವ್ಯಾಪಾರಿ ಜಗದೀಶ್.

ಈ ರಸ್ತೆಯಲ್ಲಿರುವ ಗುಂಡಿಗಳು ವಾಹನ ಚಾಲಕರಿಗಷ್ಟೆ ಅಲ್ಲ, ಸ್ಥಳೀಯರು, ವ್ಯಾಪಾರಿಗಳು ಕಿರಿಕಿರಿ ಉಂಟು ಮಾಡುತ್ತಿದೆ. ಗುಂಡಿಯಿಂದ ಏಳುವ ಧೂಳು ಮನೆ, ಮಳಿಗೆಗಳಿಗೆ ನುಗ್ಗುತ್ತಿವೆ. ಇದರಿಂದ ವ್ಯಾಪಾರ, ವಹಿವಾಟಿಗು ತೊಂದರೆಯಾಗುತ್ತಿದೆ. ಆರೋಗ್ಯದ ಸಮಸ್ಯೆಯು ಎದುರಾಗುತ್ತಿವೆ.

ಕೂಡಲೆ ಎಲ್ಎಲ್ಅರ್ ರಸ್ತೆಗೆ ಡಾಂಬರು ಬರಲಿ ಅಂತಾ ಜನರು ಆಗ್ರಹಿಸಿದ್ದಾರೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳ್ಯಾರು ಇದಕ್ಕೆ ಕ್ಯಾರೆ ಅನ್ನದಿರುವುದು ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : September 20, 2019 at 10:55 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 20, 2019

Leave a Comment