ತಾಳಗುಪ್ಪದಿಂದ ಮತ್ತೊಂದು ರೈಲಿನ ಭರವಸೆ ಕೊಟ್ಟರು ರಾಘವೇಂದ್ರ, ಪ್ರಚಾರದ ಮಧ್ಯೆ ಮಕ್ಕಳ ಜೊತೆ ಕಬ್ಬಡಿ ಆಡಿದ ಮಧು

ಶಿವಮೊಗ್ಗ ಲೈವ್.ಕಾಂ | 09 ಏಪ್ರಿಲ್ 2019 ಲೋಕಸಭೆ ಚುನಾವಣೆಗೆ ಹದಿನಾಲ್ಕು ದಿನವಷ್ಟೆ ಬಾಕಿ ಇದೆ. ಅಭ್ಯರ್ಥಿಗಳು ಪ್ರಚಾರವನ್ನು ಬಿರುಸುಗೊಳಿಸಿದ್ದಾರೆ. ಯಡಿಯೂರಪ್ಪ ತವರಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪ್ರಚಾರ ನಡೆಸಿದರೆ, ಮಧು ಬಂಗಾರಪ್ಪ ತವರಲ್ಲಿ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬಿರುಸಿನ ಕ್ಯಾಂಪೇನ್ ಮಾಡಿದರು. ಹೇಗಿತ್ತು ರಾಘವೇಂದ್ರ ಕ್ಯಾಂಪೇನ್? ಸೊರಬ ತಾಲೂಕಿನ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬಿರುಸಿನ ಪ್ರಚಾರ ನಡೆಸಿದರು. ಬೂತ್ ಮಟ್ಟದಲ್ಲಿ ಕ್ಯಾಂಪೇನ್ ಮಾಡಿ, ಪೇಜ್ ಪ್ರಮುಖರ ಸಭೆಯನ್ನು ನಡೆಸಿದರು. ಸೊರಬ ತಾಲೂಕಿನ ಸೈದೂರು … Read more

ನಾವು ವೋಟ್ ಹಾಕಲ್ಲ ಅಂತಾ ಊರ ಮುಂದೆ ದೊಡ್ಡ ಬ್ಯಾನರ್ ಕಟ್ಟಿದ ಗ್ರಾಮಸ್ಥರು, ಅಧಿಕಾರಿಗಳ ತಂಡ ದೌಡು

ಶಿವಮೊಗ್ಗ ಲೈವ್.ಕಾಂ | 08 ಏಪ್ರಿಲ್ 2019 ಮತದಾನ ಬಹಿಷ್ಕರಿಸುವುದಾಗಿ ಊರಿನ ಮುಂದೆ ಗ್ರಾಮಸ್ಥರು ಬ್ಯಾನರ್ ಕಟ್ಟಿದ್ದಾರೆ. ಊರಿನ ಜನರೆಲ್ಲ ಒಟ್ಟಿಗೆ ನಿಂತು, ಪ್ರತಿಭಟನೆ ನಡೆಸಿ ತೆಗೆಸಿಕೊಂಡಿರುವ ಫೋಟೊವನ್ನು ಬ್ಯಾನರ್’ನಲ್ಲಿ ಹಾಕಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿ ತಾಲೂಕು ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆಬೈಲು ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಗ್ರಾಮದಲ್ಲಿ 500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಆದರೆ ಹೆಗ್ಗೆಬೈಲು ಗ್ರಾಮಕ್ಕೆ ಸರಿಯಾದ ರಸ್ತೆಯೇ ಇಲ್ಲ. ಹಾಗಾಗಿ ಜನರು ಓಡಾಡುವುದೇ ಕಷ್ಟವಾಗಿದೆ. ಕಳೆದ ಚುನಾವಣೆ ಸಂದರ್ಭ, ಜನಪ್ರತಿನಿಧಿಗಳಿಗೆ … Read more

ಯುಗಾದಿ ಆಚರಿಸಲು ಶಿಕಾರಿಪುರಕ್ಕೆ ಯಡಿಯೂರಪ್ಪ, ನಾಲ್ಕು ವರ್ಷ ಯಾರೂ ಅದನ್ನ ನನ್ನಿಂದ ಕಸಿದುಕೊಳ್ಳೋಕೆ ಆಗಲ್ಲ ಅಂತಾ ತಿರುಗೇಟು

ಶಿವಮೊಗ್ಗ ಲೈವ್.ಕಾಂ | 06 ಏಪ್ರಿಲ್ 2019 ಲೋಕಸಭೆ ಚುನಾವಣೆ ಬಳಿಕ ಯಡಿಯೂರಪ್ಪ ಮೂಲೆಗುಂಪಾಗುತ್ತಾರೆ ಅಂತಾ ಜೆಡಿಎಸ್, ಕಾಂಗ್ರೆಸ್ ನಾಯಕರ ಹೇಳಿಕೆಗೆ, ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಶಿಕಾರಿಪುರದಲ್ಲಿ ಶಿವಮೊಗ್ಗ ಲೈವ್.ಕಾಂ ಜೊತೆ ಮಾತನಾಡಿದ ಯಡಿಯೂರಪ್ಪ, ಪಕ್ಷ ಬದಲಾವಣೆ ಬಯಸಿದರೆ ಸ್ವಾಗತಿಸುತ್ತೇನೆ ಎಂದರು. ಬದಲಾವಣೆ ಬಯಸಿದರೆ ಸ್ವಾಗತ ಚುನಾವಣೆ ಬಳಿಕ, ಒಂದು ವೇಳೆ ಪಕ್ಷದ ಬದಲಾವಣೆ ಬಯಸಿದರೆ ತಾವು ಅದನ್ನು ಸ್ವಾಗತಿಸುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ನಾನೀಗ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ಇನ್ನೂ ನಾಲ್ಕು ವರ್ಷ … Read more

ಸಚಿವ ರೇವಣ್ಣ ಅವರ ಹಣ ನಿಮ್ಮಲ್ಲಿದೆ, ಮನೆ ಮೇಲೆ ರೇಡ್ ಮಾಡ್ತೀವಿ ಅಂತಾ ಅಧಿಕಾರಿಗೆ ಬೆದರಿಕೆ, ಸೊರಬದಲ್ಲಿ ಕೇಸ್

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | 04 ಏಪ್ರಿಲ್ 2019 ಎಸಿಬಿ ಡಿವೈಎಸ್ಪಿ ಎಂದು ಹೇಳಿ ಸೊರಬ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗೆ ಬ್ಲ್ಯಾಕ್’ಮೇಲ್ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ. ಮಂಜುನಾಥ್ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿ ವಿರುದ್ಧ ಕೆ.ಸಿ.ದೇವರಾಜೇಗೌಡ, ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಆಪ್ತರಾದ ನಿಮ್ಮಲ್ಲಿ ಅವರ ಹಣ ಇಡಲಾಗಿದೆ. ಈ ಕುರಿತು ಚರ್ಚಿಸಬೇಕಿದೆ. ಕೂಡಲೇ ವೈಯಕ್ತಿಕವಾಗಿ ನನಗೆ ಭೇಟಿ ನೀಡಿ. ಇಲ್ಲವಾದರೆ, ಹಾಸನದಲ್ಲಿರುವ ನಿಮ್ಮ ಮನೆಯ ಮೇಲೆ … Read more

MLA ಎಲೆಕ್ಷನ್ ಬಳಿಕ ಕರಗಿತು ಮಧು ಬಂಗಾರಪ್ಪ ಆಸ್ತಿ ಮೌಲ್ಯ, ಹೆಚ್ಚಾಯ್ತು ಬ್ಯಾಂಕ್ ಸಾಲ, ಎಲ್ಲೆಲ್ಲಿದೆ ಗೊತ್ತಾ ಸೈಟು, ಜಮೀನು?

ಶಿವಮೊಗ್ಗ ಲೈವ್.ಕಾಂ | 04 ಏಪ್ರಿಲ್ 2019 ಮೈತ್ರಿಕೂಟದ ಅಭ್ಯರ್ಥಿ, ಮಾಜಿ ಶಾಸಕ ಮಧು ಬಂಗಾರಪ್ಪ ಕುಟುಂಬವು 61.58 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಯನು ಹೊಂದಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇದ್ದ 67 ಕೋಟಿ ರೂ. ಮೌಲ್ಯದ ಆಸ್ತಿಯಲ್ಲಿ 6 ಕೋಟಿ ರೂ. ಮೌಲ್ಯದ ಆಸ್ತಿ ಕರಗಿದೆ. ಇದರ ಜತೆಗೆ ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳಲ್ಲಿನ ಸಾಲದ ಮೊತ್ತ 15ರಿಂದ 17 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು ಕೆಎಸ್ಐಐಡಿಸಿಯಲ್ಲಿ 43.61 ಲಕ್ಷ  ರೂ. ಸಾಲದ … Read more

ಭದ್ರಾವತಿಯಲ್ಲಿ ಸಿಎಂ ಕಾರು ತಪಾಸಣೆ, ಶಿವಮೊಗ್ಗದಲ್ಲಿ ಡಿಕೆಶಿ ಹೆಲಿಕಾಪ್ಟರ್ ಪರಿಶೀಲನೆ, ಮೆರವಣಿಗೆಯಲ್ಲಿ ಏನೇನಾಯ್ತು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019 ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಗಣ್ಯಾತಿಗಣ್ಯರೇ ಈ ವೇಳೆ ಉಪಸ್ಥಿತರಿದ್ದರು. ಈ ವೇಳೆ ನಡೆದ ಕೆಲವು ಪ್ರಮುಖ ಸಂಗತಿಗಳು ಗಮನ ಸೆಳೆದವು. ಭದ್ರಾವತಿಯಲ್ಲಿ ಸಿಎಂ ಕಾರು ಚೆಕ್ಕಿಂಗ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳಗ್ಗೆ ಹಾಸನದಲ್ಲಿ ಪ್ರಚಾರ ನಡೆಸಿ, ಶಿವಮೊಗ್ಗಕ್ಕೆ ಬರುತ್ತಿದ್ದರು. ಭದ್ರಾವತಿ ಕಾರೇಹಳ್ಳಿ ಚೆಕ್’ಪೋಸ್ಟ್’ನಲ್ಲಿ ಸಿಎಂ ಕಾರು ತಡೆದ ಚುನಾವಣಾ ಸಿಬ್ಬಂದಿ, ಅವರ ಕಾರು ತಪಾಸಣೆ ನಡೆಸಿದರು. ಡಿಕೆಶಿ ಹೆಲಿಕಾಪ್ಟರ್ ಚೆಕ್ … Read more

ಮೂಟೆಯಲ್ಲಿ ಹಣ ತಂದು ನಾಮಪತ್ರ ಸಲ್ಲಿಸಿದ ಸ್ವತಂತ್ರ ಅಭ್ಯರ್ಥಿ, ಝಣಝಣ ಕಂಡು ದಂಗಾದ ಚುನಾವಣಾ ಸಿಬ್ಬಂದಿ

ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019 ಹೆಲಿಕಾಪ್ಟರ್’ನಲ್ಲಿ ತೆರಳಿ ಶಿಕಾರಿಪುರ ವಿಧಾನಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ವಿನಯ್ ರಾಜವತ್, ಎತ್ತಿನಗಾಡಿಯಲ್ಲಿ ಬಂದು ಲೋಕಸಭೆ ಚುನಾವಣೆಗೆ ನಾಮಿನೇಷನ್ ಮಾಡಿದ್ದಾರೆ. ಅಷ್ಟೇ ಅಲ್ಲ, ಮೂಟೆಯಲ್ಲಿ ನಾಣ್ಯಗಳನ್ನು ತಂದು ಠೇವಣಿ ಹಣ ಕಟ್ಟಿದ್ದಾರೆ. ಇವತ್ತು ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ವಿದ್ಯಾರ್ಥಿ ಸಂಘಟನೆ ರಾಜ್ಯಾಧ್ಯಕ್ಷ ವಿನಯ್ ರಾಜವತ್ ನಾಮಪತ್ರ ಸಲ್ಲಿಸಿದ್ದಾರೆ. ಅಡಕೆ ಹಾಳೆ ಟೋಪಿ, ಮಲೆನಾಡು ಶೈಲಿಯ ಬಟ್ಟೆ ತೊಟ್ಟು, ಎತ್ತಿನಗಾಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ನಾಮಪತ್ರ ಸಲ್ಲಿಸಲು ತೆರಳುವಾಗ ಮೂಟೆ … Read more

ಯಡಿಯೂರಪ್ಪ ನನಗೆ ಮಾಟ ಮಾಡಿಸಿದ್ದರಿಂದ ಮಂಕಾಗಿದ್ದೆ, ಈಗ ಮಾಟಕ್ಕೆ ಪ್ರತಿತಂತ್ರ ಮಾಡಿಸಿಕೊಂಡಿದ್ದೇನೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019 ಬಿ.ಎಸ್.ಯಡಿಯೂರಪ್ಪ ತಮಗೆ ಮಾಟ ಮಾಡಿಸಿದ್ದಾರೆ. ಹಾಗಾಗಿ ನಾನು ಸ್ವಲ್ಪ ಮಂಕಾಗಿದ್ದೇನೆ ಅಂತಾ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ತಾವು ಕಳೆದ ಕೆಲವು ದಿನಗಳಿಂದ ಮಂಕಾಗಿದ್ದು ನಿಜ. ಇದಕ್ಕೆ ಬಿ.ಎಸ್.ಯಡಿಯೂರಪ್ಪ ಕಾರಣ. ಅವರು ತಮ್ಮ ಮೇಲೆ ಮಾಟ ಮಾಡಿಸಿದ್ದಾರೆ. ಆದರೆ ತಾವೀಗ ಆ ಮಾಟಕ್ಕೆ ಪ್ರತಿತಂತ್ರ ರೂಪಿಸಿದ್ದು, ಇನ್ಯಾವ ಮಾಟಕ್ಕೂ ಹೆದರುವುದಿಲ್ಲ ಎಂದು ತಮ್ಮ ಕೈಯಲ್ಲಿ ಧರಿಸಿದ ಬಂಗಾರದ ವಾಚನ್ನು ಪತ್ರಕರ್ತರಿಗೆ ತೋರಿಸಿ … Read more

ನಾಮಪತ್ರ ಸಲ್ಲಿಸಿದರು ಉಪೇಂದ್ರ ನೇತೃತ್ವದ ಪಕ್ಷದ ಅಭ್ಯರ್ಥಿ, 17 ಸಾವಿರ ವೋಟ್ ಪಡೆದಿದ್ದ ಶಶಿಕುಮಾರ್ ಕೂಡ ಮತ್ತೆ ಕಣಕ್ಕೆ

ಶಿವಮೊಗ್ಗ ಲೈವ್.ಕಾಂ | 02 ಏಪ್ರಿಲ್ 2019 ಉಪ ಚುನಾವಣೆಯಲ್ಲಿ ಅಚ್ಚರಿ ಅನಿಸುವಷ್ಟು ಮತ ಪಡೆದಿದ್ದ ಶಶಿಕುಮಾರ್ ಮತ್ತೆ ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ ರಿಯಲ್ ಸ್ಟಾರ್ ಉಪೇಂದ್ರ ಅವರ ಪಕ್ಷದಿಂದಲೂ ನಾಮಪತ್ರ ಸಲ್ಲಿಸಿದ್ದಾರೆ ಅಭ್ಯರ್ಥಿ. ಒಂದಲ್ಲ ಒಂದಿನ ನಾನು ಎಂಪಿ ಆಗ್ತೀನಿ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಭದ್ರಾವತಿಯ ಶಶಿಕುಮಾರ್ ಎಸ್.ಗೌಡ, ಮತ್ತೊಮ್ಮೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಶಿಕುಮಾರ್, ಒಂದಲ್ಲ ಒಂದು ದಿನ ಶಿವಮೊಗ್ಗ ಕ್ಷೇತ್ರದ ಸಂಸದನಾಗುತ್ತೇನೆ ಅನ್ನುವ ವಿಶ್ವಾಸವಿದೆ ಎಂದರು. ಈಗಾಗಲೇ … Read more

ಚುನಾವಣೆ ಹೊಸ್ತಿಲಲ್ಲಿ ಶಿವಮೊಗ್ಗ ಜೆಡಿಎಸ್’ಗೆ ಶಾಕ್, ತೀರ್ಥಹಳ್ಳಿಯಲ್ಲಿ ಭುಗಿಲೆದ್ದ ಭಿನ್ನಮತ, ರಾಜೀನಾಮೆ

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | 02 ಏಪ್ರಿಲ್ 2019 ಚುನಾವಣೆ ಹೊಸ್ತಿಲಲ್ಲೇ ಶಿವಮೊಗ್ಗ ಜೆಡಿಎಸ್’ಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ತೀರ್ಥಹಳ್ಳಿ ಜೆಡಿಎಸ್’ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ತಾಲೂಕು ಅಧ್ಯಕ್ಷರೇ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಚುನಾವಣೆಯಲ್ಲಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸದೆ ತಟಸ್ಥವಾಗಿ ಉಳಿಯುವುದಾಗಿ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯ ಮಾತನಾಡಿದ ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷ ಮದನ್, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು. ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ ಮದನ್, … Read more