ರಾಘವೇಂದ್ರ, ಮಧು ವಿರುದ್ಧ ಸ್ಪರ್ಧೆಗೆ ಶಿವಮೊಗ್ಗದಲ್ಲಿ ಐದು ಜನರಿಂದ ನಾಮಪತ್ರ, ಯಾರೆಲ್ಲ ಕಣಕ್ಕಿಳಿದಿದ್ದಾರೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 01 ಏಪ್ರಿಲ್ 2019 ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮೈತ್ರಿ ಪಕ್ಷಗಳ ಕ್ಯಾಂಡಿಡೇಟ್ ಮಧು ಬಂಗಾರಪ್ಪ ನಡುವಿನ ಟೈಟ್ ಫೈಟ್’ನ ನಡುವೆ, ಪಕ್ಷೇತರ ಅಭ್ಯರ್ಥಿಗಳ ಅಬ್ಬರ ಹೆಚ್ಚಾಗಿದೆ. ಈವರೆಗೂ ಐವರು ಅಭ್ಯರ್ಥಿಗಳು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು, ನಾಮಪತ್ರ ಸಲ್ಲಿಸಿದ್ದಾರೆ. ಯಾರೆಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಶಶಿಕುಮಾರ್ ಗೌಡ | ಭದ್ರಾವತಿಯ ಶಶಿಕುಮಾರ್ ಎಸ್.ಗೌಡ, ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಿ.ವೈ.ರಾಘವೇಂದ್ರ ಮತ್ತು ಮಧು ಬಂಗಾರಪ್ಪ ವಿರುದ್ಧ ಸ್ಪರ್ಧಿಸಿ 17 ಸಾವಿರ ಮತಗಳನ್ನು ಪಡೆದಿದ್ದರು. ಈ … Read more

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಟಿಎಂ ಮೆಷಿನ್ ಒಡೆದು ಹಣ ದೋಚಲು ಯತ್ನ

ಶಿವಮೊಗ್ಗ ಲೈವ್.ಕಾಂ | 01 ಏಪ್ರಿಲ್ 2019 ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಟಿಎಂ ದೋಚಲು ವಿಫಲ ಯತ್ನ ನಡೆದಿದೆ. ಎಟಿಎಂ ಯಂತ್ರವನ್ನು ಹಾನಿಗೊಳಿಸಿರುವ ಕಳ್ಳರು, ತಮ್ಮ ಪ್ರಯತ್ನ ಕೈಗೊಡದೆ ಬರಿಗೈಯಲ್ಲಿ ತೆರಳಿದ್ದಾರೆ. ಹೊಸ ಸಿದ್ದಾಪುರ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಕಳ್ಳರು ನುಗ್ಗಿದ್ದಾರೆ. ಎಟಿಎಂ ಮೆಷಿನ್ ಒಡೆದು, ಹಣ ದೋಚಲು ಯತ್ನಿಸಿದ್ದಾರೆ. ಇದರಿಂದ ಎಟಿಎಂ ಮೆಷಿನ್’ಗೆ ಹಾನಿಯಾಗಿದೆ. ಆದರೆ ಕಳ್ಳರಿಗೆ ಹಣ ದೋಚಲು ಸಾದ್ಯವಾಗಿಲ್ಲ. ಹಾಗಾಗಿ ಬರಿಗೈಯಲ್ಲಿ ತೆರಳಿದ್ದಾರೆ. ನ್ಯೂಟೌನ್ ಪೊಲೀಸ್ … Read more

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತುತ್ತಿದ್ದಾರೆ ಅಭ್ಯರ್ಥಿಗಳು, ಪ್ರಚಾರದಲ್ಲಿ ಮುಂದಿರೋರು ಯಾರು?

ಶಿವಮೊಗ್ಗ ಲೈವ್.ಕಾಂ | 01 ಏಪ್ರಿಲ್ 2019 ಲೋಕಸಭೆ ಚುನಾವಣೆಯ ಮತದಾನಕ್ಕೆ ಇನ್ನು 22 ದಿನಗಳಷ್ಟೇ ಬಾಕಿ ಇದೆ. ಮತದಾರರನ್ನು ಸೆಳೆಯಲು ಬಿಜೆಪಿ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಉಪ ಚುನಾವಣೆಯಷ್ಟೇ ಟಫ್ ಕಾಂಪಿಟೇಷನ್ ಇರುವುದರಿಂದ, ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿ ಮತಯಾಚನೆ ಮಾಡುತ್ತಿದ್ದಾರೆ. ಕೋರ್ಟು, ಕಚೇರಿ, ಬೆಂಗಳೂರು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಈ ಬಾರಿಯ ಚುನಾವಣೆ ಅತ್ಯಂತ ಪ್ರತಿಷ್ಠೆಯದ್ದಾಗಿದೆ. ಉಪ ಚುನಾವಣೆಯಲ್ಲಿ ಕಡಿಮೆಯಾಗಿದ್ದ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳಬೇಕು ಅನ್ನುವ ಛಲದೊಂದಿಗೆ … Read more

ಸಾಗರದ ಸಿಗಂದೂರು ರಸ್ತೆಯಲ್ಲಿ ಕಾಡುಕೋಣಗಳು ಪ್ರತ್ಯಕ್ಷ, ವಿಡಿಯೋ ವೈರಲ್

ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019 ಸಾಗರ ಪಟ್ಟಣದಲ್ಲಿ ಕಾಡುಕೋಣಗಳು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಎರಡು ಕಾಡುಕೋಣಗಳು ರಾಜಾರೋಷವಾಗಿ ರಸ್ತೆಯಲ್ಲಿ ಸಾಗುತ್ತಿರುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಗುರುವಾರ ಮಧ್ಯರಾತ್ರಿ ಸಾಗರದ ಎಸ್.ಎನ್.ನಗರದಲ್ಲಿ ಎರಡು ಕಾಡು ಕೋಣಗಳು ಪ್ರತ್ಯಕ್ಷವಾಗಿವೆ. ಸಾಗರ ಸಿಗಂದೂರು ರಸ್ತೆಯಲ್ಲಿ ಹೋಗುತ್ತಿದ್ದ ಕಾಡುಕೋಣಗಳನ್ನು, ರಸ್ತೆಯಲ್ಲಿ ಸಾಗುತ್ತಿದ್ದ ಲಾರಿ, ಕಾರಿನಲ್ಲಿ ತೆರಳುತ್ತಿದ್ದವರು ಗಮನಿಸಿ, ವಾಹನಗಳನ್ನು ಸೈಡಿಗೆ ನಿಲ್ಲಿಸಿದ್ದಾರೆ. ಕಾಡುಕೋಣಗಳ ವಿಚಾರ ತಿಳಿಯದ ಪೊಲೀಸರು, ಬೈಕಿನಲ್ಲಿ ಅವುಗಳ ಬಳಿಗೆ ಹೋಗಿ, ಬೆದರಿ ಹಿಂತಿರುಗುವ ದೃಶ್ಯ, … Read more

ಶಿವಮೊಗ್ಗದಲ್ಲಿ ಬಿಜೆಪಿ ಸಮಾವೇಶಕ್ಕೆ ಜನರನ್ನು ಕರೆತಂದಿದ್ದ ಬಸ್ಸುಗಳು ಸೀಜ್, ಉಚಿತವಾಗಿ ಊಟ ಹಂಚುತ್ತಿದ್ದ ವಾಹನ ವಶಕ್ಕೆ

shivamogga graphics map

ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019 ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ ಮತ್ತು ಸಮಾವೇಶದ ಸಂದರ್ಭ, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆ ಎರಡು ಬಸ್ ಸೇರಿ ಮೂರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ, ಶಿವಮೊಗ್ಗ ಲೈವ್.ಕಾಂಗೆ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್, ಎನ್ಇಎಸ್ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ, ಬಿಜೆಪಿ ಧ್ವಜ ಮತ್ತು ಬ್ಯಾನರ್ ಹಾಕಿಕೊಂಡು ಖಾಸಗಿ ಬಸ್’ಗಳಲ್ಲಿ ಜನರನ್ನು ಕರೆತರಲಾಗುತ್ತಿತ್ತು. ಈ ಸಂಬಂಧ ಎರಡು ಬಸ್’ಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ … Read more

ಭದ್ರಾವತಿ ಮೆಸ್ಕಾಂಗೆ ಬಿಜೆಪಿ ಕಾರ್ಯಕರ್ತ ಅಂತಾ ಪತ್ರ, ಜ.30ರಂದು ಬಾಂಬ್ ಇಡ್ತೀವಿ ಅಂತಾ ಬೆದರಿಕೆ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | 29 ಮಾರ್ಚ್ 2019 ಜನವರಿ 30ರಂದು ಟಿವಿಯಲ್ಲಿ ಯಶ್ ಅಭಿನಯನದ ಕೆಜಿಎಫ್ ಚಲನಚಿತ್ರ ಪ್ರಸಾರವಾಗುತ್ತಿದೆ. ಈ ವೇಳೆ ರಾಜಕೀಯ ಕುಮ್ಮಕ್ಕಿನಿಂದ ಕರೆಂಟ್ ತೆಗೆದರೆ ನಿಮ್ಮ ಕಚೇರಿಗೆ ಬೆಂಕಿ ಹಾಕುತ್ತೇವೆ. ನಿಮ್ಮ ಜೀವ ಹೋಗುತ್ತದೆ ಎಂದು ಪುಡಾರಿಗಳು ಕೆಇಬಿ ಹಾಗೂ ಮೆಸ್ಕಾಂ ಕಚೇರಿಗೆ ಬೆದರಿಕೆ ಪತ್ರ ಬರೆದಿದ್ದಾರೆ. ಭದ್ರಾವತಿಯ ಕೆಇಬಿ ಕಚೇರಿಗೆ ಅಂಚೆ ಪತ್ರ ಬರೆಯಲಾಗಿದ್ದು, ಚಲನಚಿತ್ರ ಪ್ರಸಾರವಾಗುವ ಸಮಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅಪ್ಪಾಜಿ ಕುಮ್ಮಕ್ಕಿನಿಂದ ಕರೆಂಟ್ ತೆಗೆದ್ರೆ ನಿಮ್ಮ ಆಫೀಸ್’ಗೆ ಬಾಂಬ್ ಫಿಕ್ಸ್ ಮಾಡ್ತೀವಿ … Read more

ನೀತಿ ಸಂಹಿತೆ ಉಲ್ಲಂಘನೆ ಆರೋಪ, ಪ್ರಧಾನಿ ಮೋದಿ ವಿರುದ್ಧ ಶಿವಮೊಗ್ಗದಲ್ಲಿ ಕಂಪ್ಲೇಂಟ್

ಶಿವಮೊಗ್ಗ ಲೈವ್.ಕಾಂ | 28 ಮಾರ್ಚ್ 2019 ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಶಿವಮೊಗ್ಗದಲ್ಲಿ ದೂರು ನೀಡಲಾಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಕಂಪ್ಲೇಂಟ್ ನೀಡಿದ್ದಾರೆ. ಉಪಗ್ರಹ ನಿಗ್ರಹ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ ಕುರಿತು, ಪ್ರಧಾನಿ ನರೇಂದ್ರ ಮೋದಿ ಅವರು, ದೇಶವನ್ನು ಉದ್ದೇಶಿಸಿ ಮಾತನಾಡಿದರು. ತಾವು ಅಧಿಕಾರಕ್ಕೆ ಬಂದ ಬಳಿಕ, ಇಂತಹ ಕೆಲಸಗಳಾಗುತ್ತಿದೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಪ್ರಕರಣದ ದಾಖಲಿಸುವಂತೆ, ಚುನಾವಣಾಧಿಕಾರಿಗೆ … Read more

ಗರ್ಭಗುಡಿಯಲ್ಲಿ ಜಾರಿಬಿತ್ತು ನಾಮಪತ್ರದ ಫೈಲ್, ಹಾರಲೇ ಇಲ್ಲ ಯಡಿಯೂರಪ್ಪಗೆ ಬುಕ್ ಮಾಡಿದ್ದ ಹೆಲಿಕಾಪ್ಟರ್

ಶಿವಮೊಗ್ಗ ಲೈವ್.ಕಾಂ | 28 ಮಾರ್ಚ್ 2019 ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ನಾಮಪತ್ರ ಇದ್ದ ಫೈಲ್, ದೇವಸ್ಥಾನದ ಗರ್ಭಗುಡಿಯಲ್ಲಿ ಜಾರಿಬಿತ್ತು. ಇದರಿಂದ ಕೆಲಕ್ಷಣ ರಾಘವೇಂದ್ರ ಮತ್ತವರ ಕುಟುಂಬ ವಿಚಲಿತರಾದ ಘಟನೆ ನಡೆಯಿತು. ನಾಮಪತ್ರ ಸಲ್ಲಿಸುವ ಹಿನ್ನೆಲೆ, ಬೆಳಗ್ಗೆಯಿಂದಲೇ ರಾಘವೇಂದ್ರ, ಕುಟುಂಬ ಸಹಿತವಾಗಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದ ರಾಘವೇಂದ್ರ, ದೇವರ ಆಶೀರ್ವಾದ ಬೇಡಿದರು. ನಂತರ ಶಿವಮೊಗ್ಗದ ರವೀಂದ್ರನಗರ ಗಣಪತಿ ದೇವಸ್ಥಾನಕ್ಕೆ ಕುಟುಂಬ ಸಹಿತ ಭೇಟಿ ನೀಡಿದ್ದರು. ಈ ವೇಳೆ, ನಾಮಪತ್ರದ … Read more

ಕುಂತಲ್ಲಿ, ನಿಂತಲ್ಲಿ ಹಣ ತಂದೆ ಅಂತಿದಾರೆ, ಪಾದಯಾತ್ರೆ ಮಾಡಿ ಸುಮ್ಮನೆ ಕೂತರೆ ಆಗಲ್ಲ, ಮಧು ವಿರುದ್ಧ ರಾಘವೇಂದ್ರ ಟಾಂಗ್

ಶಿವಮೊಗ್ಗ ಲೈವ್.ಕಾಂ | 23 ಮಾರ್ಚ್ 2019 ಪಾದಯಾತ್ರೆ ಮಾಡಿದಾಕ್ಷಣ ಜವಾಬ್ದಾರಿ ಮುಗಿಯುವುದಿಲ್ಲ. ಪಟ್ಟು ಹಿಡಿದು ಕೆಲಸ ಮಾಡಿಸಬೇಕು ಅಂತಾ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಶಿವಮೊಗ್ಗ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಟೀಕಿಸಿದ್ದಾರೆ. ಶಿವಮೊಗ್ಗ ಪ್ರೆಸ್‌ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ, ಅಭ್ಯರ್ಥಿಯಾದ ಬಳಿಕ ಕುಂತಲ್ಲಿ, ನಿಂತಲ್ಲಿ ನೀರಾವರಿ ಯೋಜನೆಗೆ ಹಣ ತಂದೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಪಾದಯಾತ್ರೆ ಮಾಡಿ ಸುಮ್ಮನೆ ಕುಳಿತರೆ ಸಾಲದು ಅಂದರು.‌ ಸರ್ಕಾರದ ಪತ್ರದಲ್ಲೇ‌ ನಮ್ಮನ್ನು … Read more

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್, ಶಿವಮೊಗ್ಗ ಕ್ಷೇತ್ರಕ್ಕೆ ಕ್ಯಾಂಡಿಡೇಟ್ ಘೋಷಣೆ

ಶಿವಮೊಗ್ಗ ಲೈವ್.ಕಾಂ | 21 ಮಾರ್ಚ್ 2019 ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಬಿ.ವೈ.ರಾಘವೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ, ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ರುದ್ರೇಗೌಡ, ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ, ಡಿ.ಎಸ್.ಅರುಣ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು. ಆಕಾಂಕ್ಷಿಗಳೇ ಇರಲಿಲ್ಲ … Read more