ಗೋಪಾಳದಲ್ಲಿ ಕಾರ್ಮಿಕನ ಮರ್ಮಾಂಗಕ್ಕೆ ಗಂಭೀರ ಪೆಟ್ಟು, ಆಗಿದ್ದೇನು?

Shimoga-News-update

ಶಿವಮೊಗ್ಗ: ಗೋಪಾಳದ ಪ್ರೆಸ್‌ ಕಾಲೋನಿಯಲ್ಲಿ ಮರ ಕತ್ತರಿಸುವ ಕಾಮಗಾರಿ ವೇಳೆ ಅವಘಡ ಉಂಟಾಗಿ ಕಾರ್ಮಿಕನ ಮರ್ಮಾಂಗಕ್ಕೆ ಗಂಭೀರ ಗಾಯವಾಗಿದೆ. ಘಟನೆ ಸಂಬಂಧ ಮೇಸ್ತ್ರಿ ಮತ್ತು ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಮಿಕ ಹನುಮನಂತಪ್ಪ ಎಂಬುವವರು ಗಾಯಗೊಂಡಿದ್ದಾರೆ. ಗೋಪಾಳದಲ್ಲಿರುವ ಸುರೇಶ್ ಎಂಬುವವರ ಮನೆ ಬಳಿ ಮರದ ಬುಡವನ್ನು ಗ್ರಾನೈಟ್ ಕಟ್ ಮಾಡುವ ಮಿಷನ್‌ನಿಂದ ಕತ್ತರಿಸುವ ಕೆಲಸ ಮಾಡಿಸಲಾಯಿತು. ಮಿಷನ್ ನಿಯಂತ್ರಣ ತಪ್ಪಿ ಹಿಂದಕ್ಕೆ ಬಂದು ಹನುಮಂತಪ್ಪ ಅವರ ಮರ್ಮಾಂಗಕ್ಕೆ ಬಡಿದಿದೆ ಎಂದು ಆರೋಪಿಸಲಾಗಿದೆ. ಕೂಡಲೆ ಅವರನ್ನು ಮೆಗ್ಗಾನ್‌ … Read more

ಕರೆಂಟ್‌ ಶಾಕ್‌, ಅಡಿಕೆ ಗೊನೆಗಾರ ಸಾವು, ಹೇಗಾಯ್ತು ಘಟನೆ?

Areca-Farm-Adike-tota-in-Shimoga

ತೀರ್ಥಹಳ್ಳಿ: ಅಡಿಕೆ (Adike) ಗೊನೆ ಕೀಳುವಾಗ ದೋಟಿ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಕಾರ್ಮಿಕ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕು ಬಸವಾನಿ‌ ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ ಶನಿವಾರ ಸಂಜೆ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ದೋರಗಲ್ಲು ಗ್ರಾಮದ ಸತೀಶ್ (50) ಮೃತ ವ್ಯಕ್ತಿ. ಇವರು ಈ ಭಾಗದಲ್ಲಿ ಹಲವು ವರ್ಷಗಳಿಂದ ಗೊನೆಗಾರರಾಗಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀಪುರದ ರೈತ ಸುಂದರೇಶ್ ಅವರ ಅಡಿಕೆ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ … Read more

ಸವಳಂಗ ರಸ್ತೆ ರೈಲ್ವೆ ಸೇತುವೆ ಕಾಮಗಾರಿ ಸ್ಥಳದಲ್ಲಿ ಅವಘಡ, ಮಣ್ಣು ಕುಸಿದು ಕಾರ್ಮಿಕ ಸಾವು

251123-Worker-succumbed-at-Savalanga-Road-in-Shimoga.webp

SHIVAMOGGA LIVE NEWS | 25 NOVEMBER 2023 SHIMOGA : ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಗುಂಡಿಗೆ ಬಿದ್ದ ಕಾರ್ಮಿಕನ ಮೇಲೆ ಮಣ್ಣು ಕುಸಿದು ಸಾವನ್ನಪ್ಪಿದ್ದಾನೆ. ಮಂಡೇನಕೊಪ್ಪದ ಸತೀಶ್‌ ನಾಯ್ಕ್‌ (27) ಮೃತರು. ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಪೈಪ್‌ಲೈನ್‌ ಜೋಡಣೆ ಕಾರ್ಯಕ್ಕೆ ಜೆಸಿಬಿಯಿಂದ ಗುಂಡಿ ತೆಗೆಯಲಾಗಿತ್ತು. ಕಾಲು ಜಾರಿ ಸತೀಶ್‌ ಗುಂಡಿಗೆ ಬಿದ್ದಿದ್ದು ಕೂಡಲೆ ಮಣ್ಣು ಕುಸಿದಿದೆ. ಉಸಿರುಗಟ್ಟಿ ಸತೀಶ್‌ ಮೃತಪಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜೆಸಿಬಿ ಮೂಲಕ ಮಣ್ಣು ತೆಗೆದು ಸತೀಶ್‌ನ … Read more

ಚಂದ್ರಗುತ್ತಿ ದೇವಸ್ಥಾನದ ದಿನಗೂಲಿ ನೌಕರ ನೇಣು ಬಿಗಿದು ಆತ್ಮಹತ್ಯೆ

CHANDRAGUTTI SORABA NEWS 1

SHIVAMOGGA LIVE NEWS | 26 AUGUST 2023 SORABA : ಚಂದ್ರಗುತ್ತಿಯಲ್ಲಿ (Chandragutti)ಶ್ರೀ ರೇಣುಕಾಂಬ ದೇವಸ್ಥಾನದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ. ಚಂದ್ರಗುತ್ತಿ ಗ್ರಾಮದ ಗಣಪತಿ ತಾವರೆಹಳ್ಳಿ (40) ಮೃತ ನೌಕರ. ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ‌ (Renukamba Temple) ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಗಣಪತಿ ಅವರು ಕೆಲ‌ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ಮನೆಯಲ್ಲಿ ಯಾರೂ‌ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು … Read more

ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಹೊರ ಬಂದ ಕಾಂಗ್ರೆಸ್‌ ಹಿರಿಯ ನಾಯಕಿಗೆ ಕಾದಿತ್ತು ಶಾಕ್‌

Crime-News-General-Image

SHIVAMOGGA LIVE NEWS | 19 MAY 2023 SHIMOGA : ಮನೆ ಒಳಗಡೆ ಇಟ್ಟಿದ್ದ ವ್ಯಾನಿಟಿ ಬ್ಯಾಗ್‌ (Vanity Bag), ಚಿನ್ನಾಭರಣ, ನಗದು ಕಳ್ಳತನವಾಗಿದೆ. ಪಾರಿವಾಳ ಮಾರಾಟಕ್ಕೆ ಬಂದವರೆ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಶಿವಮೊಗ್ಗದ ಕಾಂಗ್ರೆಸ್‌ ನಾಯಕಿಯೊಬ್ಬರು ದೂರು ನೀಡಿದ್ದಾರೆ. ಕಾಂಗ್ರೆಸ್‌ ನಾಯಕಿ ಫಾತೀಮಾ ಬೇಗಂ ಅವರ ಬುದ್ದಾ ನಗರದ ಮನೆಯಲ್ಲಿ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ. ಚುನಾವಣೆ ಹಿನ್ನೆಲೆ ಫಾತೀಮಾ ಬೇಗಂ ಅವರು ಪ್ರಚಾರ ಕಾರ್ಯದಲ್ಲಿ ತೊಡಿಗಿಸಿಕೊಂಡಿದ್ದರು. ಏ.29ರಂದು … Read more

ಬಜರಂಗದಳ ಕಾರ್ಯಕರ್ತನ ಮೇಲೆ ದಾಳಿ ಯತ್ನ, ಸಾಗರ ಪಟ್ಟಣ ಬಂದ್, ಹೇಗಿತ್ತು? ಏನೇನೆಲ್ಲ ಆಯ್ತು?

Sagara-Bandh-Bajarangadal-Protest-March-in-the-city.

SHIVAMOGGA LIVE NEWS |10 JANUARY 2023 ಸಾಗರ : ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕರೆ ನೀಡಿದ್ದ ಸಾಗರ ಬಂದ್ (bandh) ಬಹುತೇಕ ಯಶಸ್ವಿಯಾಗಿದೆ. ನಗರದ ಅಂಗಡಿ ಮುಂಗಟ್ಟು ಬಂದ್ ಆಗಿದ್ದವು. ಬಸ್ ನಿಲ್ದಾಣಗಳಲ್ಲಿ ಜನರಿಲ್ಲದೆ ಬಿಕೋ ಅನ್ನುತ್ತಿತ್ತು. ವಾಹನ ಸಂಚಾರವು ವಿರಳವಾಗಿತ್ತು. ಬಜರಂಗದಳ ಸಹ ಸಂಚಾಲಕ ಸುನಿಲ್ ಮೇಲೆ ಸಮೀರ್ ಎಂಬಾತ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ್ದ. ಈ ಘಟನೆ ಬೆನ್ನಿಗೆ ಆರೋಪಿಗಳನ್ನು ಬಂಧಿಸಬೇಕು, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬಜರಂಗದಳ, ವಿಶ್ವ ಹಿಂದೂ … Read more

ಬಜರಂಗದಳ ಸಂಚಾಲಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಯತ್ನ, ನಾಳೆ ಸಾಗರ ಬಂದ್, ಈವರೆಗೂ ಏನಾಯ್ತು? ಇಲ್ಲಿದೆ ಡಿಟೇಲ್ಸ್

Attack-Attempt-On-Bajarangadal-worker-sunil

SHIVAMOGGA LIVE NEWS | 9 JANUARY 2023 ಸಾಗರ : ಬಜರಂಗದಳ ಸಂಘಟನೆಯ ಸಹ ಸಂಚಾಲಕ ಸುನಿಲ್ ಎಂಬುವವರ ಮೇಲೆ ದುಷ್ಕರ್ಮಿಯೊಬ್ಬ ತಲ್ವಾರ್ ನಿಂದ ಹಲ್ಲೆಗೆ (Attack) ಯತ್ನಿಸಿದ್ದಾನೆ. ಕೂದಲೆಳೆ ಅಂತರದಿಂದ ಸುನಿಲ್ ಬಚಾವಾಗಿದ್ದಾರೆ. ಘಟನೆ ಹಿನ್ನೆಲೆ ಸಾಗರ ಪಟ್ಟಣದಲ್ಲಿ ಅರ್ಧ ದಿನ ಬಂದ್ ಗೆ ಕರೆ ನೀಡಲಾಗಿದೆ. ಸ್ವಲ್ಪದರಲ್ಲೆ ಪಾರಾದ ಸುನಿಲ್ ಬಜರಂಗದಳ ನಗರ ಸಹ ಸಂಚಾಲಕ ಸುನಿಲ್ ಇವತ್ತು ಬೆಳಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ನಗರದ ಬಿ.ಹೆಚ್.ರಸ್ತೆ ಆಭರಣ ಶೋ … Read more

ಶಿವಮೊಗ್ಗದಲ್ಲಿ ಬಿಜೆಪಿಯಿಂದ ರಸ್ತೆ ತಡೆ, ಪ್ರತಿಭಟನೆಯಲ್ಲಿ ಕಣ್ಣೀರಿಟ್ಟ ಕಾರ್ಪೊರೇಟರ್

BJP-Protest-in-Shimoga-againt-Praveen-Murder

SHIVAMOGGA LIVE NEWS | SHIMOGA | 27 ಜುಲೈ 2022 ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ (MURDER) ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಶಿವಪ್ಪನಾಯಕ ಪ್ರತಿಮೆ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಬಿ.ಹೆಚ್.ರಸ್ತೆಯಲ್ಲಿ ರಸ್ತೆ ತಡೆ ಮಾಡಿದರು. ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿದವರನ್ನು ಕೂಡಲೆ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾಣ್ಣೀರು ಹಾಕಿದ ಕಾರ್ಪೊರೇಟರ್ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಪೊರೇಟರ್ ಎಸ್.ಎನ್.ಚನ್ನಬಸಪ್ಪ … Read more

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಮಚ್ಚಿನಿಂದ ಹಲ್ಲೆ, ಕಾರಣವೇನು?

Attack-on-Bajarangadal-Worker-Kantharaju-in-Shimoga

SHIVAMOGGA LIVE NEWS | SHIMOGA | 12 ಜುಲೈ 2022 ಶಿವಮೊಗ್ಗದಲ್ಲಿ ಬಜರಂಗದಳ ( BAJARANGADAL ) ಕಾರ್ಯಕರ್ತನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ( ASSAULT ) ನಡೆಸಲಾಗಿದೆ. ಆತನನ್ನು ಮೆಗ್ಗಾನ್ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು, ಈ ಬೆಳವಣಿಗೆ ಹಿಂದೂ ( HINDU ) ಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬಜರಂಗದಳ ಕಾರ್ಯಕರ್ತ ಕಾಂತರಾಜು ಎಂಬಾತನ ಮೇಲೆ ಹಲ್ಲೆಯಾಗಿದೆ. ಶಿವಮೊಗ್ಗದ ರಾಜೀವ್ ಗಾಂಧಿ ಬಡಾವಣೆಯಲ್ಲಿ … Read more

‘ಹರ್ಷ ಹತ್ಯೆ ಆರೋಪಿಗಳನ್ನು ಜೈಲಿನಲ್ಲಿಡುವ ಬದಲು ಹೊರಗೆ ಬಿಡುವುದೆ ಒಳ್ಳೆಯದು’, ತಾಯಿಯ ಕಣ್ಣೀರು

Harsha-Murderers-Video-Call-From-parappana-Agrahara

SHIVAMOGGA LIVE NEWS | SHIMOGA | 5 ಜುಲೈ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ಆರೋಪಿಗಳಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾಥಿತ್ಯ ನೀಡಲಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ. ಜೈಲಿನಿಂದ ವಿಡಿಯೋ ಕಾಲ್ ಮಾಡಿ, ಆರೋಪಿಗಳು ತಮ್ಮ ಕುಟುಂಬದವರೊಂದಿಗೆ ಮಾತನಾಡಿದ ವಿಡಿಯೋಗಳು ವೈರಲ್ (VIRAL) ಆಗಿದೆ. ಹಿಂದೂ ಹರ್ಷ ಹತ್ಯೆ ಪ್ರಕರಣ ಸಂಬಂಧ ಬುದ್ಧನಗರದ ಮಹಮದ್ ಖಾಸೀಫ್ ಮತ್ತು ಆತನ 9 ಸಹಚರರನ್ನು ಬೆಂಗಳೂರಿನಲ್ಲಿ ಪರಪ್ಪನ ಅಗ್ರಹಾರದಲ್ಲಿ ಇಡಲಾಗಿದೆ. ಆರೋಪಿಗಳು ಮೊಬೈಲ್ … Read more