ಚೆಕ್‌ಪೋಸ್ಟ್‌ನಲ್ಲಿ ಕಾರು ತಪಾಸಣೆ ವೇಳೆ ಎರಡು ಕೋಟಿ ಪತ್ತೆ, ಹಣ ಸೀಜ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 21 ಮಾರ್ಚ್ 2019 ಚೆಕ್‌ಪೋಸ್ಟ್ ಒಂದರಲ್ಲಿ ಕಾರು ತಪಾಸಣೆ ವೇಳೆ ಎರಡು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ಪರಿಶೀಲನೆ ನಡೆಸಿದ ಅಧಿಕಾರಿಗಳು ಹಣವನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ. ಸಾಗರ ತಾಲೂಕಿನ ಅಮಟೆಕೊಪ್ಪ ಬಳಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಚೆಕ್‌‌ಪೋಸ್ಟ್‌ಗೆ ಬಂದ ಎರ್ಟಿಗಾ ಕಾರು ತಪಾಸಣೆ ನಡೆಸಿದಾಗ ಎರಡು ಕೋಟಿ ರೂ. ಹಣ ಪತ್ತೆಯಾಗಿದೆ. ಹಣ ಯಾರಿಗೆ ಸೇರಿದ್ದು? ಕಾರಿನಲ್ಲಿದ್ದ ಎರಡು ಕೋಟಿ ರೂ. ಹಣ … Read more

ಸ್ಮಶಾನದಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ನೇಹಿತರು

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 21 ಮಾರ್ಚ್ 2019 ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಸ್ನೇಹಿತರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರದ ಮಾರಿಗುಡ್ಡದ ಸ್ಮಶಾನದಲ್ಲಿ ಘಟನೆ ನಡೆದಿದೆ. ಶ್ರೀಕಾಂತ್ (29) ಮತ್ತು ಪ್ರಕಾಶ್ (30) ಮೃತರು. ಇಬ್ಬರೂ ಹೊಸನಗರದಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಇವರು ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ ಮೊಬೈಲ್ ನಂಬರ್ | 9964634494 ಈ ಮೇಲ್ | shivamoggalive@gmail.com

ಮಧು ಬಂಗಾರಪ್ಪ ಗೆಲ್ಲಿಸಲು ರಣತಂತ್ರ ರೆಡಿ, ಜೆಡಿಎಸ್ ಏನೆಲ್ಲ ಪ್ಲಾನ್ ಮಾಡಿಕೊಂಡಿದೆ? ಪ್ರಚಾರ ಹೇಗೆ ನಡೆಯುತ್ತೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 18 ಮಾರ್ಚ್ 2019 ಪ್ರಚಾರದ ಕಣಕ್ಕೆ ಲೇಟಾಗಿ ಎಂಟ್ರಿ ಕೊಡುತ್ತಿದ್ದರೂ, ಭರ್ಜರಿ ಕ್ಯಾಂಪೇನ್’ಗೆ ಮೈತ್ರಿ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಶತಾಯಗತಾಯ ಸೋಲಿಸಲೇಬೇಕು ಅಂತಾ ಪ್ಲಾನಿಂಗ್ ಮಾಡಿಕೊಳ್ಳಲಾಗಿದೆ. ಇನ್ನು, ಶಿವಮೊಗ್ಗ ಲೋಕಸಭೆ ಚುನಾವಣೆಯ ಉಸ್ತುವಾರಿಯನ್ನು ಕಾಂಗ್ರೆಸ್  ಪಕ್ಷದ ಚುನಾವಣಾ ಚಾಣಕ್ಯ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಲಾಗಿದೆ. ಏನೆಲ್ಲ ಪ್ಲಾನ್ ಮಾಡಲಾಗಿದೆ? ದೇವೇಗೌಡರಿಂದ ಮತಬೇಟೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಈಗಾಗಲೇ ಮಧು ಬಂಗಾರಪ್ಪ ಪರವಾಗಿ ಕ್ಯಾಂಪೇನ್ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರ ಜೊತೆಗೆ … Read more

ತೀರ್ಥಹಳ್ಳಿಯಲ್ಲಿ ಪ್ರಧಾನಿ ಮೋದಿ ವಿಚಾರಕ್ಕೆ ಕೈ ಕೈ ಮಿಲಾಯಿಸಿದ ಯುವಕರು, ಆಸ್ಪತ್ರೆಯಲ್ಲಿ ಅಡ್ಮಿಟ್

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | 18 ಮಾರ್ಚ್ 2019 ಪ್ರಧಾನಿ ನರೇಂದ್ರ ಮೋದಿ ಕುರಿತು ಚರ್ಚೆ ತಾರಕಕ್ಕೇರಿ, ಯುವಕರಿಬ್ಬರು ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಪರಸ್ಪರ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ತೀರ್ಥಹಳ್ಳಿಯಲ್ಲಿ ಘಟನೆ ನಡೆದಿದ್ದು, ಅಭಯ್ ಕಾಮತ್ ಮತ್ತು ರವೀಶ್ ಭಟ್ ನಡುವೆ ಗಲಾಟೆಯಾಗಿದೆ. ಮೋದಿ ವಿಚಾರದಲ್ಲಿ ಜಗಳವೇಕೆ? ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚೌಕಿದಾರ್ ಕ್ಯಾಂಪೇನ್ ಕುರಿತು ಅಂಗಡಿಯೊಂದರಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಅಭಯ್ ಕಾಮತ್ ಮತ್ತು … Read more

ಟ್ರೋಲ್ ಮಾಡಿದವರಿಗೆ ದೇವೇಗೌಡ ತಿರುಗೇಟು, ಚುನಾವಣೆ ಸ್ಪರ್ಧೆ ಕುರಿತು ಶಿವಮೊಗ್ಗದಲ್ಲಿ ಏನಂದ್ರು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 17 ಮಾರ್ಚ್ 2019 ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವವರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವ್ಯಂಗ್ಯ ಮಾಡುವುದು ಹೆಚ್ಚು ದಿನ ಉಳಿಯಲ್ಲ ಎಂದಿದ್ದಾರೆ. ಇನ್ನು ತಮ್ಮ ಸ್ಪರ್ಧೆ ಕುರಿತು ದೇವೇಗೌಡ ಹೇಳಿಕೆ ನೀಡಿದ್ದಾರೆ. ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ ಮೊಬೈಲ್ ನಂಬರ್ | 9964634494 ಈ ಮೇಲ್ | shivamoggalive@gmail.com

ಶಿವಮೊಗ್ಗಕ್ಕೆ ಬಂದರು ಮಾಜಿ ಪ್ರಧಾನಿ, ಮಧು ಬಂಗಾರಪ್ಪ ಪರವಾಗಿ ಪ್ರಚಾರ ಶುರು

ಶಿವಮೊಗ್ಗ ಲೈವ್.ಕಾಂ | 17 ಮಾರ್ಚ್ 2019 ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಕ್ಯಾಂಪೇನ್ ಮಾಡಲು, ಮಾಜಿ ಪ್ರಧಾಬಿ ಹೆಚ್.ಡಿ.ದೇವೇಗೌಡ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ದೇವೇಗೌಡ, ಹಾಸನ, ಮಂಡ್ಯದಲ್ಲಿ ಮೊಮ್ಮಕ್ಕಳನ್ನು ಗೆಲ್ಲಿಸಲು ಪ್ರಚಾರ ನಡೆಸುವಂತೆ ಮಧು ಬಂಗಾರಪ್ಪ ಪರವಾಗಿ ಶಿವಮೊಗ್ಗದಲ್ಲಿ ಪ್ರಚಾರ ಮಾಡುತ್ತೇನೆ. ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಶಿವಮೊಗ್ಗದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದರು. ದೇವೇಗೌಡರು ಹೇಳಿದ್ದೇನು? ವಿಡಿಯೋ ನೋಡಿ.

ಶಿವಮೊಗ್ಗದಲ್ಲಿ ಭರ್ಜರಿ ಕ್ಯಾಂಪೇನ್’ಗೆ ರೆಡಿಯಾದ ಜೆಡಿಎಸ್, ಮಧು ಬಂಗಾರಪ್ಪ ಎಂಟ್ರಿಗೆ ಮುಹೂರ್ತ ಫಿಕ್ಸ್

ಶಿವಮೊಗ್ಗ ಲೈವ್.ಕಾಂ | 16 ಮಾರ್ಚ್ 2019 ಭರ್ಜರಿ ಕ್ಯಾಂಪೇನ್‌ಗೆ ರೆಡಿಯಾದ ಜೆಡಿಎಸ್. ಮಧು ಬಂಗಾರಪ್ಪ ಎಂಟ್ರಿಗೆ ಮುಹೂರ್ತ ಫಿಕ್ಸ್. ಶಿವಮೊಗ್ಗದಲ್ಲಿ ಪ್ರಚಾರಕ್ಕೆ ಹಸಿರು ನಿಶಾನೆ ತೋರಿಸ್ತಾರೆ ಮಾಜಿ ಪಿಎಂ.  ಮಾರ್ಚ್ 17ರಿಂದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಕ್ಯಾಂಪೇನ್ ಶುರು ಮಾಡಲಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಲಗಾನ್ ಕಲ್ಯಾಣ ಮಂದಿರದಲ್ಲಿ ಪ್ರಮುಖರ ಸಭೆ ನಡೆಸಲಾಗುತ್ತದೆ. ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಪ್ರಚಾರ … Read more

ಸಿಸಿಟಿವಿಯಲ್ಲಿ ಸೆರೆಯಾಯ್ತು ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿ ನಡೆದ ದರೋಡೆ, ಮೂರು ಲಕ್ಷ ನಾಪತ್ತೆಯಾಗಿದ್ದು ಹೇಗೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 15 ಮಾರ್ಚ್ 2019 ಗಮನ ಬೇರೆಡೆ ಸೆಳೆದು ಹಾಲಿನ ವ್ಯಾಪಾರಿಯೊಬ್ಬರು ತಂದಿದ್ದ ಮೂರು ಲಕ್ಷ ರೂಪಾಯಿಯನ್ನು ದರೋಡೆ ಮಾಡಲಾಗಿದೆ. ಶಿವಮೊಗ್ಗ ಬಿ.ಹೆಚ್.ರಸ್ತೆಯಲ್ಲಿ ಘಟನೆ ನಡೆದಿದೆ. ಇನ್ನು, ಇಡೀ ಘಟನೆ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೆನ್ಷನ್ ಮೊಹಲ್ಲಾದ ಹಾಲಿನ ವ್ಯಾಪಾರಿ ಕುಮಾರ್, ಬಿ.ಹೆಚ್.ರಸ್ತೆಯಲ್ಲಿರುವ ಬ್ಯಾಂಕ್’ನಿಂದ ಮೂರು ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಹಿಂತಿರುಗುತ್ತಿದ್ದರು. ಈ ವೇಳೆ, ಬಿ.ಹೆಚ್.ರಸ್ತೆಯಲ್ಲಿ ದಿಢೀರ್ ಬಂದ ನಾಲ್ವರು, ಕುಮಾರ್ ಗಮನ ಬೇರೆಡೆ ಸೆಳೆದು ಮೂರು ಲಕ್ಷ ರೂ. ದರೋಡೆ … Read more

ಮುಂದುವರೆದ ಪೊಲೀಸ್ ರೇಡ್, ಹೊಸನಗರದಲ್ಲಿ 80 ಲೋಡ್ ಮರಳು ಸೀಜ್

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 9 ಮಾರ್ಚ್ 2019 ಹೊಸನಗರ ತಾಲೂಕಿನ ಹಲುಸಾಲೆ ಮಳವಳ್ಳಿ ಗ್ರಾಮದ ಬಳಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಂದಾಜು 2.56 ಲಕ್ಷ ವೌಲ್ಯದ ಮರಳನ್ನು ವಶಕ್ಕೆ ಪಡೆಯಲಾಗಿದೆ. ಹಲುಸಾಲೆ ಮಳವಳ್ಳಿ ಗ್ರಾಮದ ದಿನೇಶ್‌ಗೌಡ ಎಂಬುವವರು ಅಕ್ರಮವಾಗಿ ದಾಸ್ತಾನು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗ್ರಾಮದ ಶರಾವತಿ ಹಿನ್ನೀರಿಗೆ ಸೇರಿದ ನೀರಿಲ್ಲದ ಹಳ್ಳದಲ್ಲಿ  ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್, ಸಿಬ್ಬಂದಿ ಭೇಟಿ ನೀಡಿ … Read more

‘ಕೊನೆಗೂ ಸಿಗಂದೂರು ಸೇತುವೆ ನಿರ್ಮಾಣಕ್ಕಿದ್ದ ಅಡೆತಡೆಗಳು ದೂರ, 30 ತಿಂಗಳಲ್ಲಿ ರೆಡಿಯಾಗಲಿದೆ ಅತ್ಯಾಧುನಿಕ ಬ್ರಿಡ್ಜ್’

Siganduru Bridge Plan 1

ಶಿವಮೊಗ್ಗ ಲೈವ್.ಕಾಂ | 8 ಮಾರ್ಚ್ 2019 ಇನ್ನು 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು, ಸಿಗಂದೂರು ಸೇತುವೆ ಲೋಕಾರ್ಪಣೆಗೊಳ್ಳಲಿದೆ ಅಂತಾ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಗಂದೂರು ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಕಾಮಗಾರಿಯೂ ಶುರುವಾಗಲಿದೆ ಎಂದು ಸ್ಪಷ್ಟಪಡಿಸಿದರು. ಶರಾವತಿ ಹಿನ್ನೀರು ಭಾಗದ ಅಂಬರಗೋಡ್ಲು ಕಳಸವಳ್ಳಿ ನಡುವೆ ಸೇತುವೆ ನಿರ್ಮಾಣಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ಆನ್’ಲೈನ್’ನಲ್ಲಿ ಅಧಿಕೃತವಾಗಿ ಟೆಂಡರ್ ಕರೆಯಲಾಗಿದ್ದು, ಮಾರ್ಚ್ 22ರೊಳಗೆ ಅರ್ಜಿ ಸಲ್ಲಿಕೆಗೆ ಅವಕಾಸ ಕಲ್ಪಿಸಲಾಗಿದೆ ಎಂದರು. ಹತ್ತು ವರ್ಷ … Read more