BREAKING NEWS – ಶಿವಮೊಗ್ಗದಲ್ಲಿ ಆಪ್ತ ಸಹಾಯಕನ ಮನೆ ಮೇಲೆ ಲೋಕಾಯುಕ್ತ ದಾಳಿ

BREAKING-NEWS-ENGLISH

ಶಿವಮೊಗ್ಗ: ಲೋಕಾಯುಕ್ತ ಅಧಿಕಾರಿಗಳು ಶಿವಮೊಗ್ಗ ನಗರದಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್‌) ಡೀನ್‌ ಅವರ ಆಪ್ತ ಸಹಾಯಕ ಲಕ್ಷ್ಮೀಪತಿ ಎಂಬುವವರಿಗೆ ಸಂಬಂಧಿಸಿದ ನಾಲ್ಕು ಕಡೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಿಮ್ಸ್‌ ಕಾಲೇಜಿನ ಡೀನ್‌ ಡಾ. ವಿರುಪಾಕ್ಷಪ್ಪ ಅವರ ಆಪ್ತ ಸಹಾಯಕ ಲಕ್ಷ್ಮೀಪತಿ ಅವರಿಗೆ ಸೇರಿದ ಮನೆಗಳ ಮೇಲೆ ದಾಳಿಯಾಗಿದೆ. ಮೆಡಿಕಲ್‌ ಕಾಲೇಜು ಕ್ವಾರ್ಟರ್ಸ್‌, ಜೆ.ಹೆಚ್.ಪಟೇಲ್‌ ಬಡಾವಣೆಯಲ್ಲಿರುವ ಮನೆ, ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿರುವ ಮನೆ ಸೇರಿ ಒಟ್ಟು ನಾಲ್ಕುಕಡೆ ದಾಳಿಯಾಗಿದೆ … Read more

ಮಿನಿಸ್ಟರ್‌ ನೇತೃತ್ವದಲ್ಲಿ ಶಿವಮೊಗ್ಗದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ, ದಿನಾಂಕ ನಿಗದಿ

270925 Minister Madhu Bangarappa speaks to media in shimoga

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನ.28ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. ಅಕ್ಟೋಬರ್‌ ಅಂತ್ಯದವರೆಗೆ ಇಲಾಖೆ ಕಾರ್ಯಕ್ರಮಗಳು, ವಿವಿಧ ಯೋಜನೆಗಳಲ್ಲಿ ಸಾಧಿಸಿದ ಪ್ರಗತಿಯ ವರದಿಯನ್ನು ಅಧಿಕಾರಿಗಳು ಖುದ್ದು ಹಾಜರಾಗಬೇಕು ಎಂದು ತಿಳಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಹಂಪ್‌ಗಳ ಅವಾಂತರ, ಸಿಟ್ಟಾದ ಜನ, ಅಷ್ಟಕ್ಕು ಸಮಸ್ಯೆ ಏನು?

ಬಾಕಿ ಇರುವ 790 ಪ್ರಕರಣಗಳಿಗೆ ಶೇ.50ರಷ್ಟು ರಿಯಾಯಿತಿ, ಯಾವ್ಯಾವ ಕೇಸ್‌?

RTO-office-at-jayanagara-in-Shimoga

ಶಿವಮೊಗ್ಗ: ಸಾರಿಗೆ ಇಲಾಖೆಯಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಶೇಕಡ 50ರಷ್ಟು ದಂಡ ಪಾವತಿಸಿ ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ವಾಹನ ಮಾಲೀಕರು ತಮ್ಮ ವಾಹನದ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ದಂಡ ಮೊತ್ತದ ಅರ್ಧದಷ್ಟು ಪಾವತಿ ಮಾಡಬಹುದಾಗಿದೆ. 1990-91 ರಿಂದ 2019-20 ರೊಳಗೆ ಪ್ರಾದೇಶಿಕ ಸಾರಿಗೆ ಕಛೇರಿ (ಆರ್.ಟಿ.ಓ) ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳು ಮಾತ್ರ ಶೇಕಡಾ 50ರಷ್ಟು ದಂಡ ಪಾವತಿ ರಿಯಾಯಿತಿ ವ್ಯಾಪ್ತಿಗೆ ಒಳಪಡುತ್ತವೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ 790 ಪ್ರಕರಣಗಳು … Read more

ಶಿವಮೊಗ್ಗ ಸಿಟಿಯ ವಿವಿಧೆಡೆ 2‌ ದಿನ ಮಧ್ಯಾಹ್ನದವರೆಗೆ ವಿದ್ಯುತ್‌ ವ್ಯತ್ಯಯ, ಎಲ್ಲೆಲ್ಲಿ? ಇಲ್ಲಿದೆ ಬಡಾವಣೆಗಳ ಲಿಸ್ಟ್

POWER-CUT-UPDATE-NEWs ELECTRICITY

ಶಿವಮೊಗ್ಗ: ನಗರ ಉಪವಿಭಾಗ-1ರ ಘಟಕ-1ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ನ.25 ಮತ್ತು 26 ರಂದು ಬೆಳಗ್ಗೆ 10 ರಿಂದ ಮಧ್ಯಾಹ 2ರವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕುವೆಂಪು ರಸ್ತೆ, ಜಿಲ್ಲಾ ಪಂಚಾಯಿತಿ ಎದುರು, ನಂಜಪ್ಪ ಆಸ್ಪತ್ರೆ, ರಾಘವೇಂದ್ರ ಮಠ ರಸ್ತೆ, ದೈವಜ್ಞ ಸರ್ಕಲ್, ಶಿವಮೂರ್ತಿ ಸರ್ಕಲ್, ಮ್ಯಾಕ್ಸ್ ಆಸ್ಪತ್ರೆ, ಅಚ್ಯುತ್‌ರಾವ್ ಲೇಔಟ್, ವೆಂಕಟೇಶನಗರ, ಗಾಂಧಿನಗರ, ಜಯನಗರ, ಸವಳಂಗ ಮುಖ್ಯರಸ್ತೆ, ಚನ್ನಪ್ಪ ಲೇಔಟ್, ಮೆಟ್ರೋ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ … Read more

ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್‌, ಉಚಿತವಾಗಿ CCTV ಅಳವಡಿಕೆ, ಸರ್ವಿಸಿಂಗ್‌ ಶಿಬಿರ

Shimoga-News-update

ಶಿವಮೊಗ್ಗ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಡಿ.15 ರಿಂದ 13 ದಿನಗಳ ಕಾಲ ನಿರುದ್ಯೋಗಿ ಪುರುಷರಿಗೆ CCTV ಅಳವಡಿಕೆ ಮತ್ತು ಸರ್ವಿಸಿಂಗ್ ಉಚಿತ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 45 ವರ್ಷ ವಯಸ್ಸಿನ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಶಿಬಿರಾರ್ಥಿಗಳಿಗೆ … Read more

ಶಿವಮೊಗ್ಗ ಜೈಲಿನಲ್ಲಿರುವ ಧರ್ಮಸ್ಥಳದ ಮಾಸ್ಕ್‌ ಮ್ಯಾನ್‌ಗೆ ಜಾಮೀನು

Mask-Man-chinnaiah-shifted-to-Shimoga-prison

ಶಿವಮೊಗ್ಗ: ಧರ್ಮಸ್ಥಳದ ಬುರುಡೆ ಕೇಸ್‌ನ ಮಾಸ್ಕ್‌ ಮ್ಯಾನ್‌ ಚಿನ್ನಯ್ಯಗೆ ಜಾಮೀನು ಮಂಜೂರಾಗಿದೆ. 79 ದಿನದ ಬಳಿಕ ಚಿನ್ನಯ್ಯಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ಸದ್ಯ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರುಪಾಯಿ ಷೂರಿಟಿ, ಸೇರಿ 12 ಷರತ್ತುಗಳನ್ನು ಹಾಕಿ ಜಾಮೀನು ಮಂಜೂರು ಮಾಡಲಾಗಿದೆ. ಶಿವಮೊಗ್ಗ ಜೈಲಿನಲ್ಲಿದ್ದಾನೆ ಚಿನ್ನಯ್ಯ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಸದ್ಯ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಭದ್ರತೆಯ … Read more

ಶಿವಮೊಗ್ಗದ ವಿವಿಧೆಡೆ ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರೆಂಟ್‌ ಇರಲ್ಲ

power cut mescom ELECTRICITY

ಶಿವಮೊಗ್ಗ: ನಗರ ಉಪವಿಭಾಗ-1ರ ಘಟಕ-1ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ನ.25 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ನಗರದ ವಿವಿಧೆಡೆ ಕರೆಂಟ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಮೆಹಬೂಬ್ ನಗರ, ವಾದಿ ಎ ಹುದಾ, ಬೈಪಾಸ್ ರಸ್ತೆ, ನಿಸರ್ಗ ಬಡಾವಣೆ, ಊರಗಡೂರು, ಸೂಳೆಬೈಲು, ಪುಟ್ಟಪ್ಪ ಕ್ಯಾಂಪ್, ಕ್ರಷರ್ ರಸ್ತೆ, ಮಳಲಿಕೊಪ್ಪ, ಇಂದಿರಾನಗರ, ಎಕೆಎಸ್ ಲೇಔಟ್, ಪಟೇಲ್ ಕಾಂಪೌಂಡ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ … Read more

ಶಿವಮೊಗ್ಗ ಸಿಟಿಯಲ್ಲಿ ಹಂಪ್‌ಗಳ ಅವಾಂತರ, ಸಿಟ್ಟಾದ ಜನ, ಅಷ್ಟಕ್ಕು ಸಮಸ್ಯೆ ಏನು?

Road-Humps-Problem-in-Shimoga-city.

ಶಿವಮೊಗ್ಗ: ವಾಹನಗಳ ಅತಿ ವೇಗಕ್ಕೆ ಬ್ರೇಕ್‌ ಹಾಕಿ, ಅಪಘಾತ ತಪ್ಪಿಸಲು ಸಿಟಿಯ ವಿವಿಧ ರಸ್ತೆಗಳಲ್ಲಿ ಹಂಪ್‌ಗಳನ್ನು ಹಾಕಲಾಗುತ್ತಿದೆ. ಆದರೆ ಈ ಹಂಪುಗಳೇ ಅಪಘಾತಕ್ಕೆ ಕಾರಣವಾಗಿ ಸಾರ್ವಜನಿಕ ಟೀಕೆಗು ಗುರಿಯಾಗಿದೆ. ರಾತ್ರೋರಾತ್ರಿ ಹಂಪ್‌, ಹಲವರಿಗೆ ಗಾಯ ಶಿವಮೊಗ್ಗ ನಗರದ ರೋಟರಿ ಬ್ಲಡ್‌ ಬ್ಯಾಂಕ್‌ ಎದುರಿನ ರಸ್ತೆಯ ಒಂದು ಬದಿಯಲ್ಲಿ ಕೆಲವೇ ಮೀಟರ್‌ ಅಂತರದಲ್ಲಿ ಎರಡು ಬೃಹತ್‌ ಹಂಪ್‌ಗಳನ್ನು ಹಾಕಲಾಗಿದೆ. ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌ ಅವರ ಮನೆ ಮುಂಭಾಗ ಮತ್ತು ನವಶ್ರೀ ಸಭಾಂಗಣದ ಎದುರು ಎರಡು ಪ್ರತ್ಯೇಕ ಹಂಪ್‌ಗಳನ್ನ … Read more

ಜೋಗ ಮೆಸ್ಕಾಂ ವ್ಯಾಪ್ತಿಯಲ್ಲಿ ನಾಳೆ ಕರೆಂಟ್‌ ಇರಲ್ಲ, ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ?

power cut mescom ELECTRICITY

ಕಾರ್ಗಲ್: ಹಳೆಯ ವಾಹಕ ಬದಲಾವಣೆ ಕಾಮಗಾರಿ ಕಾಮಗಾರಿ ಹಿನ್ನೆಲೆ ನ.25ರಂದು ಜೋಗ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿ ಕರೆಂಟ್‌ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಕಾರ್ಗಲ್‌ ಪಟ್ಟಣ ಪ್ರದೇಶ, ಭಾರಂಗಿ ಹೋಬಳಿಯ ಅರಳಗೋಡು ಮತ್ತು ಭಾನ್ಕುಳಿ ಪಂಚಾಯಿತಿ ವ್ಯಾಪ್ತಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೋಗ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ಪ್ರವೀಣ್‌ ತಿಳಿಸಿದ್ದಾರೆ. ಇದನ್ನೂ ಓದಿ » ರಾತ್ರೋರಾತ್ರಿ ಅಡಿಕೆ ಮರದಿಂದಲೇ ಕ್ವಿಂಟಾಲ್‌ಗಟ್ಟಲೆ ಅಡಿಕೆ ಕಳವು

ಶಿವಮೊಗ್ಗದಲ್ಲಿ ಪೊಲೀಸರ ಮಕ್ಕಳ ಕ್ರೀಡಕೂಟ, ಏನೆಲ್ಲ ಸ್ಪರ್ಧೆ ಇತ್ತು?

Police-children-sports-in-Shimoga-DAR-Ground

ಶಿವಮೊಗ್ಗ: ಸದಾ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವ ಪೊಲೀಸರು, ತಮ್ಮ ಮಕ್ಕಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸುವುದನ್ನು ಕಂಡು ಸಂತಸಪಟ್ಟರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಭಾನುವಾರ ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಮಕ್ಕಳ ಕ್ರೀಡಾಕೂಟವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಉದ್ಘಾಟಿಸಿದರು. ಕ್ರೀಡಾಕೂಟದಲ್ಲಿ ಭಾಗವಹಿಸಲು ಆಗಮಿಸಿದ್ದ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಶುಭ ಕೋರಿದರು. ಕ್ರೀಡಾಕೂಟದಲ್ಲಿ ಕಪ್ಪೆ ಜಿಗಿತ, ಓಟ, ಬಕೆಟ್‌ಗೆ ಬಾಲ್ ಎಸೆಯುವುದು, ಹಿಟ್ ದ ವಿಕೆಟ್, ಗುಂಡು ಎಸೆತ ಹಾಗೂ ಸ್ಲೋ ಸೈಕಲ್ … Read more