ಶಿವಮೊಗ್ಗ ಸಿಟಿಯಲ್ಲಿ ಸಾವಿರ ಸಾವಿರ ಸೆಟ್‌ ದೋಸೆ ಹಂಚಿದ ಭಕ್ತರು, ಕಾರಣವೇನು?

thousands-of-set-dosas-distributed-in-Shimoga

ಶಿವಮೊಗ್ಗ: ಶ್ರೀ ದುರ್ಗ ಸಪ್ತಶತಿ ಋಷಿಪ್ರಜ್ಞಾ ಆಂದೋಲನದ ವತಿಯಿಂದ ಶಿವಮೊಗ್ಗ ನಗರದಲ್ಲಿ 7500ಕ್ಕು ಹೆಚ್ಚು ಸೆಟ್ ದೋಸೆ (Set Dosas) ವಿತರಿಸಲಾಯಿತು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಡಿ.28ರಿಂದ ಸರಳ ತಂತ್ರಗಳು, ಕ್ರಿಯಾಯೋಗ ಶಿಬಿರ, ನೋಂದಣಿ ಅರಂಭ ಸಖರಾಯಪಟ್ಟಣದ ಶ್ರೀ ಗುರುನಾಥ ವರ್ಧಂತಿ ಮಹೋತ್ಸವದ ಅಂಗವಾಗಿ ಭಕ್ತರು 7500 ಸೆಟ್ ದೋಸೆ ವಿತರಣೆ ಮಾಡಿದರು. ಮೆಗ್ಗಾನ್‌ ಆಸ್ಪತ್ರೆ, ಎಪಿಎಂಸಿ, ವಿವಿಧ ವೃದ್ಧಾಶ್ರಮ, ಸರ್ಕಾರಿ ಮತ್ತು ಖಾಸಗಿ ಬಸ್‌ ನಿಲ್ದಾಣ ಸೇರಿ ಹಲವೆಡೆ ದೋಸೆ ವಿತರಣೆ ಮಾಡಲಾಯಿತು. ಇದನ್ನೂ ಓದಿ » ತೀರ್ಥಹಳ್ಳಿ ಎಳ್ಳಮಾವಾಸ್ಯೆ … Read more

ಶಿವಮೊಗ್ಗ – ಆಯನೂರು ರಸ್ತೆಯಲ್ಲಿ ಅಪಘಾತ, ಕಾರಿನ ಮುಂಭಾಗ ನಜ್ಜುಗುಜ್ಜು

Car-and-Bus-head-on-collision-in-Shimoga-Ayanuru-Road

ಶಿವಮೊಗ್ಗ: ಖಾಸಗಿ ಬಸ್‌ ಮತ್ತು ಸ್ಯಾಂಟ್ರೊ ಕಾರು ಮುಖಾಮುಖಿ (Head On Accident) ಡಿಕ್ಕಿಯಾಗಿದ್ದು ಕಾರಿನಲ್ಲಿದ್ದ ಒಬ್ಬರು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ವೀರಗಾರನ ಬೈರನಕೊಪ್ಪದಲ್ಲಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ » ₹67 ಲಕ್ಷ ಕಳೆದುಕೊಂಡ ಶಿವಮೊಗ್ಗದ 22 ವರ್ಷದ ಯುವತಿ, ಆಗಿದ್ದೇನು? ಗಜಾನನ ಬಸ್‌ ಶಿವಮೊಗ್ಗದಿಂದ ಆಯನೂರು ಕಡೆಗೆ ತೆರಳುತ್ತಿತ್ತು. ಕಾರು ಆಯನೂರು ಕಡೆಯಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿತ್ತು. ಮುಖಾಮುಖಿ ಅಪಘಾತದಲ್ಲಿ ಕಾರು ನಜ್ಜಗುಜ್ಜಾಗಿದೆ. ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಂಸಿ … Read more

ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯ ದಿನಾಂಕ ಪ್ರಕಟ, ಯಾವ್ಯಾವ ದಿನ ಏನೇನು ನಡೆಯಲಿದೆ?

Thirthahalli ellamavasye Teppotsava

ತೀರ್ಥಹಳ್ಳಿ: ಪುರಾಣ ಪ್ರಸಿದ್ದ ಎಳ್ಳಮಾವಾಸ್ಯೆ ಜಾತ್ರೆಗೆ (Ellemavasya Jatre) ಎಲ್ಲ ಸಿದ್ಧತೆ ಮಾಡಲಾಗುತ್ತಿದೆ. ಡಿ.19ರಿಂದ ಮೂರು ದಿನ ಜಾತ್ರೆ ನಡೆಯಲಿದೆ ಎಂದು ಶ್ರೀ ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ಹಾಲಿಗೆ ನಾಗರಾಜ್ ಹೇಳಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಲಿಗೆ ನಾಗರಾಜ್‌, ಡಿ.19ರಂದು ತುಂಗಾನದಿಯಲ್ಲಿ ತೀರ್ಥಸ್ನಾನ, ಡಿ.20ರಂದು ರಾಮೇಶ್ವರ ದೇವರ ರಥೋತ್ಸವ ಹಾಗೂ ಡಿ.21ರಂದು ಸಂಜೆ ತುಂಗಾನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ತಿಳಿಸಿದರು. ಸುಮಾರು … Read more

ಶಿವಮೊಗ್ಗದಲ್ಲಿ ಡಿ.28ರಿಂದ ಸರಳ ತಂತ್ರಗಳು, ಕ್ರಿಯಾಯೋಗ ಶಿಬಿರ, ನೋಂದಣಿ ಅರಂಭ

-kriya-yoga-in-Shimoga.

ಶಿವಮೊಗ್ಗ: ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಆರ್ಯವೈಶ್ಯ ಸಂಸ್ಕೃತಿ ಸದನದಲ್ಲಿ ಡಿ.28ರಿಂದ ಜನವರಿ 7 ರವರೆಗೆ ಸರಳ ತಂತ್ರಗಳು ಹಾಗೂ ಕ್ರಿಯಾಯೋಗ (Kriya Yoga) ಶಿಬಿರ ಆಯೋಜಿಸಲಾಗಿದೆ ಎಂದು ಶಿಬಿರದ ಸಂಚಾಲಕ ಮೃತ್ಯುಂಜಯ ತಿಳಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೃತ್ಯುಂಜಯ, ಹಿಮಾಲಯದ ತಪಸ್ವಿಗಳು ಶ್ರೀ ತೇಜಾನಂತ ಆರೂಢ ಅವಧೂತರು ಈ ಶಿಬಿರದ ಸಾನಿಧ್ಯವಹಿಸುವರು. ಆತ್ಮಬಂಧುಗಳಿಗಾಗಿ ಮಾತ್ರ 12 ದಿನ ಶಿಬಿರ ನಡೆಯಲಿದೆ. ಯಾವುದೇ ಶುಲ್ಕವಿರುವುದಿಲ್ಲ. ಶಿಬಿರದಲ್ಲಿ ಭಾಗವಹಿಸುವ ಮೊದಲು ಅವಧೂತರ 10 ಅಮೃತವಾಣಿ, ಸತ್ಸಂಗಗಳ ಮಾಲಿಕೆಯನ್ನ … Read more

ರೈತನ ಪತ್ನಿಗೆ ಫೋನ್‌ ಮಾಡಿದ ‘ಬ್ಯಾಂಕ್‌ ಮ್ಯಾನೇಜರ್‌’, ಆಮೇಲೆ ಕಾದಿತ್ತು ಶಾಕ್, ಆಗಿದ್ದೇನು?

Online-Fraud-In-Shimoga

ಶಿವಮೊಗ್ಗ: ಬ್ಯಾಂಕ್ ಮ್ಯಾನೇಜರ್ ಎಂದು ನಟಿಸಿದ ವಂಚಕರು ಎಟಿಎಂ ಕಾರ್ಡ್ ನವೀಕರಣದ ಹೆಸರಿನಲ್ಲಿ ರೈತರೊಬ್ಬರ (Farmer Scammed) ಖಾತೆಯಿಂದ ₹2,84,321 ಹಣವನ್ನು ಆನ್‌ಲೈನ್ ಮೂಲಕ ವಂಚಿಸಿದ್ದಾರೆ. ನವೆಂಬರ್ 26ರಂದು ಅಪರಿಚಿತರು ಶಿವಮೊಗ್ಗ ಜಿಲ್ಲೆಯ ರೈತರೊಬ್ಬರ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ ಎಟಿಎಂ ಕಾರ್ಡ್ ಅವಧಿ ಮುಗಿದಿದೆ. ಕೂಡಲೆ ನವೀಕರಿಸಬೇಕು ಎಂದು ತಿಳಿಸಿದ್ದಾರೆ. ಪತ್ನಿ ವಿಷಯ ತಿಳಿಸಿದ ನಂತರ ರೈತ, ‘ಬ್ಯಾಂಕ್‌ ಮ್ಯಾನೇಜರ್‌ʼ ಕರೆ ಮಾಡಿದ್ದ ನಂಬರ್‌ಗೆ ಕರೆ ಮಾಡಿದ್ದರು. ಆಗ ವಂಚಕರು ಡೆಬಿಟ್ ಕಾರ್ಡ್ ಮತ್ತು ವೈಯಕ್ತಿಕ … Read more

ಶಿವಮೊಗ್ಗದಲ್ಲಿ ದೇಸಿ ಮೇಳ, ಹಲವು ವಸ್ತುಗಳ ಪ್ರದರ್ಶನ, ಮಾರಾಟ, ಯಾವಾಗ ಶುರು?

desi-mela-in-Shimoga.

ಶಿವಮೊಗ್ಗ: ದೇಶೀಯ ಉತ್ಪಾದನಾ ಸಾಮರ್ಥ್ಯ ಹಾಗೂ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಆದ್ಯತೆ ನೀಡುವ ಉದ್ದೇಶದಿಂದ ನಗರದ ಬಂಟರ ಭವನದಲ್ಲಿ ‘ದೇಸಿ ಮೇಳ-ಪರಂಪರೆ’ (Desi Mela) ಶೀರ್ಷಿಕೆಯಡಿ ಡಿ.12ರಿಂದ ಮೂರು ದಿನ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿ ಕೊಳ್ಳಲಾಗಿದೆ ಎಂದು ಮೇಳದ ಆಯೋಜಕ ಪ್ರೊ. ಬಿ.ಎಂ.ಕುಮಾರಸ್ವಾಮಿ ತಿಳಿಸಿದರು. ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಎರಡು ದಿನ ಕುಡಿಯುವ ನೀರು ಬರಲ್ಲ, ಯಾವ್ಯಾವ ದಿನ? ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ದೇಶೀಯ … Read more

₹67 ಲಕ್ಷ ಕಳೆದುಕೊಂಡ ಶಿವಮೊಗ್ಗದ 22 ವರ್ಷದ ಯುವತಿ, ಆಗಿದ್ದೇನು?

Online-Fraud-Case-image

ಶಿವಮೊಗ್ಗ: ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಆನ್‌ಲೈನ್ ಹೂಡಿಕೆ ಕಂಪನಿಯ ಹೆಸರಿನಲ್ಲಿ ಶಿವಮೊಗ್ಗದ 22 ವರ್ಷದ ಯುವತಿಗೆ ₹67 ಲಕ್ಷಕ್ಕು ಹೆಚ್ಚು ವಂಚನೆ (Scammed) ಮಾಡಲಾಗಿದೆ. ಈ ಸಂಬಂಧ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ವಂಚನೆ? ಶಿವಮೊಗ್ಗದ ಯುವತಿಗೆ ‘Funin’ ಕಂಪನಿಯ ಹೆಸರಿನಲ್ಲಿ ಮೆಸೇಜ್‌ ಬಂದಿತ್ತು. ಯುವತಿಯ ಹೆಸರಿನಲ್ಲಿ ಐ.ಡಿ ತೆರೆದು ಲಾಭದ ಭರವಸೆ ನೀಡಲಾಗಿತ್ತು. ಇದನ್ನು ನಂಬಿದ ಯುವತಿ 2025ರ ಜೂನ್ 9 ರಿಂದ ನವೆಂಬರ್ 26ರ ಮಧ್ಯೆ  ಒಟ್ಟು 559 … Read more

ಶಿವಮೊಗ್ಗದಲ್ಲಿ ಪೊಲೀಸ್‌ ಅಧಿಕಾರಿಯ ಬೈಕ್‌ ನಾಪತ್ತೆ, ಎಲ್ಲಿ? ಆಗಿದ್ದೇನು?

bike theft reference image

ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಪೊಲೀಸ್‌ ಅಧಿಕಾರಿಯೊಬ್ಬರ ಬೈಕನ್ನೇ (Splendor Plus) ಕಳ್ಳರು ಕದ್ದೊಯ್ದಿದ್ದಾರೆ.  ಹೊಸ ಬೊಮ್ಮನಕಟ್ಟೆ, ಅಪೂರ್ವ ಕಾಲೇಜು ಬಳಿ ಮನೆ ಮುಂಭಾಗ ನಿಲ್ಲಿಸಿದ್ದ ಪೊಲೀಸ್‌ ಅಧಿಕಾರಿ ಯತೀಶ್‌  ಅವರ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳುವಾಗಿದೆ. ಇದನ್ನೂ ಓದಿ » ಮೆಗ್ಗಾನ್‌ ಆಸ್ಪತ್ರೆಯಿಂದ ಹೊರಬಂದ ಮೆಡಿಕಲ್‌ ವಿದ್ಯಾರ್ಥಿಗೆ ಕಾದಿತ್ತು ಶಾಕ್‌, ಆಗಿದ್ದೇನು? ಯತೀಶ್‌ ಅವರು ರಾತ್ರಿ ಕರ್ತವ್ಯ ಮುಗಿಸಿ ಬಂದ ನಂತರ ಬೈಕ್ ಅನ್ನು ಮನೆಯ ಮುಂದೆ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಬೈಕ್‌ಗಾಗಿ … Read more

ಶಿವಮೊಗ್ಗ ಸಿಟಿಯಲ್ಲಿ ಎರಡು ದಿನ ಕುಡಿಯುವ ನೀರು ಬರಲ್ಲ, ಯಾವ್ಯಾವ ದಿನ?

Drinking-Water-Tap

ಶಿವಮೊಗ್ಗ: ನಗರದ ಮಂಡ್ಲಿ ಭಾಗದಲ್ಲಿ ಮೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ಡಿ. 11 ರಂದು ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಆದ್ದರಿಂದ ಡಿಸೆಂಬರ್‌ 11 ಮತ್ತು 12 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜು (Water Supply) ವ್ಯತ್ಯಯವಾಗಲಿದೆ. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಸಿಟಿಯ ವಿವಿಧೆಡೆ ಡಿಸೆಂಬರ್‌ … Read more

ಶಿವಮೊಗ್ಗ ಸಿಟಿಯ ವಿವಿಧೆಡೆ ಡಿಸೆಂಬರ್‌ 11ರಂದು ಅರ್ಧ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಶಿವಮೊಗ್ಗ: ಎಂ.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದ 110 ಕೆವಿ ಲೈನ್‌ನಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಡಿ.11 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3ರವರೆಗೆ ನಗರ ಉಪವಿಭಾಗ 2 ರ ಘಟಕ 5 ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ (Power Outage) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಆರ್.ಎಂ.ಎಲ್. ನಗರ 1ನೇ ಮತ್ತು 2ನೇ ಹಂತ, ಎಲ್.ಎಲ್.ಆರ್. ರಸ್ತೆ, ಜೆ.ಸಿ.ನಗರ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ, ಆನಂದ್‌ರಾವ್ ಬಡಾವಣೆ, … Read more