ಮೆಗ್ಗಾನ್‌ ಆಸ್ಪತ್ರೆಯಿಂದ ಹೊರಬಂದ ಮೆಡಿಕಲ್‌ ವಿದ್ಯಾರ್ಥಿಗೆ ಕಾದಿತ್ತು ಶಾಕ್‌, ಆಗಿದ್ದೇನು?

Mc-Gann-Hospital-Shimoga

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಕ್ಯಾಶುವಾಲಿಟಿ ಪಕ್ಕದ ಪಾರ್ಕಿಂಗ್ ಜಾಗದಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ (Bike Stolen). ಅರ್ಜುನ್ ಬೈಜು ಎಂಬುವವರಿಗೆ ಸೇರಿದ ಹಿಮಾಲಯನ್ ಸ್ಕ್ರ‍್ಯಾಮ್ ಬೈಕ್ ನಾಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಶಿವಮೊಗ್ಗದಲ್ಲಿ ಸಾವು ಡಿಸೆಂಬರ್ 4ರ ಬೆಳಗ್ಗೆ ಅರ್ಜುನ್‌ ಬೈಜು ಬೈಕ್‌ ತಂದು ನಿಲ್ಲಿಸಿದ್ದರು. ಮಧ್ಯಾಹ್ನ ಆಸ್ಪತ್ರೆಯಿಂದ ಹೊರ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಅರ್ಜುನ್‌ ಬೈಜು, ದೂರು ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ … Read more

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗೆ ಪ್ರಭಾರ ಅಧ್ಯಕ್ಷರು

Geetha-Ramesh-New-president-of-Thirthahalli-Pattana-Panchayath

ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷರಾಗಿ ಗೀತಾ ರಮೇಶ್ ಕಾರ್ಯನಿರ್ವಹಿಸಲಿದ್ದಾರೆ. ಹಾಲಿ ಉಪಾಧ್ಯಕ್ಷರಾ ಗಿರುವ ಗೀತಾ ರಮೇಶ್ ಸೋಮವಾರ ಪಟ್ಟಣ ಪಂಚಾಯಿತಿದಲ್ಲಿ ಪ್ರಭಾರ ಅಧ್ಯಕ್ಷರಾಗಿ (Acting President) ಅಧಿಕಾರ ಸ್ವೀಕರಿಸಿದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ವಿರುದ್ಧ ಮಹಿಳೆಯರು ಆಕ್ರೋಶ, ತಕ್ಷಣ ಕ್ಷಮೆಗೆ ಒತ್ತಾಯ, ಕಾರಣವೇನು? ಕೆಲವು ದಿನಗಳ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದ ರಹಮತುಲ್ಲಾ ಅಸಾದಿ ವಿರುದ್ಧ ಮಂಡನೆ ಆಗಿದ್ದ ಅವಿಶ್ವಾಸ ನಿರ್ಣಯ ಹೈಕೋರ್ಟ್ ಆದೇಶದ ಅನ್ವಯ ಸ್ವೀಕೃತಗೊಂಡ ಹಿನ್ನೆಲೆ ಅಧ್ಯಕ್ಷ ಸ್ಥಾನ ತೆರವಾಗಿದೆ.

ಶಿವಮೊಗ್ಗದಲ್ಲಿ ಕಲರ್ಸ್‌ ಕನ್ನಡ ‘ಗಿಚ್ಚಿ ಗಿಲಿಗಿಲಿ’ ಆಡಿಷನ್, ಎಲ್ಲಿ? ಯಾರೆಲ್ಲ ಭಾಗವಹಿಸಬಹುದು?

SHIMOGA-NEWS-UPDATE

ಶಿವಮೊಗ್ಗ: ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ರಿಯಾಲಿಟಿ ಷೋಗಾಗಿ ಡಿ. 14ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಬಸವೇಶ್ವರ ನಗರದ 3ನೇ ಕ್ರಾಸ್‌ನಲ್ಲಿರುವ ಆಕ್ಸ್‌ಫರ್ಡ್ ಇಂಗ್ಲಿಷ್ ಸ್ಕೂಲ್‌ನ ಆವರಣದಲ್ಲಿ ಆಡಿಷನ್ (Audition) ನಡೆಯಲಿದೆ. 5 ರಿಂದ 12 ವರ್ಷ ವಯೋಮಿತಿಯ ಮಕ್ಕಳು ಈ ಆಡಿಷನ್‌ನಲ್ಲಿ ಭಾಗವಹಿಸಬಹುದು. ಆಸಕ್ತ ಮಕ್ಕಳು ನಿಗದಿತ ದಿನಾಂಕದಂದು ಪೋಷಕರೊಂದಿಗೆ ಭಾವಚಿತ್ರ, ಮಕ್ಕಳ ಮತ್ತು ಪೋಷಕರ ಆಧಾರ್ ಕಾರ್ಡ್‌ ಜೆರಾಕ್ಸ್ ಪ್ರತಿ ಸಹಿತ ಆಡಿಷನ್‌ಗೆ ಹಾಜರಾಗಬೇಕು ಎಂದು ಕಲರ್ಸ್ … Read more

ಶಿವಮೊಗ್ಗದಲ್ಲಿ ಚಳಿ ಜೋರು, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗದಲ್ಲಿ ಚಳಿ ತೀವ್ರತೆ ಪಡೆದುಕೊಂಡಿದೆ. ಎಲ್ಲ ತಾಲೂಕುಗಳಲ್ಲಿ ತಾಪಮಾನದಲ್ಲಿ ಇಳಿಕೆಯಾಗಿದೆ. (weather) ಕಳೆದ ಎರಡ್ಮೂರು ದಿನದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಥಂಡಿ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ವಾತಾವರಣ ತಂಪೇರುತ್ತಿದೆ. ರಾತ್ರಿ ಮೈಕೊರೆಯುವ ಚಳಿ ಇರಲಿದೆ. ಇನ್ನು, ಬೆಳಗ್ಗೆ ಬಿಸಿಲಿನ ಅಬ್ಬರ ಜೋರಿದ್ದರು ತಣ್ಣನೆಯ ಅನುಭವ ಆಗುತ್ತಿದೆ. ಇದನ್ನೂ ಓದಿ » ರಾಜ್ಯ ಕ್ರಿಕೆಟ್‌ ಸಂಸ್ಥೆ ಚುನಾವಣೆ, ಡಿ.ಎಸ್‌.ಅರುಣ್‌ಗೆ ಭರ್ಜರಿ ಗೆಲುವು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿಯಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್‌. ತೀರ್ಥಹಳ್ಳಿಯಲ್ಲಿ ಗರಿಷ್ಠ … Read more

ಕಾನೂನು ಸಡಿಲಗೊಳಿಸಿದರೆ ಹೋರಾಟ ತೀವ್ರ, ಸರ್ಕಾರಕ್ಕೆ ವಿಹೆಚ್‌ಪಿ, ಬಜರಂಗದಳ ವಾರ್ನಿಂಗ್‌

VHP-bajarangadal-Protest-in-Shimoga.

ಶಿವಮೊಗ್ಗ: ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆ. ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಯೋಜಿಸಿದೆ. ಇದು ಸಂವಿಧಾನ ವಿರೋಧಿ ಕೃತ್ಯ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ (Bajrang Dal) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಿಹೆಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರು, ಗೋ ಹತ್ಯೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರವು ಗೋವುಗಳ ಕಳ್ಳ ಸಾಗಣೆದಾರರ ಅನುಕೂಲ ಮಾಡಿಕೊಡಲು ಮುಂದಾಗಿದೆ … Read more

ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ವಿರುದ್ಧ ಮಹಿಳೆಯರು ಆಕ್ರೋಶ, ತಕ್ಷಣ ಕ್ಷಮೆಗೆ ಒತ್ತಾಯ, ಕಾರಣವೇನು?

BJP-Mahila-Morcha-protest-against-CM-Siddaramaiah

ಶಿವಮೊಗ್ಗ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಏಕವಚನ ಮತ್ತು ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು, ಸಿದ್ದರಾಮಯ್ಯ ಅವರು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ. ತಕ್ಷಣ ಅವರು ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್‌ ಅವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಯಾರೆಲ್ಲ ಏನೆಲ್ಲ ಹೇಳಿದರು? ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ರಶ್ಮಿ ಶ್ರೀನಿವಾಸ್ … Read more

ಶಿವಮೊಗ್ಗದಲ್ಲಿ ಇಂದಿನಿಂದ ಕ್ರಿಕೆಟ್‌ ಪಂದ್ಯಾವಳಿ, ರಾಷ್ಟ್ರೀಯ ತಂಡದ ಆಯ್ಕೆಗಾರರು ಆಗಮನ, ಎಲ್ಲಿ?

KSCA-Cricket-stadium-in-Shivamogga.

ಶಿವಮೊಗ್ಗ: ನಗರದ ಕೆಎಸ್‌ಸಿಎ ಹಾಗೂ ಜೆಎನ್ಎನ್‌ಸಿಇ ಕ್ರೀಡಾಂಗಣದಲ್ಲಿ ಡಿ.8ರಿಂದ ವಿಜಯ್ ಮರ್ಚೆಂಟ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ (Cricket Tournament) ನಡೆಯಲಿದೆ. ಬಿಸಿಸಿಐ ಮೂರನೇ ಬಾರಿಗೆ ಇಲ್ಲಿ ಪ್ರಮುಖ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. 16 ವರ್ಷದೊಳಗಿನ ಪ್ರತಿಭೆಗಳನ್ನು ಗುರುತಿಸಲು ಪಂದ್ಯಾವಳಿ ಅತ್ಯಂತ ಮಹತ್ವದ್ದೆನಿಸಿದೆ. ದೇಶದ ವಿವಿಧ ರಾಜ್ಯಗಳ 36 ತಂಡಗಳು ಹಲವು ಕಡೆಗಳಲ್ಲಿ ಆಯೋಜಿಸಿರುವ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. ತಲಾ ಆರು ತಂಡಗಳ ಆರು ಗುಂಪುಗಳನ್ನು ರಚಿಸಲಾಗಿದೆ. ಎ ಗುಂಪಿನ ಎಲ್ಲ ಪಂದ್ಯಗಳು ಶಿವಮೊಗ್ಗದ ಮೂರು ಕ್ರೀಡಾಂಗಣದಲ್ಲಿ ನಡೆಯಲಿವೆ. ಎ ಗುಂಪಿನಲ್ಲಿ … Read more

ರಾಜ್ಯ ಕ್ರಿಕೆಟ್‌ ಸಂಸ್ಥೆ ಚುನಾವಣೆ, ಡಿ.ಎಸ್‌.ಅರುಣ್‌ಗೆ ಭರ್ಜರಿ ಗೆಲುವು

DS-Arun-MLC-Shimoga

ಶಿವಮೊಗ್ಗ: ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಯ ಆಡಳಿತ ಮಂಡಳಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಶಿವಮೊಗ್ಗ ವಲಯದ ನೂತನ ಸಂಚಾಲಕರಾಗಿ ಮತ್ತು ರಾಜ್ಯ ಕ್ರಿಕೆಟ್ (Cricket) ಸಂಸ್ಥೆಯ ನಿರ್ದೇಶಕರಾಗಿ (Director) ಆಯ್ಕೆಯಾಗಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಡಿ.ಎಸ್. ಅರುಣ್ ಅವರು, ಕ್ರಿಕೆಟ್ ಅಭಿವೃದ್ಧಿ, ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿ ಅವರಿಗೆ ಉತ್ತಮ ತರಬೇತಿ ನೀಡುವುದು ಪ್ರಮುಖ ಗುರಿಯಾಗಿದೆ. ಇದರೊಂದಿಗೆ, ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶವಿದೆ ಎಂದು … Read more

ಮರಕ್ಕೆ ಬೈಕ್‌ ಡಿಕ್ಕಿ, ಬೈಕ್‌ನ ಹಿಂಬದಿ ಸವಾರ ಸಾವು

bike-hits-tree-pillion-rider-manjunath-dies

ರಿಪ್ಪನ್‌ಪೇಟೆ: ಸವಾರನ ನಿಯಂತ್ರಣ ತಪ್ಪಿದ ಬೈಕ್‌ ಮರಕ್ಕೆ ಡಿಕ್ಕಿ (Fatal Bike Accident) ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡ್ರಿಗೆ ಗ್ರಾಮದಲ್ಲಿ ಭಾನುವಾರ ಘಟನೆ ಸಂಭವಿಸಿದೆ. ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಣಸೆ ಗ್ರಾಮದ ನಿವಾಸಿ ಶಿವಪ್ಪ ಎಂಬುವರ ಪುತ್ರ ಮಂಜುನಾಥ (35) ಮೃತ ವ್ಯಕ್ತಿ. ಮಂಜುನಾಥ, ಹೊಸನಗರದಲ್ಲಿ ಗ್ರಾಮಒನ್ ನಡೆಸುತ್ತಿದ್ದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಹಾಡಹಗಲೆ ಶಿಕ್ಷಕಿಯ ಪರ್ಸ್‌ ಕಸಿದು ಎಸ್ಕೇಪ್‌, ಎಲ್ಲಿ? ಹೇಗಾಯ್ತು ಘಟನೆ? ಗಿಣಸೆ … Read more

ಇಂದಿನಿಂದ ಶಿವಮೊಗ್ಗದ ಅಂಗನವಾಡಿ, ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಆಯೋಗ ಹಠಾತ್ ಭೇಟಿ

Shimoga-News-update

ಶಿವಮೊಗ್ಗ: ರಾಜ್ಯ ಆಹಾರ ಆಯೋಗವು (Food Commission) ಡಿ.8 ರಿಂದ 11 ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ (Inspections) ಕೈಗೊಳ್ಳಲಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ನ್ಯಾಯಬೆಲೆ ಅಂಗಡಿ, ಆಹಾರ ಧ್ಯಾನ್ಯ ಸಗಟು ಮಳಿಗೆ, ಅಂಗನವಾಡಿ ಕೇಂದ್ರ, ಎಂ.ಎಸ್.ಪಿ.ಟಿ.ಸಿ., ಮಧ್ಯಾಹ್ನ  ಉಪಹಾರ ಯೋಜನೆ, ಜಿಲ್ಲಾ ಆಸ್ಪತ್ರೆಯಲ್ಲಿರುವ ಎನ್.ಆರ್.ಸಿ. ಘಟಕ, ಹಾಗೂ ವಿವಿಧ ಇಲಾಖೆಗಳ ಪರೀಶೀಲನೆ ನಡೆಸಲಿದೆ.‌ ಇದನ್ನೂ ಓದಿ » ದೇಶದ ಟಾಪ್‌ 10 ನಗರಗಳ ಪಟ್ಟಿಯಲ್ಲಿ ಶಿವಮೊಗ್ಗಕ್ಕೆ 6ನೇ ಸ್ಥಾನ, ಮೈಸೂರು, ಬೆಂಗಳೂರಿಗಿಂತಲು ಉತ್ತಮ ಜಿಲ್ಲಾಧಿಕಾರಿ … Read more