ಭದ್ರಾವತಿಯಲ್ಲಿ ಇವತ್ತು ಆರ್‌ಎಸ್‌ಎಸ್‌ ಪಥ ಸಂಚಲನ, ಎಷ್ಟು ಹೊತ್ತಿಗೆ? ಎಲ್ಲೆಲ್ಲಿ ಸಾಗಲಿದೆ?

Bhadravathi-News-Update

ಭದ್ರಾವತಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಅಂಗವಾಗಿ ಇಂದು ಸಂಜೆ 5.30ಕ್ಕೆ ಭದ್ರಾವತಿ ನಗರದಲ್ಲಿ ವಿಜಯದಶಮಿ ಪಥ ಸಂಚಲನ (Route March) ಆಯೋಜಿಸಲಾಗಿದೆ. ಸಂಜೆ 5.30ಕ್ಕೆ ಹೊಸಮನೆ ಶಿವಾಜಿ ವೃತ್ತದಿಂದ ಆರಂಭಗೊಳ್ಳುವ ಪಥ ಸಂಚಲನ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಮತ್ತು ಅಂಬೇಡ್ಕರ್ ವೃತ್ತದಿಂದ ಲೋಯರ್ ಹುತ್ತಾ ಕಾಲೊನಿವರೆಗೆ ಸಾಗಲಿದೆ. ಗಣವೇಷಧಾರಿಗಳಿಗೆ ರಸ್ತೆಯುದ್ದಕ್ಕೂ ಪುಷ್ಪಾರ್ಚನೆ ಮಾಡಲು 2 ಕ್ವಿಂಟಲ್ ಹೂ ವ್ಯವಸ್ಥೆ ಮಾಡಲಾಗಿದೆ. ಪಥ ಸಂಚಲನ ಹಿನ್ನೆಲೆ ಪ್ರಮುಖರ ರಸ್ತೆಗಳು ಕೇಸರಿಮಯವಾಗಿವೆ. ಎಲ್ಲೆಡೆ ಫ್ಲೆಕ್ಸ್, ಬಂಟಿಂಗ್ಸ್‌ … Read more

ಮಾಜಿ ಸಚಿವ ಈಶ್ವರಪ್ಪಗೆ ಒದಗಿಸಿದ್ದ ಭದ್ರತಾ ವ್ಯವಸ್ಥೆ ಹಿಂಪಡೆದ ಸರ್ಕಾರ

Eshwarappa-Press-Meet-in-Shimoga

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರಿಗೆ ಒದಗಿಸಲಾಗಿದ್ದ ಭದ್ರತಾ (Security) ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಸಂಬಂಧ ಗೃಹ ಇಲಾಖೆ ಆದೇಶ ಹೊರಡಿಸಿದೆ. ಮಾಜಿ ಸಚಿವ ಕೆ.ಎಸ್‌.ಈ‍ಶ್ವರಪ್ಪ ಅವರಿಗೆ ಒದಗಿಸಲಾಗಿದ್ದ ಭದ್ರತಾ ರಕ್ಷಕರು ಮತ್ತು ಬೆಂಗಾವಲು ಭದ್ರತಾ ಪಡೆಯನ್ನು ಸರ್ಕಾರ ಹಿಂಪಡೆದಿದೆ. ಇದೇ ವೇಳೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದ ನಾರಾಯಣ ಸ್ವಾಮಿ ಅವರ ನಿವಾಸದಲ್ಲಿದ್ದ ಭದ್ರತಾ ಗಾರ್ಡ್‌ಳನ್ನು ಹಿಂಪಡೆಯಲಾಗಿದೆ. ಇದನ್ನೂ ಓದಿ » ಕಾರ್ಮಿಕರಿಗೆ ಹಣ ವರ್ಗಾಯಿಸಲು ಬ್ಯಾಂಕ್‌ ಅಕೌಂಟ್‌ ಪರಿಶೀಲಿಸಿದ … Read more

ಭದ್ರಾವತಿಯಲ್ಲಿ ಕಾರುಗಳು ಮುಖಾಮುಖಿ ಡಿಕ್ಕಿ, ಚಾಲಕನ ಕಾಲಿಗೆ ಗಂಭೀರ ಗಾಯ

ACCIDENT-NEWS-GENERAL-IMAGE.

ಭದ್ರಾವತಿ: ಕಾರುಗಳು ಮುಖಾಮುಖಿ ಡಿಕ್ಕಿಯಾಗಿ (Collision) ಐದು ಮಂದಿ ಗಾಯಗೊಂಡಿದ್ದಾರೆ. ಒಂದು ಕಾರಿನ ಚಾಲನಿಗೆ ಗಂಭೀರ ಗಾಯವಾಗಿದ್ದು ಆತನನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿಯ ಪೇಪರ್‌ ಟೌನ್‌ ಸರ್ಕಲ್‌ ಬಳಿ ಘಟನೆ ಸಂಭವಿಸಿದೆ. ಶಿವಕುಮಾರ್‌, ಅಂಬರೀಷ, ಶಿವಶಂಕರ, ಪ್ರದೀಪ, ಮಂಜುನಾಥ ಎಂಬುವವರು ಗಾಯಗೊಂಡಿದ್ದಾರೆ. ಅಂತರಗಂಗೆಯ ಪ್ರದೀಪ, ಅಂಬರೀಷ ಮತ್ತು ಶಿವಕುಮಾರ್‌ ಎಂಬುವವರು ಉಜ್ಜನಿಪುರ ಮಾರ್ಗವಾಗಿ ಕಾರಿನಲ್ಲಿ ತೆರಳುತ್ತಿದ್ದರು. ತರೀಕೆರೆ ಕಡೆಯಿಂದ ಬಂದ ಕಾರೊಂದು ಇವರ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ಪ್ರದೀಪ … Read more

ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ತಾಪಮಾನ ಹೆಚ್ಚಳ, ಉಳಿದ ತಾಲೂಕುಗಳಲ್ಲಿ ಹೇಗಿರುತ್ತೆ ವಾತಾವರಣ? ಇಲ್ಲಿದೆ ಡಿಟೇಲ್ಸ್‌

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇವತ್ತು ಕೆಲವು ಹೊತ್ತು ಸಾಧಾರಣದಿಂದ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇದರ ಮಧ್ಯೆ ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾಗಿದೆ (weather). ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಬಿಸಿಲಿನ ಅಬ್ಬರ ಜೋರಿರಲಿದೆ. ಗರಿಷ್ಠ ತಾಪಮಾನವು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ತಾಪಮಾನ … Read more

ಕಾರ್ಮಿಕರಿಗೆ ಹಣ ವರ್ಗಾಯಿಸಲು ಬ್ಯಾಂಕ್‌ ಅಕೌಂಟ್‌ ಪರಿಶೀಲಿಸಿದ ಉದ್ಯಮಿಗೆ ಕಾದಿತ್ತು ಶಾಕ್

Online-Fraud-Case-image

ಶಿವಮೊಗ್ಗ: ಬ್ಯಾಂಕ್‌ ಖಾತೆ (Bank Account) ಹ್ಯಾಕ್‌ ಮಾಡಿ ₹1.95 ಲಕ್ಷ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಶಿವಮೊಗ್ಗದ ಉದ್ಯಮಿಯೊಬ್ಬರು ಸಿ.ಇ.ಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮಾಚೇನಹಳ್ಳಿಯ ಕಾರ್ಖಾನೆಯೊಂದರ ಕಾರ್ಮಿಕರಿಗೆ ಹಣ ವರ್ಗಾಯಿಸಲು, ಉದ್ಯಮಿ ತಮ್ಮ  ಬ್ಯಾಂಕ್‌ ಖಾತೆಯನ್ನು ಪರಿಶೀಲಿಸಿದಾಗ, ಹಣ ಇಲ್ಲದಿರುವುದು ಗಮನಕ್ಕೆ ಬಂದಿದೆ. ಬ್ಯಾಂಕಿನಲ್ಲಿ ವಿಚಾರಿಸಿದಾಗ ಅ.10ರ ರಾತ್ರಿ ಬ್ಯಾಂಕ್‌ ಖಾತೆಯನ್ನು ಹ್ಯಾಕ್‌ ಮಾಡಿ ಹಣ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಹಿನ್ನಲೆ ಉದ್ಯಮಿ ದೂರು ನೀಡಿದ್ದು ತನಿಖೆ … Read more

ಒಂದು ನಿಮಿಷ ಮೊದಲೇ ಸೂರ್ಯಾಸ್ತ, ಇವತ್ತು ಯಾವ್ಯಾವ ಕಾಲ ಯಾವಾಗಿದೆ ಗೊತ್ತಾ? – ದಿನ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಶನಿವಾರ, 18 ಅಕ್ಟೋಬರ್‌ 2025 – ದ್ವಾದಶಿ ಸೂರ್ಯೋದಯ : 6.19 am ಸೂರ್ಯಾಸ್ತ : 6.06 pm ನಕ್ಷತ್ರ : ಹುಬ್ಬ ರಾಹು, ಯಮಗಂಡ, ಗುಳಿಕ ಕಾಲ ರಾಹು ಕಾಲ ಬೆಳಗ್ಗೆ 9 ರಿಂದ 10.30ರವರೆಗೆ ಗುಳಿಕ ಕಾಲ ಬೆಳಗ್ಗೆ 6 ರಿಂದ 7.30ರವರೆಗೆ ಯಮಗಂಡ ಕಾಲ ಮಧ್ಯಾಹ್ನ 1.30 ರಿಂದ 3ರವರೆಗೆ ಇದನ್ನೂ ಓದಿ » ಮಿನಿಸ್ಟರ್‌ಗೆ ಬೆದರಿಕೆ, ಶಿವಮೊಗ್ಗದಲ್ಲಿ ಆಕ್ರೋಶ, ಘೋಷಣೆ

‘ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿ, ಡಬಲ್‌ ಹಣ ಗಳಿಸಿ’, ನಂಬಿದ ಹೊಸನಗರದ ವ್ಯಕ್ತಿ, ಆಮೇಲೆ ಅಗಿದ್ದೇನು?

SMS-Fraud-Shimoga-CEN-Police-Station.

ಶಿವಮೊಗ್ಗ: ಚಿನ್ನ ಮತ್ತು ಬೆಳ್ಳಿ (Gold Silver) ಮೇಲೆ ₹3 ಲಕ್ಷ ಹೂಡಿಕೆ ಮಾಡಿದರೆ ₹3 ಲಕ್ಷ ಲಾಭ ಗಳಿಸಬಹುದು ಎಂದು ನಂಬಸಿ ಹೊಸನಗರ ಮೂಲದ ವ್ಯಕ್ತಿಯೊಬ್ಬರಿಗೆ ₹18.27 ಲಕ್ಷ ವಂಚಿಸಲಾಗಿದೆ. ಹೇಗಾಯ್ತು ವಂಚನೆ? ಚಿನ್ನ, ಬೆಳ್ಳಿ ಮೇಲೆ ಹಣ ಹೂಡಿಕೆ ಮಾಡಿ ಡಬಲ್‌ ಆದಾಯ ಗಳಿಸಬಹುದು ಎಂಬ ಮಾಹಿತಿ ಮತ್ತು ಲಿಂಕ್‌ ಇರುವ ಮೆಸೇಜ್‌ ಒಂದು, ಹೊಸನಗರ ಮೂಲದ ವ್ಯಕ್ತಿಯೊಬ್ಬರ ವಾಟ್ಸಪ್‌ಗೆ ಬಂದಿತ್ತು. ಇದನ್ನು ನಂಬಿದ ಅವರು ಹಣ ಹೂಡಿಕೆ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ … Read more

ಖಾಸಗಿ ಬಸ್‌, ಲಾರಿ ಡಿಕ್ಕಿ, ದಂಪತಿ, ಬಸ್‌ ಚಾಲಕನಿಗೆ ಗಾಯ, ಎಲ್ಲಿ? ಹೇಗಾಯ್ತು ಘಟನೆ?

Lorry-and-Bus-Incident-at-Hosanagara-Nitturu

ಹೊಸನಗರ: ನಿಟ್ಟೂರು ಸಮೀಪದ ಗುರಟೆ ಗ್ರಾಮದ ಬಳಿ ಖಾಸಗಿ ಬಸ್‌ (Private Bus) ಮತ್ತು ಲಾರಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬಸ್‌ ಚಾಲಕ ಮತ್ತು ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌, ಹೊಸನಗರ ಕಡೆಯಿಂದ ಕಬ್ಬಿಣ ತುಂಬಿಕೊಂಡು ತೆರಳುತ್ತಿದ್ದ ಲಾರಿ ಮಧ್ಯೆ ಡಿಕ್ಕಿಯಾಗಿವೆ. ಘಟನೆಯಲ್ಲಿ ಚಾಲಕ ರಮೇಶ್‌ ಹಳೂರಿ ಮತ್ತು ಚಾಲಕನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ದಂಪತಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಬಸ್ಸಿನಲ್ಲಿ 30ಕ್ಕೂ … Read more

ಇಂದು ಏಕಾದಶಿ, ಶುಭ ಸಮಯ ಎಷ್ಟೊತ್ತಿಗಿದೆ? – ದಿನ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಶುಕ್ರವಾರ, 17 ಅಕ್ಟೋಬರ್‌ 2025 – ಏಕಾದಶಿ ಸೂರ್ಯೋದಯ : 6.19 am ಸೂರ್ಯಾಸ್ತ : 6.07 pm ನಕ್ಷತ್ರ : ಮಘ ರಾಹು, ಯಮಗಂಡ, ಗುಳಿಕ ಕಾಲ ರಾಹು ಕಾಲ ಬೆಳಗ್ಗೆ 10.30 ರಿಂದ 12ರವರೆಗೆ ಗುಳಿಕ ಕಾಲ ಬೆಳಗ್ಗೆ 7.30 ರಿಂದ 9ರವರೆಗೆ ಯಮಗಂಡ ಕಾಲ ಮಧ್ಯಾಹ್ನ 3 ರಿಂದ 4.30ರವರೆಗೆ ಇದನ್ನೂ ಓದಿ » ಶಿವಮೊಗ್ಗ ಬಸ್‌ ನಿಲ್ದಾಣದಿಂದ ಬೆಳಗಿನ ಜಾವ ಮನೆಗೆ ನಡೆದು ಹೋಗುವಾಗ … Read more

ಶಿವಮೊಗ್ಗ ಬಸ್‌ ನಿಲ್ದಾಣದಿಂದ ಬೆಳಗಿನ ಜಾವ ಮನೆಗೆ ನಡೆದು ಹೋಗುವಾಗ ಅಡ್ಡಗಟ್ಟಿದ ಬೈಕ್‌ ಸವಾರ

020921 Navule Road Light Inauguration

ಶಿವಮೊಗ್ಗ: ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಹಿಂತಿರುಗಿದ್ದ ವ್ಯಕ್ತಿಯೊಬ್ಬರು, ಬೆಳಗಿನ ಜಾವ ಮನೆಗೆ ನಡೆದು ಹೋಗುತ್ತಿದ್ದಾಗ, ಅಪರಿಚಿತನೊಬ್ಬ ಅಡ್ಡಗಟ್ಟಿ ನಗದು, ಉಂಗುರ ಕಸಿದು (Robbery) ಪರಾರಿಯಾಗಿದ್ದಾನೆ. ನವುಲೆಯ ಸ್ವರ್ಣ ಮಿತ್ರ ಬಡಾವಣೆಯ ಕುಮಾರ್‌ ಎಂಬುವವರು ಬಳ್ಳಾರಿಯಲ್ಲಿ  ಕೆಲಸ ಮುಗಿಸಿ ಶಿವಮೊಗ್ಗಕ್ಕೆ ಹಿಂತಿರುಗಿದ್ದರು. ಬೆಳಗಿನ ಜಾವ 4.30ರ ಹೊತ್ತಿಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಇಳಿದು ಮನೆಗೆ ನಡೆದು ಹೋಗುತ್ತಿದ್ದರು. ಶಿವಬಸವ ನಗರದಲ್ಲಿ ತೆರಳುವಾಗ ಬೈಕ್‌ ನಿಲ್ಲಿಸಿಕೊಂಡಿದ್ದ ವ್ಯಕ್ತಿಯೊಬ್ಬ ಕುಮಾರ್‌ ಅವರನ್ನು ಅಡ್ಡಗಟ್ಟಿ ಬೆದರಿಕೆ ಒಡ್ಡಿದಾನೆ ಎಂದು ಆರೋಪಿಸಲಾಗಿದೆ. ಕುಮಾರ್‌ ಅವರ … Read more