ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ಚಿನ್ನ ಮತ್ತು ಬೆಳ್ಳಿ (Gold Silver) ಮೇಲೆ ₹3 ಲಕ್ಷ ಹೂಡಿಕೆ ಮಾಡಿದರೆ ₹3 ಲಕ್ಷ ಲಾಭ ಗಳಿಸಬಹುದು ಎಂದು ನಂಬಸಿ ಹೊಸನಗರ ಮೂಲದ ವ್ಯಕ್ತಿಯೊಬ್ಬರಿಗೆ ₹18.27 ಲಕ್ಷ ವಂಚಿಸಲಾಗಿದೆ.
ಹೇಗಾಯ್ತು ವಂಚನೆ?
ಚಿನ್ನ, ಬೆಳ್ಳಿ ಮೇಲೆ ಹಣ ಹೂಡಿಕೆ ಮಾಡಿ ಡಬಲ್ ಆದಾಯ ಗಳಿಸಬಹುದು ಎಂಬ ಮಾಹಿತಿ ಮತ್ತು ಲಿಂಕ್ ಇರುವ ಮೆಸೇಜ್ ಒಂದು, ಹೊಸನಗರ ಮೂಲದ ವ್ಯಕ್ತಿಯೊಬ್ಬರ ವಾಟ್ಸಪ್ಗೆ ಬಂದಿತ್ತು. ಇದನ್ನು ನಂಬಿದ ಅವರು ಹಣ ಹೂಡಿಕೆ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ಅಧಿಕ ಲಾಭಾಂಶ ಗಳಿಸಿರುವುದಾಗಿ ಹೊಸನಗರದ ವ್ಯಕ್ತಿಗೆ ಮಾಹಿತಿ ತಿಳಿಸಲಾಯಿತು.
ಹಣ ನೀಡಲು ಟ್ಯಾಕ್ಸ್..!
ಹಣ ವಿತ್ ಡ್ರಾ ಮಾಡಲು ಮುಂದಾದಾಗ ಸೆಕ್ಯೂರಿಟಿ ಡೆಪಾಸಿಟ್ ಇಡಬೇಕು ಎಂದು ತಿಳಿಸಲಾಯಿತು. ಇದನ್ನು ನಂಬಿದ ಹೊಸನಗರದ ವ್ಯಕ್ತಿ ತನ್ನ ಮತ್ತು ಪತ್ನಿಯ ಹೆಸರಿನ ಬ್ಯಾಂಕ್ ಖಾತೆಯಿಂದ ಮತ್ತಷ್ಟು ಹಣ ವರ್ಗಾಯಿಸಿದ್ದರು. ದಿನಕ್ಕೊಂದು ನೆಪ ಮತ್ತು ಚಾರ್ಜಸ್ ಎಂದು ತಿಳಿಸಿ ಒಟ್ಟು ₹18.27 ಲಕ್ಷ ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.
ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಖಾಸಗಿ ಬಸ್, ಲಾರಿ ಡಿಕ್ಕಿ, ದಂಪತಿ, ಬಸ್ ಚಾಲಕನಿಗೆ ಗಾಯ, ಎಲ್ಲಿ? ಹೇಗಾಯ್ತು ಘಟನೆ?
Gold Silver






