ಶಿವಮೊಗ್ಗ ಲೈವ್‌ನಲ್ಲಿ ಇನ್ಮುಂದೆ ಸುದ್ದಿಯಷ್ಟೇ ಅಲ್ಲ, ಹೊಸ ಕಾಲಂಗಳು ಆರಂಭ, ಏನೆಲ್ಲ ಹೊಸತು ಬರಲಿದೆ?

Daily-Special-in-Shivamogga-Live-News

SHIVAMOGGA LIVE SPECIAL | ಶಿವಮೊಗ್ಗ ಜಿಲ್ಲೆಯ ಸುದ್ದಿಯನ್ನು ಜಗತ್ತಿಗೆ ವಿಸ್ತರಿಸಿದ ಹೆಮ್ಮೆ ನಮ್ಮದು. ಲಕ್ಷ ಲಕ್ಷ ಓದುಗರ ಬೆಂಬಲದಿಂದ ಜಿಲ್ಲೆಯ ನಂಬರ್‌ ಒನ್‌ ವೆಬ್‌ಸೈಟ್‌ ಆಗಿ ಬೆಳೆಯಲು ಸಾಧ್ಯವಾಯಿತು. ಶಿವಮೊಗ್ಗದ ಯಾವುದೇ ಪ್ರಮುಖ ಘಟನೆ, ಸಂಗತಿ ಇದ್ದರು ಜನ ಶಿವಮೊಗ್ಗ ಲೈವ್.ಕಾಂ ವೆಬ್‌ಸೈಟ್‌ನತ್ತ ಕಣ್ಣು ಹಾಯಿಸುತ್ತಾರೆ. ಇದು ನಮಗೆ ಹೆಮ್ಮೆಯ ಸಂಗತಿ. ಇಷ್ಟು ಕಾಲ ಸುದ್ದಿಯನ್ನಷ್ಟೆ ನಿಮ್ಮ ಮುಂದಿಡುತ್ತಿದ್ದ ನಾವು, ಇನ್ಮುಂದೆ ಸುದ್ದಿಯಷ್ಟೇ ಅಲ್ಲ ಎಂಬ ಟ್ಯಾಗ್‌ಲೈನ್‌ ಜೊತೆಗೆ ಒಂದಷ್ಟು ವಿಶೇಷತೆಗಳನ್ನು ಒದಗಿಸಲು ಯೋಜಿಸಿದ್ದೇವೆ. ನಮ್ಮೂರು, … Read more

ರಾತ್ರಿ ಮನೆ ಹೊರಗೆ ಕೇಳಿತು ಜೋರು ಶಬ್ದ, ಬಾಗಿಲು ತೆಗೆದ ಮಾಲೀಕನತ್ತ ತೂರಿಬಂತು ಇಟ್ಟಿಗೆ

Crime-News-General-Image

SHIMOGA, 15 AUGUST 2024 : ನಗರದಲ್ಲಿ ಮನೆಯೊಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ (Stone Pelting). ಬಾಗಿಲು ತೆಗೆದು ನೋಡಲು ಹೋದಾಗ ವೃದ್ಧನ ಮೇಲೆ ಇಟ್ಟಿಗೆ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಶಿವಮೊಗ್ಗದ ಕಾಮಾಕ್ಷಿ ಬೀದಿಯ ರಾಮಣ್ಣ ಎಂಬುವವರ ಮನೆ ಮೇಲೆ ಕಲ್ಲು ತೂರಲಾಗಿದೆ. ಆ.11ರ ರಾತ್ರಿ ರಾಮಣ್ಣ ಅವರು ಊಟ ಮುಗಿಸಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಹೊರಗೆ ಶಬ್ದವಾಗಿದೆ. ರಾಮಣ್ಣ ಮತ್ತು ಅವರ ಪತ್ನಿ ಬಾಗಿಲು ತೆಗೆದಾಗ ಕಿಡಿಗೇಡಿಗಳು ತೂರಿದ ಇಟ್ಟಿಗೆ ರಾಮಣ್ಣ ಅವರ … Read more

ಶಿವಮೊಗ್ಗದ ಸರ್ಕಾರಿ ಕಚೇರಿಗಳು ಜಗಮಗ, ಸಿಟಿ ಸೆಂಟರ್‌ನಲ್ಲಿ ತ್ರಿವರ್ಣ ಅಲಂಕಾರ, ಎಲ್ಲೆಲ್ಲು ಸ್ವಾತಂತ್ರ್ಯ ಸಂಭ್ರಮ

lighting-for-independece-day-kuvempu-rangamandira-and-dc-office

SHIMOGA, 15 AUGUST 2024 : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಿವಮೊಗ್ಗದ ಸರ್ಕಾರಿ ಕಚೇರಿಗಳಿಗೆ ವಿದ್ಯುತ್‌ ದೀಪಾಲಂಕಾರ (Lighting) ಮಾಡಲಾಗಿದೆ. ಇವು ಜನರ ಕಣ್ಸೆಳೆಯುತ್ತಿವೆ. ಜಗಮಗಿಸುತ್ತಿವೆ ಕಚೇರಿಗಳು ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ತಾಲೂಕು ಕಚೇರಿ, ಕುವೆಂಪು ರಂಗಮಂದಿರ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಿಗು ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದಲೇ ಕಚೇರಿಗಳನ್ನು ಅಲಂಕರಿಸಲಾಗಿದೆ. ಸಚಿವರಿಂದ ಇವತ್ತು ಧ್ವಜಾರೋಹಣ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಶಿವಮೊಗ್ಗದ ಡಿಎಆರ್‌ … Read more

ನೆಹರು ಸ್ಟೇಡಿಯಂಗೆ ಮಿನಿಸ್ಟರ್‌ ದಿಢೀರ್‌ ಭೇಟಿ, ಅವ್ಯವಸ್ಥೆ ಕಂಡು ಗರಂ, ಅಧಿಕಾರಿಗಳಿಗೆ 2 ದಿನದ ಡೆಡ್‌ಲೈನ್‌

Minister-Madhu-Bangarappa-sudden-visit-to-Nehru-Stadium

SHIMOGA, 14 AUGUST 2024 : ನಗರದ ನೆಹರು ಕ್ರೀಡಾಂಗಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದಿಢೀರ್‌ ಭೇಟಿ (Sudden Visit) ನೀಡಿದ್ದರು. ಈ ವೇಳೆ ಲೈಟ್‌ ಸೇರಿದಂತೆ ಮೂಲ ಸೌರ್ಕಯ ಇಲ್ಲದಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಇಂದು ಸಂಜೆ ಸಚಿವ ಮಧು ಬಂಗಾರಪ್ಪ ನೆಹರು ಕ್ರೀಡಾಂಗಣಕ್ಕೆ ದಿಢೀರ್‌ ಭೇಟಿ ನೀಡಿದ್ದರು. ಈ ವೇಳೆ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ನೆಹರು ಕ್ರೀಡಾಂಗಣದಲ್ಲಿನ ಮೂಲ ಸೌಕರ್ಯದ ಸಮಸ್ಯೆ ಕುರಿತು ಸಚಿವರ … Read more

ಶಿವಮೊಗ್ಗದಲ್ಲಿ ಜೋರು ಮಳೆ, ವಿವಿಧ ತಾಲೂಕಿನಲ್ಲೂ ವರುಣನ ಅಬ್ಬರ, ಎಲ್ಲೆಲ್ಲಿ ಮಳೆಯಾಗ್ತಿದೆ? ಇಲ್ಲಿದೆ ರಿಪೋರ್ಟ್

Rain-in-Shimoga-city-night.

SHIMOGA, 14 AUGUST 2024 : ಶಿವಮೊಗ್ಗ ನಗರದಲ್ಲಿ ಜೋರು ಮಳೆ (Rain) ಶುರುವಾಗಿದೆ. ದಿಢೀರ್‌ ಮಳೆಯಿಂದಾಗಿ ಜನರು ಸಂಕಷ್ಟಕ್ಕೀಡಾದರು. ವ್ಯಾಪಾರ, ವಹಿವಾಟಿಗು ತೊಂದರೆ ಉಂಟಾಯಿತು. ಬೆಳಗ್ಗೆಯಿಂದ ಜೋರು ಬಿಸಿಲು, ಧಗೆಯಿಂದಾಗಿ ಮಳೆಗಾಲದಲ್ಲು ಬೇಸಿಗೆಯ ಅನುಭವವಾಗಿತ್ತು. ರಾತ್ರಿ 8 ಗಂಟೆ ಹೊತ್ತಿಗೆ ಶಿವಮೊಗ್ಗ ನಗರದಲ್ಲಿ ಜೋರು ಮಳೆಯಾಗುತ್ತಿದೆ. ಹಠಾತ್‌ ಮಳೆಯಿಂದಾಗಿ ಕಚೇರಿಗಳಿಂದ ಮನೆಗೆ ತೆರಳುತ್ತಿರುವವರು, ವ್ಯಾಪಾರ, ವಾಹಿವಾಟು ನಡೆಸುತ್ತಿದ್ದವರಿಗೆ ಸಮಸ್ಯೆ ಉಂಟಾಯಿತು. ಭಾರಿ ಮಳೆ ಹಿನ್ನೆಲೆ ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಿದೆ. ಶಿವಮೊಗ್ಗದ ಸಂತೆ ಕಡೂರು, … Read more

ಶಿವಮೊಗ್ಗ ಹಾಲು ಒಕ್ಕೂಟದ ಚುನಾವಣೆ, ಯಾರೆಲ್ಲ ಎಷ್ಟು ಮತ ಗಳಿಸಿದ್ದಾರೆ? ಯಾರೆಲ್ಲ ಗೆದ್ದಿದ್ದಾರೆ? ಇಲ್ಲಿದೆ ಪಟ್ಟಿ

SHIMUL-Nandini-1.jpg

SHIMOGA, 14 AUGUST 2024 : ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ (Result) ಪ್ರಕಟವಾಗಿದೆ. ಬೆಳಗ್ಗೆ ಮತದಾನ ನಡೆದಿತ್ತು. ಸಂಜೆ ವೇಳೆಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟಿಸಲಾಗಿದೆ. ಶಿವಮೊಗ್ಗ ತಹಶೀಲ್ದಾರ್‌ ಬಿ.ಎನ್.ಗಿರೀಶ್‌ ಅವರು ರಿಟರ್ನಿಂಗ್‌ ಆಫೀಸರ್‌ ಆಗಿದ್ದರು. ಶಿವಮೊಗ್ಗ ವಿಭಾಗ ಅಭ್ಯರ್ಥಿ ತಾಲೂಕು ಪಡೆದ ಮತ ಆನಂದ.ಡಿ ಭದ್ರಾವತಿ 131 ಎಸ್‌.ಕುಮಾರ್‌ ಭದ್ರಾವತಿ 115 ಜಗದೀಶ್‌ ತ್ಯಾಜ್ಯವಳ್ಳಿ ಶಿವಮೊಗ್ಗ 47 ಕೆ.ಎಲ್.ಜಗದೀಶ್ವರ ಶಿವಮೊಗ್ಗ 105 ದಿನೇಶ್‌. ಹೆಚ್.ಬಿ … Read more

BREAKING NEWS – ಶಿವಮೊಗ್ಗ ಹಾಲು ಒಕ್ಕೂಟದ ಚುನಾವಣೆ, ಮತ ಎಣಿಕೆ ಮುಕ್ತಾಯ, ಯಾರೆಲ್ಲ ಗೆದ್ದಿದ್ದಾರೆ?

Shimul-Milk-Dairy-Machenahalli

SHIMOGA, 14 AUGUST 2024 : ಭಾರೀ ಕಾತುರ ಮೂಡಿಸಿದ ಶಿಮುಲ್ ಆಡಳಿತ ಮಂಡಳಿ ನಿರ್ದೇಶಕ ಚುನಾವಣೆ ಫಲಿತಾಂಶ (Result) ಹೊರಬಿದ್ದಿದ್ದು ಹಳೇ ಮುಖಗಳ ಜತೆ ಹೊಸಮುಖಗಳು ಸಹ ಈ ಬಾರಿ ಗೆಲುವು ಸಾಧಿಸಿದ್ದಾರೆ. ಯಾರೆಲ್ಲ ಗೆದ್ದಿದ್ದಾರೆ? ಶಿವಮೊಗ್ಗ ವಿಭಾಗದಿಂದ ಆರ್.ಎಂ.ಮಂಜುನಾಥ್ ಗೌಡ ಅವಿರೋಧ ಆಯ್ಕೆಯಾಗಿದ್ದು, ಭದ್ರಾವತಿಯಿಂದ ಸ್ಪರ್ಧಿಸಿದ್ದ ಶಿಮುಲ್ ಮಾಜಿ ಅಧ್ಯಕ್ಷ ಡಿ.ಆನಂದ್ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ತಾಲೂಕಿನಿಂದ ಸ್ಪರ್ಧಿಸಿದ್ದ ಹೆಚ್.ಬಿ.ದಿನೇಶ್ ಬಹುಮತ ಪಡೆಯುವ ಮೂಲಕ ವಿಜಯಶಾಲಿಯಾಗಿದ್ದಾರೆ. ಸಾಗರ ವಿಭಾಗದಿಂದ ವಿದ್ಯಾಧರ್ ಅವಿರೋಧ … Read more

ಅಡಿಕೆ ಧಾರಣೆ | 14 ಆಗಸ್ಟ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ADIKE-RATE-SHIVAMOGGA-LIVE-NEWS - Areca Price

ADIKE RATE, 14 AUGUST 2024 : ಶಿವಮೊಗ್ಗ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕುಂದಾಪುರ ಮಾರುಕಟ್ಟೆ ಹಳೆ ಚಾಲಿ 40000 47000 ಹೊಸ ಚಾಲಿ 30000 39000 ಕುಮಟ ಮಾರುಕಟ್ಟೆ ಕೋಕ 12019 23989 ಚಿಪ್ಪು 25019 28019 ಫ್ಯಾಕ್ಟರಿ 10189 19129 ಬೆಟ್ಟೆ 30330 37150 ಹಳೆ ಚಾಲಿ 36899 39899 ಹೊಸ ಚಾಲಿ 32269 35299 ಶಿವಮೊಗ್ಗ ಮಾರುಕಟ್ಟೆ ಗೊರಬಲು 16009 34000 ಬೆಟ್ಟೆ 47699 55500 ರಾಶಿ 25000 … Read more

ಪಿಕಪ್‌ ವಾಹನ, ಬೈಕ್‌ ನಡುವೆ ಅಪಘಾತ, ಕೇರಳ ಮೂಲದ ವ್ಯಕ್ತಿ ಸೇರಿ ಇಬ್ಬರು ಸಾವು

bike-and-pickup-mishap-near-bidaragodu-in-thirthahalli

THIRTHAHALLI, 13 AUGUST 2024 : ಪಿಕಪ್‌ ವಾಹನ ಮತ್ತು ಬೈಕ್‌ ನಡುವೆ ಅಪಘಾತ (Mishap) ಸಂಭವಿಸಿ ಇಬ್ಬರು ಯುವಕರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಬಿದರಗೋಡು ಬಳಿ ಅಗಸರಕೋಣೆಯಲ್ಲಿ ಘಟನೆ ಸಂಭವಿಸಿದೆ. ಅಗಸರಕೋಣೆಯ ಶರತ್‌ ಮತ್ತು ಕೇರಳ ಮೂಲದ ಮನೋಜ್‌ ಮೃತರು. ಬೈಕ್‌ ತೀರ್ಥಹಳ್ಳಿ ಕಡೆಗೆ ತೆರಳುತ್ತಿತ್ತು. ಎದುರಿನಿಂದ ಬಂದ ಪಿಕಪ್‌ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್‌ನಲ್ಲಿದ್ದ ಶರತ್‌ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಆಗುಂಬೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಘಟನೆ … Read more

ಅಡಿಕೆ ಧಾರಣೆ | 13 ಆಗಸ್ಟ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

ADIKE RATE, 13 AUGUST 2024 : ಶಿವಮೊಗ್ಗ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 25000 39000 ವೋಲ್ಡ್ ವೆರೈಟಿ 30000 47000 ಇತರೆ ಮಾರುಕಟ್ಟೆ ದಾವಣಗೆರೆ ರಾಶಿ 48931 48931 ಪುತ್ತೂರು ನ್ಯೂ ವೆರೈಟಿ 26500 39000 ಭದ್ರಾವತಿ ರಾಶಿ 33199 49689 ಶಿಕಾರಿಪುರ ರಾಶಿ 35000 35000 ಬಂಟ್ವಾಳ ಮಾರುಕಟ್ಟೆ ಕೋಕ 18000 28500 ನ್ಯೂ ವೆರೈಟಿ 28500 38500 ವೋಲ್ಡ್ ವೆರೈಟಿ 38500 47000 … Read more